ಜೂನ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ದಕ್ಷಿಣ ಆಫ್ರಿಕಾದ ಪ್ರವಾಸ: ಸ್ಮಿತ್

ಜೋಹಾನ್ಸ್‌ಬರ್ಗ್: ಭಾರತದಲ್ಲಿ ನಡೆಸಲುದ್ದೇಶಿಸಿರುವ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮುಂದಿನ ಜೂನ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಫೆಡರೇಶನ್ ಈ ಸಂಗತಿಯನ್ನು ಗುರುವಾರ (ಮೇ 6) ಘೋಷಿಸಿದೆ.
ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ತಂಡ ಜೂನ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳು ಮತ್ತು ಐದು ಟಿ20ಐ ಪಂದ್ಯಗಳನ್ನಾಡಲಿದೆ. ಜೂನ್ ಮೊದಲ ವಾರದಲ್ಲೇ ಪ್ರವಾಸ ಸರಣಿ ಆರಂಭಗೊಳ್ಳಲಿದ್ದು, ತಾಣಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ವೈಟ್‌ಬಾಲ್ ಆಟಗಾರರು ವೆಸ್ಟ್ ಇಂಡೀಸ್‌ನಿಂದ ನೇರವಾಗಿ ಐರ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಸರಣಿ ಜುಲೈನಲ್ಲಿ ಆರಂಭಗೊಳ್ಳಲಿದೆ. ಅದಾಗಿ ವೈಟ್ ಬಾಲ್ ತಂಡದ ಆಟಗಾರರು ಶ್ರೀಲಂಕಾ ಮತ್ತು ಭಾರತಕ್ಕೆ ಪ್ರವಾಸ ಬರಲಿದ್ದಾರೆ. ಹಾಗೆ ಬಂದವರು ಇಲ್ಲೇ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
2021ರ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಸಲು ಉದ್ದೇಶಿಸಲಾಗಿದೆಯಾದರೂ ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಟೂರ್ನಿಯ ಆತಿಥ್ಯ ಭಾರತವೇ ಉಳಿಸಿಕೊಂಡು ಟೂರ್ನಿಯನ್ನು ಯುನೈಟೆಡ್ ಅರಬ್‌ಗೆ ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications