ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ : ಚಿಂದಿ ಉಡಾಯಿಸಿದ ರಬಾಡಾ
ಮಿರ್ ಪುರ್, ಜು. 11: ಪಾದಾರ್ಪಣೆ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ರಬಾಡಾ ದಾಖಲೆ ಬರೆದಿದ್ದಾರೆ.
20 ವರ್ಷದ ಎಡಗೈ ವೇಗಿ ಎಂಟು ಓವರ್ ಎಸೆದು 16 ರನ್ ಗೆ 6 ವಿಕೆಟ್ ಕಿತ್ತರು. ಮಳೆ ಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ರಬಾಡಾ ದಾಳಿಗೆ ಸಿಕ್ಕಿ 160 ರನ್ ಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ನಂತರ 31 ಓವರ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡು ಅರ್ಹ ಜಯ ಸಾಧಿಸಿತು. [ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]

ತಮೀಮ್ ಇಕ್ಬಾಲ್(ಬೌಲ್ಡ್), ಲಿಟನ್ ದಾಸ್(ಕ್ಯಾಚ್), ಮಹಮದುಲ್ಲಾ (ಎಲ್ ಬಿ) ವಿಕೆಟ್ ಪಡೆದ ರಬಾಡಾ ಹ್ಯಾಟ್ರಿಕ್ ಸಂಪಾದಿಸಿದರು. ಅಲ್ಲದೇ ದಕ್ಷಿಣ ಆಫ್ರಿಕಾ ಪರವೂ ಅತ್ಯುತ್ತಮ ಬ್ಯಾಟಿಂಗ್ ಎಂಬ ಶ್ರೇಯ ಪಡೆದುಕೊಂಡರು.
ಪಾದಾರ್ಪಣೆ ಪಂದ್ಯದಲ್ಲಿ ಬಾಂಗ್ಲಾದೇಶದ ತೈಜುಲ್ ಇಸ್ಲಾಂ ಹ್ಯಾಟ್ರಿಕ್ ಮಾಡಿದ್ದ ಮೊದಲ ಬೌಲರ್ ಎಂಬ ಸಾಧನೆ ಹೊಂದಿದ್ದು ರಬಾಡಾ ಎರಡನೆಯವರಾದರು.[ನಾಚಿಕೆಗೇಡು: ಸಚಿನ್ ಭಕ್ತನ ಮೇಲೆ ಬಾಂಗ್ಲಾ 'ಟೈಗರ್ಸ್' ದಾಳಿ]
ರಬಾಡಾ ಸಾಧನೆ
* ಪಾದಾರ್ಪಣೆ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್
* ಪಾದಾರ್ಪಣೆ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರಸರ್ಶನ
* ದಕ್ಷಿಣ ಆಫ್ರಿಕಾ ಪರ ಅತ್ಯುತ್ತಮ ಬೌಲಿಂಗ್ ಸಾಧನೆ
* ಅಲೆನ್ ಡೊನಾಲ್ಡ್ ನಂತರ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದ ದಕ್ಷಿಣ ಆಫ್ರಿಕಾದ ಬೌಲರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications