ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ ಮೊದಲನೇ ಏಕದಿನ ಪಂದ್ಯ ಮುಂದಕ್ಕೆ

ಕೇಪ್‌ಟೌನ್: ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಏಕದಿನ ಪಂದ್ಯ ಮುಂದೂಡಲ್ಪಟ್ಟಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಡಿಸೆಂಬರ್ 4ರ ಶುಕ್ರವಾರ ಏಕದಿನ ಪಂದ್ಯವನ್ನಾಡುವುದರಲ್ಲಿತ್ತು. ಆದರೆ ಈ ಉದ್ದೇಶಿತ ಪಂದ್ಯ ಮುಂದೂಡಲ್ಪಟ್ಟಿದೆ.
ಆತಿಥೇಯ ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರನಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದ್ದರಿಂದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದ್ದ ಪಂದ್ಯ ಮುಂದೂಡಲ್ಪಟ್ಟಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಇದನ್ನು ಟ್ವಿಟರ್ ಮೂಲಕ ಖಾತರಿಪಡಿಸಿದೆ.
'ಎರಡೂ ತಂಡಗಳು, ಪಂದ್ಯದ ಅಧಿಕಾರಿಗಳು ಎಲ್ಲರ ಸುರಕ್ಷೆಯ ದೃಷ್ಟಿಯಿಂದ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮೊದಲನೇ ಏಕದಿನ ಪಂದ್ಯ ಮುಂದೂಡಲಾಗಿದೆ' ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಹಂಗಾಮಿ ಸಿಇಒಕುಗಾಂಡ್ರಿ ಗೋವೆಂದರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಸಿಇಒ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಸಿಇಒ ಟಾಮ್ ಹ್ಯಾರಿಸನ್ ಇಬ್ಬರೂ ಪಂದ್ಯವನ್ನು ಮುಂದೂಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಡಿಸೆಂಬರ್ 4ರಂದು ನಡೆಯಲಿದ್ದ ಈ ಪಂದ್ಯ ಡಿಸೆಂಬರ್ 6ರ ಭಾನುವಾರಕ್ಕೆ ಮುಂದೂಡಲ್ಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications