ಈ ದೇಶಕ್ಕೆ ಪ್ರವಾಸ ಕೈಗೊಳ್ಳುವುದು ಸುಲಭವಲ್ಲ: ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್

ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳುವುದು ಸುಲಭದ ಮಾತಲ್ಲ ಎಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಮಾತನಾಡಿರುವ ಡೀನ್ ಎಲ್ಗರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಹಾಗಿದ್ದರೂ ದಕ್ಷಿಣ ಆಫ್ರಿಕಾ 0-2 ಅಂತರದಿಂದ ಆಸಿಸ್ ಪಡೆಗೆ ಸರಣಿ ಒಪ್ಪಿಸಿತ್ತು.
"ಈ ಪ್ರವಾಸ ಈ ರೀತಿಯಾಗಿ ಅಂತ್ಯವಾಗಿರುವುದು ಉತ್ತಮ ಸಂಗತಿ. ಆಸ್ಟ್ರೇಲಿಯಾಗೆ ಪ್ರವಾಸಕೈಗೊಳ್ಳುವುದು ಸುಲಭದ ಮಾತಲ್ಲ. ಆದರೆ ಖಂಡಿತವಾಗಿಯೂ ನಮ್ಮ ತಂಡಕ್ಕೆ ಅಂತಿಮ ದಿನಕ್ಕೂ ಮುನ್ನ ಮೈದಾನದಲ್ಲಿ ಕಠಿಣ ಹೋರಾಟ ನಡೆಸುವಂತೆ ಸಂದೇಶ ನೀಡಲಾಗಿತ್ತು. ಇದು ಭವಿಷ್ಯದಲ್ಲಿ ನಮಗೆ ನೆರವಾಗುವ ನಿರೀಕ್ಷೆಯಿದೆ" ಎಂದು ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಡ್ರಾಗೊಂಡ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಪ್ರತಿಕ್ರಿಯೆ ನೀಡಿದ್ದಾರೆ.

ಅನನುಭವಿ ಆಟಗಾರರ ತಂಡ ಎಂದ ಎಲ್ಗರ್
ಮುಂದುವರಿದು ಮಾತನಾಡಿದ ಅವರು ಇದಕ್ಕೂ ಮುನ್ನ ಈ ತಂಡ ಆಸ್ಟ್ರೇಲಿಯಾ ಕಂಡೀಶನ್‌ನಲ್ಲಿ ಆಡಿದ ಅನುಭವ ಹೊಂದಿರಲಿಲ್ಲ. ಈ ಸರಣಿಯ ಮೂಲಕ ಅಲ್ಲಿನ ಪರಿಸ್ಥಿತಿ ಕಲಿಯಲು ಸಾಧ್ಯವಾಗಿದೆ ಎಂದಿದ್ದಾರೆ. "ಇದಕ್ಕೂ ಮುನ್ನ ಈ ತಂಡದ ಕೇವಲ ಮೂರ್ನಾಲ್ಕು ಆಟಗಾರರು ಮಾತ್ರವೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಅನುಭವ ಹೊಂದಿದ್ದರು. ಉಳಿದೆಲ್ಲರು ಕೂಡ ಹೊಸ ಆಟಗಾರರಾಗಿದ್ದಾರೆ. ಹಾಗಾಗಿ ಈ ಸರಣಿಯಲ್ಲಿ ಆಡಿದ ಅನುಭವ ಅವರಿಗೆ ಮುಂದಿನ ಪ್ರವಾಸಗಳಲ್ಲಿ ನೆರವಿಗೆ ಖಂಡಿತವಾಗಿಯೂ ಬರಲಿದೆ" ಎಂದಿದ್ದಾರೆ ಡೀನ್ ಎಲ್ಗರ್.

ಡ್ರಾಗೊಂಡ ಅಂತಿಮ ಪಂದ್ಯ
ಅಂತಿಮ ಪಂದ್ಯಕ್ಕೆ ಮಂದಬೆಳಕು ಹಾಗೂ ಮಳೆ ಅಡ್ಡಿಯಾದ ಕಾರಣ ಹೆಚ್ಚಿನ ಅವಧಿ ಕಡಿತವಾಗಿತ್ತು. ಇನ್ನು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ 475 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡರೆ ಬಳಿಕ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 255 ರನ್‌ಗಳನ್ನು ಮಾತ್ರವೇ ಗಳಿಸಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋಆನ್ ಹೇರಿದ ಆಸಿಸ್ ಬಳಗ ಮತ್ತೊಮ್ಮೆ ಎಲ್ಗರ್ ಬಳಗವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಬಳಿಕ ಐದನೇ ದಿನದಾಟ ಮುಕ್ತಾಯದ ವೇಳೆಗೆ ದಕ್ಷಿಣ ಆಪ್ರಿಕಾ 106 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಪಂದ್ಯ ಡ್ರಾಗೊಂಡಿದೆ.

ಮೊದಲ ಎರಡು ಪಂದ್ಯಗಳಲ್ಲಿ ದ.ಆಫ್ರಿಕಾಗೆ ಸೋಲು
ಇನ್ನು ಇದಕ್ಕೂ ಮುನ್ನ ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 6 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದ್ದರೆ ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸಿಸ್ ಪಡೆ ಇನ್ನಿಂಗ್ಸ್ ಹಾಗೂ 182 ರನ್‌ಗಳ ಅಂತರದಿಂದ ಶರಣಾಗಿತ್ತು.
Ind Vs SL 1st ODI: ಪ್ಲೇಯಿಂಗ್ XI ಆಯ್ಕೆಯೇ ದ್ರಾವಿಡ್, ರೋಹಿತ್ ಶರ್ಮಾಗೆ ತಲೆನೋವು

ಇತ್ತಂಡಗಳ ಆಡುವ ಬಳಗ
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಲ್ಯಾನ್ಸ್ ಮೋರಿಸ್
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಹೆನ್ರಿಚ್ ಕ್ಲಾಸೆನ್, ಟೆಂಬಾ ಬವುಮಾ, ಖಯಾ ಜೊಂಡೋ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ಸೈಮನ್ ಹಾರ್ಮರ್
ಬೆಂಚ್: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಲುಂಗಿ ಎನ್ಗಿಡಿ, ಲಿಜಾಡ್ ವಿಲಿಯಮ್ಸ್, ಜೆರಾಲ್ಡ್ ಕೋಟ್ಜಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications