IND vs SA: ಭಾರತ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ರಬಾಡಗೆ ವಿಶ್ರಾಂತಿ
ಮುಂದಿನ ತಿಂಗಳು ಸೂರ್ಯಕಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಿದೆ. ಪ್ರವಾಸದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೆಂಬರ್ 8 ರಿಂದ 4 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಭಾರತ ವಿರುದ್ಧ ಟಿ20 ಸರಣಿಗೆ ಇದೀಗ ಈ 16 ಸದಸ್ಯರ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ತಂಡದ ಕಮಾಂಡ್ ಅನ್ನು ಐಡೆನ್ ಮಾರ್ಕ್ರಾಮ್ ಅವರ ಕೈಯಲ್ಲಿ ನೀಡಲಾಗಿದೆ. ಸ್ಟಾರ್ ವೇಗದ ಬೌಲರ್‌ಗಳಾದ ಮಾರ್ಕೊ ಜೆನ್ಸನ್ ಮತ್ತು ಜೆರಾಲ್ಡ್ ಕೊಯೆಟ್ಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ಮತ್ತೊರ್ವ ಸ್ಟಾರ್ ವೇಗದ ಬೌಲರ್ ಕಗಿಸೊ ರಬಾಡ ಅವರು ವಿಶ್ರಾಂತಿ ಪಡೆದಿದ್ದು, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಮತ್ತು ಕೇಶವ್ ಮಹಾರಾಜ್ ತಂಡದಲ್ಲಿದ್ದಾರೆ. ಆದರೆ ಲುಂಗಿ ಎನ್ಗಿಡಿ ಅವರು ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗಲು ಅವರನ್ನು ಆಯ್ಕೆ ಮಾಡಿಲ್ಲ.
ಟಿ20 ಸರಣಿಯ ವೇಳಾಪಟ್ಟಿ
ಸರಣಿಯ ಮೊದಲ ಪಂದ್ಯವು ನವೆಂಬರ್ 8 ರಂದು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನಂತರ ಉಭಯ ತಂಡಗಳು ನವೆಂಬರ್ 10 ರಂದು ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಎರಡನೇ ಪಂದ್ಯಕ್ಕಾಗಿ ಗೆಕೆಬರ್ಹಾಗೆ ಪ್ರಯಾಣ ಬೆಳೆಸಲಿವೆ.
ಇದಾದ ನಂತರ, ಸರಣಿಯ ಮೂರನೇ ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯಲಿದೆ. ನವೆಂಬರ್ 15 ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಅಂತಿಮ ನಾಲ್ಕನೇ ಪಂದ್ ನಡೆಯಲಿದೆ.
ದಕ್ಷಿಣ ಆಫ್ರಿಕಾ ತಂಡ
ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೆರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜೆನ್ಸನ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಗರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹಾಲಿ ಮೊಂಗ್ವಾಟರ್. ರಿಯಾನ್ ರಿಕೆಲ್ಟನ್, ಆಂಡಿಲ್ ಸಿಮೆಲೆನ್, ಲುಥೋ ಸಿಪಾಮ್ಲಾ (3ನೇ ಮತ್ತು 4ನೇ ಟಿ20) ಮತ್ತು ಟ್ರಿಸ್ಟಾನ್ ಸ್ಟಬ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications