Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ದಕ್ಷಿಣ ಆಫ್ರಿಕಾ: 3ನೇ ಟೆಸ್ಟ್‌ನಿಂದ ಐಡೆನ್ ಮಾರ್ಕ್ರಮ್ ಹೊರಕ್ಕೆ

South Africa vs India: Aiden Markram ruled out of 3rd Test at Ranchi

ರಾಂಚಿ, ಅಕ್ಟೋಬರ್ 17: ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿರುವ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪ್ರೋಟಿಯಾಸ್ ಆರಂಭಿಕ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಮ್ ಗಾಯಗೊಂಡು 3ನೇ ಟೆಸ್ಟ್‌ನಿಂದ ತಂಡದಿಂದ ಹೊರ ಬಿದ್ದಿದ್ದಾರೆ.

ಪುಣೆಯಲ್ಲಿ ನಡೆದಿದ್ದ ಭಾರತ vs ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್‌ ವೇಳೆ ಮಾರ್ಕ್ರಮ್ ಗಾಯಕ್ಕೀಡಾಗಿದ್ದರು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಗುರುವಾರ (ಅಕ್ಟೋಬರ್ 17) ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ಆಫ್ರಿಕಾ ಪರ ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಮಾರ್ಕ್ರಮ್ 5, 39, 0, 0 ರನ್ ಗಳಿಸಿದ್ದರು.

'ಸಿಟಿ ಸ್ಕ್ಯಾನ್‌ನಲ್ಲಿ ಮಾರ್ಕ್ರಮ್ ಅವರ ಮಣಿಕಟ್ಟಿನಲ್ಲಿ ಮುರಿತ ಕಂಡು ಬಂದಿದೆ. ಹೀಗಾಗಿ ಭಾರತ ವಿರುದ್ಧದ ಮುಂದಿನ ಟೆಸ್ಟ್‌ನಿಂದ ಮಾರ್ಕ್ರಮ್ ಅವರನ್ನು ವೈದ್ಯಕೀಯ ತಂಡ ಹೊರಗಿಟ್ಟಿದೆ,' ಎಂದು ದಕ್ಷಿಣ ಆಫ್ರಿಕಾ ತಂಡದ ಡಾಕ್ಟರ್ ಹರ್ಷೇಂದ್ರ ರಾಮ್‌ಜೀ ಹೇಳಿದ್ದಾರೆ.

ಐಡೆನ್ ಮಾರ್ಕ್ರಮ್ ಬದಲು ಬೇರೆ ಆಟಗಾರನನ್ನು ಹೆಸರಿಸದಿರಲು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಮೊದಲೆರಡು ಟೆಸ್ಟ್‌ಗಳಲ್ಲಿ ಸುಲಭ ಜಯ ಸಾಧಿಸಿರುವ ಭಾರತ ಸರಣಿಯಲ್ಲಿ 2-0ಯ ಮುನ್ನಡೆಯಲ್ಲಿದೆ. ಕೊನೆಯ ಟೆಸ್ಟ್ ಪಂದ್ಯ ಅಕ್ಟೋಬರ್ 19ರಂದು ನಡೆಯಲಿದೆ.

Story first published: Thursday, October 17, 2019, 17:05 [IST]
Other articles published on Oct 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+