ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ ಸೆಲ್ಫ್ ಐಸೋಲೇಶನ್‌ಗೆ ಸೂಚನೆ

ಟೀಮ್ ಇಂಡಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡ ಸರಣಿ ರದ್ದಾದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಸ್ಸಾಗಿದೆ. ಆದರೆ ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಸ್ವಯಂ ಪ್ರತ್ಯೇಕಗೊಂಡಿರುವಂತೆ ಸೂಚನೆಯನ್ನು ನೀಡಲಾಗಿದೆ.
ಕೊರೊನಾ ವೈರಸ್ ಭೀತಿಯಿಂದ ಸರಣಿಯನ್ನು ಬಿಸಿಸಿಐ ಅರ್ಧಕ್ಕೆ ಮೊಟಕುಗೊಳಿಸಿತು. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಗೆ ಮರಳಿದ ಕ್ರಿಕೆಟ್ ಆಟಗಾರರಿಗೆ ವಿಶೇಷ ಸೂಚನೆಯನ್ನು ನೀಡಲಾಗಿದೆ. ದಕ್ಷಿ ಆಫ್ರಿಕಾದ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿರುವ ಡಾ.ಶೂಯೈಬ್ ಮಂಜ್ರಾ ಈ ಸೂಚನೆಯನ್ನು ನೀಡಿದ್ದು ಆಫ್ರಿಕಾ ಕ್ರಿಕೆಟಿಗರು 14 ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿರಬೇಕಾಗುತ್ತದೆ.
ಮುಖ್ಯ ವೈದ್ಯಕೀಯ ಅಧಿಕಾರಿಯ ಹೇಳಿಕೆಯು ಮಾಧ್ಯಮಗಳು ವರದಿ ಮಾಡಿದೆ. "ಕ್ರಿಕೆಟ್ ಆಟಗಾರರಿಗೆ ಮುಂದಿನ 14 ದಿನಗಳ ಕಾಲ ಸ್ವಯಂ ಪ್ರತ್ಯೇಕ ಕೊಠಡಿಯಲ್ಲಿರುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ ಡಾ.ಶೂಯೈಬ್ ಮಂಜ್ರಾ.
ಇದು ಆಟಗಾರರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು, ತಮ್ಮ ಸುತ್ತಮುತ್ತಲಿನವರ ರಕ್ಷಣೆಗಾಗಿ, ಕುಟುಂಬಸ್ಥರ ರಕ್ಷಣೆಗಾಗಿ ಮತ್ತು ಸಮುದಾಯದ ರಕ್ಷಣೆಗಾಗಿ ಅನಿವಾರ್ಯ ಕ್ರಮ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಶೂಯೈಬ್ ಮಂಜ್ರಾ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಹದಿನಾಲ್ಕು ದಿನಗಳ ಅವಧಿಯಲ್ಲಿ ಆಟಗಾರರಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಬೇರೇನಾದರು ಆರೋಗ್ಯದಲ್ಲಿ ವ್ಯತ್ಯಾಸಗಳು ಎನಿಸಿದಲ್ಲಿ ಅಂತವರಿಗೆ ತಕ್ಷಣವೇ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಸೂಕ್ತ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೂ ಮಂಜ್ರಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications