Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA T20: ಹಾರ್ದಿಕ್ ಅರ್ಧಶತಕ: ದಕ್ಷಿಣ ಆಫ್ರಿಕಾಕ್ಕೆ 176 ರನ್‌ ಗುರಿ ನೀಡಿದ ಭಾರತ

ಕಟಕ್‌: ಟಾಪ್‌ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರೂ, ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬಾರಿಸಿದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ 176 ರನ್‌ಗಳ ಟಾರ್ಗೆಟ್‌ನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಶುಭಮನ್‌ ಗಿಲ್‌ ಬಹು ದಿನಗಳ ಬಳಿಕ ಅಂಗಳಕ್ಕೆ ಇಳಿದರೂ ಸಹ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಇವರು ಲುಂಗಿ ಎನ್‌ಗಿಡಿ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿ, ನಂತರದ ಎಸೆತದಲ್ಲಿ ಮತ್ತೊಂದು ಬಿಗ್ ಹಿಟ್ ಬಾರಿಸಲು ಹೋಗಿ ಮಿಡ್‌ ಆಫ್‌ನಲ್ಲಿ ಮಾರ್ಕೊ ಜಾನ್ಸನ್‌ಗೆ ಕ್ಯಾಚ್ ನೀಡಿದರು. ಇವರ ಆಟ 4 ರನ್‌ಗಳಿಗೆ ಕೊನೆಯಾಯಿತು.

South Africa Win Toss Opt to Bowl India s Innings Report - Key Highlights and Scorecard

ಉಪನಾಯಕ ಶುಭಮನ್‌ ಗಿಲ್ ಔಟ್ ಆಗುತ್ತಿದ್ದಂತೆ, ಕ್ರೀಸ್‌ ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಒಳ್ಳೆಯ ಟಚ್‌ನಲ್ಲಿ ಕಾಣಿಸಿಕೊಂಡರು. ಆರಂಭದಲ್ಲಿ ಕೊಂಚ ನಿಧಾನವಾಗಿ ಆಡಿದ ಸೂರ್ಯ, 1 ಬೌಂಡರಿ, 1 ಸಿಕ್ಸರ್ ಬಾರಿಸಿ ನೈಜ ಆಟವನ್ನು ಆಡುವ ಭರವಸೆ ಮೂಡಿಸಿದರು. ಆದರೆ ಸೂರ್ಯ (12) ಸಹ ಒಂದು ಸಿಕ್ಸರ್ ಬಾರಿಸಿ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ಲುಂಗಿ ಎನ್‌ಗಿಡೆಗೆ ವಿಕೆಟ್‌ ಒಪ್ಪಿಸಿದರು.

ಒಂದು ಕಡೆ ವಿಕೆಟ್‌ ಬೀಳುತ್ತಾ ಇದ್ದರೂ ಸಹ ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆಯನ್ನು ನೀಡಿದ ಅಭಿಷೇಕ್‌ ಶರ್ಮಾ ಸಹ ತಾವು ಎದುರಿಸಿದ 12ನೇ ಎಸೆತದಲ್ಲಿ ತಾಳ್ಮೆ ಕಳೆದುಕೊಂಡರು. ಲುಥೋ ಸಿಪಾಮ್ಲಾ ಎಸೆತವನ್ನು ಸಿಕ್ಸರ್‌ ಬಾರಿಸಲು ಹೋಗಿ ಮಾರ್ಕೊ ಜಾನ್ಸನ್‌ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಇವರು 2 ಬೌಂಡರಿ, 1 ಸಿಕ್ಸರ್ ಸೇರಿದಂತೆ 17 ರನ್‌ ಬಾರಿಸಿದ್ದರು.

48 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ತಿಲಕ್‌ ವರ್ಮಾ ಹಾಗೂ ಅಕ್ಷರ್ ಪಟೇಲ್ ಜೋಡಿ ಕೊಂಚ ಆಧಾರವಾಯಿತು. ಈ ಜೊಡಿ 30 ರನ್‌ಗಳ ಜೊತೆಯಾಟವನ್ನು ಸೇರಿಸಲಷ್ಟೇ ಶಕ್ತವಾಯಿತು. ಈ ವೇಳೆ ತಿಲಕ್‌ ಸಹ ರನ್‌ ರೇಟ್‌ ಹಿಗ್ಗಿಸಲು ಮುಂದಾಗಿ ಲುಂಗಿ ಎನ್‌ಗಿಡಿಗೆ ವಿಕೆಟ್‌ ಒಪ್ಪಿಸಿದರು. ಇವರು 32 ಎಸೆತಗಳಲ್ಲಿ 26 ರನ್‌ ಸಿಡಿಸಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಅಕ್ಷರ್‌ ಪಟೇಲ್‌ 21 ಎಸೆತಗಳಲ್ಲಿ 23 ರನ್ ಬಾರಿಸಿ ಔಟ್ ಆದರು.

ಹಾರ್ದಿಕ್ ಪಾಂಡ್ಯ ಅರ್ಧಶತಕ

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರಿಸಿದರು. ಇವರು 28 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 59 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 210ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಮಾಡಿದರು.

Story first published: Tuesday, December 9, 2025, 20:21 [IST]
Other articles published on Dec 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+