ಡೀನ್ ಎಲ್ಗರ್ ಶತಕ, ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸುಲಭ ಜಯ

ಜೋಹಾನ್ಸ್‌ಬರ್ಗ್: ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 10 ವಿಕೆಟ್ ಸುಲಭ ಜಯ ಗಳಿಸಿದೆ. ಡೀನ್ ಎಲ್ಗರ್ ಅವರ ಆಕರ್ಷಕ ಶತಕದೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಫ್ರಿಕಾ 2-0ಯಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ, ಕುಸಾಲ್ ಪೆರೆರಾ 60, ಲಹಿರು ತಿರುಮನ್ನೆ 17, ವನಿಂದು ಹಸರಂಗ 29, ದುಶ್ಮಂತ ಚಮೀರ 22 ರನ್‌ನೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 40.3 ಓವರ್‌ಗೆ 157 ರನ್ ಗಳಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ, ಡೀನ್ ಎಲ್ಗರ್ 127, ರಾಸ್ಸಿ ವ್ಯಾನ್ ಡೆರ್ ಡುಸೆನ್ 67 ರನ್‌ನೊಂದಿಗೆ 75.4 ಓವರ್‌ಗೆ 302 ರನ್ ಗಳಿಸಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದಿಂದ ನಾಯಕ ದಿಮುತ್ ಕರುಣರತ್ನೆ 103, ಲಹಿರು ತಿರುಮನ್ನೆ 31, ನಿರೋಶ ಡಿಕ್ವೆಲ್ಲ 36 ರನ್‌ನೊಂದಿಗೆ 56.5 ಓವರ್‌ಗೆ 211 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ತಂಡ ಐಡನ್ ಮಾರ್ಕ್ರಮ್ ಅಜೇಯ 36, ಡೀನ್ ಎಲ್ಗರ್ 31 ರನ್‌ನೊಂದಿಗೆ 13.2ನೇ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 67 ರನ್ ಬಾರಿಸಿ 10 ವಿಕೆಟ್ ಗೆಲುವನ್ನಾಚರಿಸಿತು.
ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಅನ್ರಿಕ್ ನಾಟ್ಜ್ 6+2, ಲುಥೋ ಸಿಪಮ್ಲಾ 1+3, ವಿಯಾನ್ ಮುಲ್ಡರ್ 3+1, ಲುಂಗಿ ಎನ್‌ಗಿಡಿ 4 ವಿಕೆಟ್ ಪಡೆದರೆ, ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ವಿಶ್ವ ಫೆರ್ನಾಂಡೋ 5, ಅಶಿತಾ ಫೆರ್ನಾಂಡೋ 2, ದುಶಂತ ಚಮೀರ 1, ದಾಸುನು ಶನಕಾ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಡೀನ್ ಎಲ್ಗರ್ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications