For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ ರದ್ದು ಸಾಧ್ಯತೆ

South Africa vs England: Covid-19 Issues in ODI Match

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಕೇಪ್‌ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಆತಿಥೇಯರ ವಿರುದ್ಧ ಡಿಸೆಂಬರ್ 4ರ ಶುಕ್ರವಾರ ಮೊದಲ ಏಕದಿನ ಪಂದ್ಯವನ್ನಾಡುವುದರಲ್ಲಿದೆ. ಆದರೆ ಈ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ.

ಯಾವ ಕಾರಣಕ್ಕೆ ಪಂದ್ಯ ರದ್ದಾಗುವುದರಲ್ಲಿದೆ ಅನ್ನೋದು ಸ್ಪಷ್ಟಗೊಂಡಿಲ್ಲ. ಆದರೆ ಕೊರೊನಾವೈರಸ್ ಕಾರಣ ಇತ್ತಂಡಗಳ ಇಂದಿನ ಪಂದ್ಯ ರದ್ದೆನಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ಕ್ರಿಕೆಟ್ ಪತ್ರಕರ್ತ ಜಾರ್ಜ್ ಡೋಬೆಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 4ರಂದು ಟ್ವೀಟ್ ಮಾಡಿರುವ ಜಾರ್ಜ್ ಡೋಬೆಲ್, 'ಕೇಪ್‌ಟೌನ್‌ನಲ್ಲಿ ನಡೆಯಲಿರುವ ಇಂದಿನ ಪಂದ್ಯ ರದ್ದಾಗುವ ಭೀತಿಯಲ್ಲಿದೆ' ಎಂದು ಆರಂಭದಲ್ಲಿ ಬರೆದುಕೊಂಡಿದ್ದರು. ಆ ಬಳಿಕ ಮತ್ತೊಂದು ಟ್ವೀಟ್‌ನಲ್ಲಿ 'ಇಂಗ್ಲೆಂಡ್ ತಂಡ ತಾನು ತಂಗಿದ್ದ ಹೋಟೆಲ್‌ಗೆ ವಾಪಸ್ಸಾಗಿದೆ. ಪಂದ್ಯ ರದ್ದಾಗುವ ಭೀತಿ ನನ್ನನ್ನು ಕಾಡುತ್ತಿದೆ' ಎಂದು ಬರೆದುಕೊಂಡಿದ್ದರು.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಈಗಾಗಲೇ ಮೂರು ಪಂದ್ಯಗಳ ಟಿ20ಯಲ್ಲಿ 3-0ಯ ಜಯ ಗಳಿಸಿದೆ. ಇನ್ನು ಮೂರು ಪಂದ್ಯಗಳ ಏಕದಿನ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಮೊದಲ ಏಕದಿನ ಪಂದ್ಯ ಡಿಸೆಂಬರ್ 4ರಂದು ಭಾರತೀಯ ಕಾಲಮಾನ 4:30 PMಗೆ ಆರಂಭಗೊಳ್ಳುವುದರಲ್ಲಿತ್ತು.

Story first published: Friday, December 4, 2020, 15:51 [IST]
Other articles published on Dec 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+