For Quick Alerts
ALLOW NOTIFICATIONS  
For Daily Alerts
 

ಪ್ರಥಮ ಟಿ20 ಪಂದ್ಯ : ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡಿಗೆ ಜಯ

South Africa vs England, 1st T20I, cap town, Live score

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ದಕ್ಷಿಣ ಆಫ್ರಿಕಾ ಆತಿಥ್ಯವನ್ನು ವಹಿಸಿಕೊಂಡಿರುವ ಈ ಸರಣಿಯ ಈ ಟಿ20 ಪಂದ್ಯ ಕೇಪ್‌ಟೌನ್‌ನಲ್ಲಿ ನಡೆಯುತ್ತಿದೆ.

ಟಾಸ್ ಗೆದ್ದಿರುವ ಪ್ರವಾಸಿ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 179/6 ಸ್ಕೋರ್ ಮಾಡಿತು. ಆಫ್ರಿಕಾ ಪರ ಫಾಫ್ ಡುಪ್ಲೆಸಿಸ್ 50, ಡಿಕಾಕ್ 30 ರನ್ ಗಳಿಸಿದರು.

ರನ್ ಚೇಸ್ ಮಾಡಿದ ಇಂಗ್ಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಜಾನಿ ಬೈರ್ಸ್ಟೋ 48 ಎಸೆತಗಳಲ್ಲಿ 86ರನ್ (9ಬೌಂಡರಿ, 4ಸಿಕ್ಸರ್) ಚೆಚ್ಚಿ, ತಂಡಕ್ಕೆ ಜಯ ತಂದಿತ್ತರು.

ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಸ್ತಬ್ಧವಾದ ಬಳಿಕ ಇಂಗ್ಲೆಂಡ್‌ನಿಂದಲೇ ಮತ್ತೆ ಟೂರ್ನಿಗೆ ಚಾಲನೆ ದೊರೆಯಿತು. ಅದಾದ ಬಳಿಕ ಇಂಗ್ಲೆಂಡ್ ಹಲವು ಟೂರ್ನಿಗಳನ್ನು ಆಯೋಜನೆ ಮಾಡಿದೆ. ಈಗ ಇಂಗ್ಲೆಂಡ್ ದಕ್ಷಿಣ ಆಫ್ರಿಕಾಗೆ ಪ್ರವಾಸವನ್ನು ಕೈಗೊಂಡಿದೆ. ಈ ಮೂಲಕ ಆಫ್ರಿಕಾ ನೆಲದಲ್ಲಿ ತನ್ನ ಅದೃಷ್ಟಪರೀಕ್ಷೆಗೆ ಇಳಿದಿದೆ.

Live ಸ್ಕೋರ್ ಪಟ್ಟಿ ಹೀಗಿದೆ:

1
49593

ದಕ್ಷಿಣ ಆಫ್ರಿಕಾ ಆಡುವ ಬಳಗ: ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ನಾಯಕ ಮತ್ತು ವಿಕೆಟ್ ಕೀಪರ್), ಫಾಫ್ ಡು ಪ್ಲೆಸಿಸ್, ರಾಸ್ಸಿ ವಾನ್ ಡೆರ್ ಡುಸೆನ್, ಹೆನ್ರಿಕ್ ಕ್ಲಾಸೆನ್, ಪೈಟ್ ವ್ಯಾನ್ ಬಿಲ್ಜಾನ್, ಜಾರ್ಜ್ ಲಿಂಡೆ, ಬ್ಯೂರನ್ ಹೆಂಡ್ರಿಕ್ಸ್, ಕಗಿಸೊ ರಬಾಡಾ, ಲುಂಗಿ ಎನ್‌ಜಿಡಿ, ತಬ್ರೈಜ್ ಶಮ್ಸಿ

ಇಂಗ್ಲೆಂಡ್ ಆಡುವ ಬಳಗ: ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ರಾಯ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಇಯೊನ್ ಮೋರ್ಗಾನ್ (ನಾಯಕ), ಸ್ಯಾಮ್ ಕರ್ರನ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್

Story first published: Saturday, November 28, 2020, 1:19 [IST]
Other articles published on Nov 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+