ಚೆಂಡು ವಿರೂಪ ಪ್ರಕರಣ: ನಾಯಕ ಸ್ಮಿತ್, ಉಪನಾಯಕ ವಾರ್ನರ್ ತಲೆದಂಡ

ಕೇಪ್ ಟೌನ್, ಮಾರ್ಚ್ 25: ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ, ಉಪ ನಾಯಕನ ತಲೆದಂಡವಾಗಿದೆ.ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಬ್ಯಾನ್ಕ್ರೋಫ್ಟ್ ಚೆಂಡು ವಿರೂಪಗೊಳಿಸಿರುವುದು ದೃಢಪಟ್ಟಿತ್ತು, ಸ್ಮಿತ್ ಕೂಡಾ ಈ ಘಟನೆ ನಡೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದರು.
ಈಗ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆ ಮೇರೆಗೆ ಆಸ್ಟ್ರೇಲಿಯಾ ಸರ್ಕಾರದ ಕ್ರೀಡಾ ಸಮಿತಿ(ಎಎಸ್ ಸಿ) ನಿರ್ದೇಶನದಂತೆ ಇಬ್ಬರು ಆಟಾಗರರು ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಪಂದ್ಯ ಉಳಿದ ಅವಧಿಗೆ ಟಿಮ್ ಪೈನ್ ತಾತ್ಕಾಲಿಕ ನಾಯಕರಾಗಿ ಆಯ್ಕೆಯಾಗಿದ್ದಾರೆ.ಸ್ಮಿತ್ ಹಾಗೂ ವಾರ್ನರ್ ಸ್ಥಾನ ತೊರೆದಿದ್ದರೂ, ಕೋಚ್ ಡರೇನ್ ಲೆಹ್ಮನ್ ಹಾಗೂ ಆಟಗಾರ ಬ್ಯಾನ್ ಕ್ರಾಫ್ಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2018ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ವಾರ್ನರ್ ಹಾಗೂ ರಾಜಸ್ಥಾನ ರಾಯಲ್ಸ್ ಪರ ಸ್ಟೀವ್ ಸ್ಮಿತ್ ಆಡಲಿದ್ದು, ಈ ಬಗ್ಗೆ ಆ ಫ್ರಾಂಚೈಸಿಗಳು ಸದ್ಯದಲ್ಲೇ ನಿರ್ಧಾರ ಕೈಗೊಂಡು ಪ್ರಕಟಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications