ಮತ್ತೆ ರಾಷ್ಟ್ರೀಯ ತಂಡದ ಪರ ಆಡಲಿದ್ದಾರಾ ಆರ್‌ಸಿಬಿ ನಾಯಕ?: ಕುತೂಹಲ ಕೆರಳಿಸಿದೆ ದ. ಆಫ್ರಿಕಾ ಕೋಚ್ ಮಾತು

ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿಸ್ ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದಾರೆ. 2021ರ ಫೆಬ್ರವರಿ ಬಳಿಕ ಫಾಫ್ ದಕ್ಷಿಣ ಆಪ್ರಿಕಾ ತಂಡವ್ನು ಯಾವುದೇ ಮಾದರಿಯಲ್ಲಿಯೂ ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿಲ್ಲ. ಐಪಿಎಲ್ ಸೇರಿದಂತೆ ನಾಏಕ ಲೀಗ್ ಕ್ರಿಕೆಟ್‌ಗಳಲ್ಲಿ ಅಬ್ಬರಿಸುತ್ತಿದ್ದರೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಫಾಫ್ ಅವರನ್ನು ಕಡೆಗಣಿಸುತ್ತಲೇ ಬಂದಿತ್ತು. ಆದರೆ ಈಗ ಫಾಫ್ ಡು ಪ್ಲೆಸಿಸ್ ಅವರನ್ನು ಮತ್ತೆ ತಂಡದಲ್ಲಿ ಸೇರ್ಪಡೆಗೊಳಿಸಿವ ಬಗ್ಗೆ ಮಾತುಗಳು ಕೇಳಿಬರತೊಡಗಿದೆ.
ದಕ್ಷಿಣ ಆಫ್ರಿಕಾ ವೈಟ್‌ಬಾಲ್ ತಂಡಕ್ಕೆ ನೂತನ ಕೋಚ್ ಆಗಿ ರಾಬ್ ವಾಲ್ಟರ್ ಅವರನ್ನು ಇತ್ತೀಚೆಗಷ್ಟೇ ನೇಮಿಸಲಾಗಿದೆ. ಈ ಸಂದರ್ಭದಲ್ಲಿ ವಾಲ್ಟರ್ ಫಾಫ್ ಡು ಪ್ಲೆಸಿಸ್ ರೀತಿಯ ವಿಶ್ವದರ್ಜೆಯ ಆಟಗಾರರ ಅಗತ್ಯ ದಕ್ಷಿಣ ಆಫ್ರಿಕಾ ತಂಡಕ್ಕೆ ಇದೆ ಎಂದಿದ್ದು ಫಾಫ್‌ಗೆ ತಂಡದ ಬಾಗಿಲು ತೆರೆದಿದೆ ಎಂದಿದ್ದಾರೆ. ಈ ಮೂಲಕ ಫಾಫ್ ಡು ಪ್ಲೆಸಿಸ್ ಮತ್ತೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುವ ಸೂಚನೆಗಳು ದೊರೆತಿದೆ.

ಐಪಿಎಲ್ ಸೇರಿದಂತೆ ಲೀಗ್ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಫಾಫ್
ಫಾಫ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆಡದಿದ್ದರೂ ಪ್ರಾಂಚೈಸಿ ಕ್ರಿಕೆಟ್‌ನಲ್ಲಿ ಅತ್ಯಂತ ಸಕ್ರಿಯವಾಗಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಚರ್ಸ್ ತಂಡದ ನಾಯಕನಾಗಿ ಮುನ್ನಡೆಸುತ್ತಿರುವ ಫಾಫ್ ಡು ಪ್ಲೆಸಿಸ್ ಎಸ್‌ಎ20, ಬಿಗ್‌ಬ್ಯಾಷ್ ಲೀಗ್ ಸೇರಿದಂತೆ ಹಲವು ಪ್ರಮುಖ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ ಫಾಫ್ ಡು ಪ್ಲೆಸಿಸ್ ಅವರಿಗೆ ಮತ್ತೆ ತಂಡದಲ್ಲಿ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬರತೊಡಗಿದ್ದವು.

ಫಾಫ್ ಜೊತೆ ಮಾತುಕತೆ ನಡೆಸುವ ಸುಳಿವು ನೀಡಿದ ದ. ಆಫ್ರಿಕಾ ಕೋಚ್
ದಕ್ಷಿಣ ಆಫ್ರಿಕಾದ ಪತ್ರಿಕೆಯೊಂದರ ಜೊತೆಗೆ ಮಾತನಾಡಿರುವ ದ. ಆಪ್ರಿಕಾ ತಂಡದ ನೂತನ ವೈಟ್‌ಬಾಲ್ ಕೋಚ್ ರಾಬ್ ವಾಲ್ಟರ್ ಫಾಫ್ ಡು ಪ್ಲೆಸಿಸ್ ವೈಟ್‌ಬಾಲ್ ತಂಡಕ್ಕೆ ವಾಪಾಸಾಗುವ ಕುರಿತಾಗಿ ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಫಾಫ್ ನಿವೃತ್ತಿ ಘೋಷಿಸಿದ್ದರೂ ಚುಟುಕು ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ ಎಂದಿದ್ದು ಅವರೊಂದಿಗೆ ಈವರೆಗೆ ಈ ಕುರಿಯಾಗಿ ಚರ್ಚಿಸಿಲ್ಲ. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಮತ್ತೆ ಆಡಲು ಫಾಫ್ ಮುಕ್ತವಾಗಿದ್ದರೆ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದಿದ್ದಾರೆ.

ಫಾಫ್ ಡು ಪ್ಲೆಸಿಸ್ ಬಗ್ಗೆ ರಾಬ್ ವಾಲ್ಟರ್ ಪ್ರಶಂಸೆಯ ಮಾತು
ರಾಬ್ ವಾಲ್ಟರ್ ದಕ್ಷಿಣ ಆಫ್ರಿಕಾ ಮಾಜಿ ನಾಯಕನೂ ಆಗಿರುವ ಫಾಫ್ ಡು ಪ್ಲೆಸಿಸ್ ಅವರ ಸಾಮರ್ಥ್ಯದ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. "ಫಾಫ್ ಓರ್ವ ಗುಣಮಟ್ಟದ ಆಟಗಾರ. ನೀವು ದಕ್ಷಿಣ ಆಫ್ರಿಕಾ ತಂಡದಲ್ಲಿ ಉತ್ಕೃಷ್ಟ ಗುಣಮಟ್ಟದ ಆಟಗಾರರನ್ನು ಹೊಂದಲು ಬಯಸಿದ್ದರೆ ಫಾಫ್ ಡು ಪ್ಲೆಸಿಸ್ ಅವರಲ್ಲಿ ಒಬ್ಬರಾಗಿದ್ದಾರೆ. ಹಾಗಂತ ಫಾಫ್ ಭವಿಷ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆಡುತ್ತಾರೆಯಾ ಎಂಬ ಪ್ರಶ್ನೆಗೆ ನನ್ನ ಬಳಿ ಈಗ ಉತ್ತರವಿಲ್ಲ" ಎಂದಿದ್ದಾರೆ ರಾಬ್ ವಾಲ್ಟರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications