For Quick Alerts
ALLOW NOTIFICATIONS  
For Daily Alerts
 

Heinrich Klaasen: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸ್ಫೋಟಕ ಬ್ಯಾಟರ್ ವಿದಾಯ

ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರುವಾಸಿಯಾದ ಆಟಗಾರರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್. ತಮ್ಮ ಬಿರುಗಾಳಿ ಬ್ಯಾಟ್‌ನಿಂದಲೇ ಖ್ಯಾತಿ ಪಡೆದಿದ್ದ ಈ ಪ್ಲೇಯರ್‌ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇತ್ತೀಚಿಗೆ ಇವರು ಸನ್‌ರೈಸರ್ಸ್‌ ಹೈದರಾಬಾದ್ ಪರ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು.

33 ವರ್ಷದ ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್ ಬ್ಯಾಟರ್‌ ಹೆನ್ರಿಕ್ ಕ್ಲಾಸೇನ್‌ ದಿಢೀರ್ ನಿವೃತ್ತಿ ಪ್ರಕಟಿಸಿದ್ದಾರೆ. ಇವರು ತಮ್ಮ ನಿವೃತ್ತಿಯನ್ನು ಸಾಮಾಜಿಕ ತಾಣದಲ್ಲಿ ಘೋಷಿಸಿದ್ದಾರೆ. ಇವರು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದಿರಲು ಘೋಷಣೆ ಮಾಡಿದ್ದಾರೆ. ಇವರು ಐಪಿಎಲ್‌ನ ಕೊನೆಯ ಪಂದ್ಯದಲ್ಲಿ ಸನ್‌ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 17ನೇ ಆವೃತ್ತಿಯ ರನ್ನರ್ ಅಪ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಲೀಗ್‌ ಹಂತದಿಂದಲೇ ಈ ಬಾರಿ ಟೂರ್ನಿಗೆ ಗುಡ್ ಬಾಯ್ ಹೇಳಿದೆ.

South African Hard-Hitting Batter Heinrich Klaasen Announces International Retirement

ಹೆನ್ರಿಕ್‌ ಕ್ಲಾಸೆನ್‌ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಕೊನೆಯ ಐಪಿಎಲ್ ಪಂದ್ಯದಲ್ಲಿ ಸ್ಫೋಟಕ ಇನಿಂಗ್ಸ್‌ ಕಟ್ಟಿದ್ದರು. ಈ ಪಂದ್ಯದಲ್ಲಿ ಕ್ಲಾಸೆನ್‌ ಜಸ್ಟ್‌ 39 ಎಸೆತಗಳಲ್ಲಿ 105 ರನ್‌ ಸಿಡಿಸಿದ್ದರು. ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಏಳು ಬೌಂಡರಿ, ಒಂಬತ್ತು ಸಿಕ್ಸರ್‌ಗಳು ಸೇರಿವೆ. ಇವರಿಗೆ ಎಸ್‌ಆರ್‌ಎಚ್‌ 23 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಐಪಿಎಲ್‌ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿ ಸುದ್ದಿಯಾಗಿದ್ದರು.

ನಿವೃತ್ತಿಯ ವೇಳೆ ಕ್ಲಾಸೆನ್ ಬರೆದಿದ್ದು ಏನು?

ಹೆನ್ರಿಕ್ ಕ್ಲಾಸೆನ್‌ ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಈ ವೇಳೆ ಕ್ಲಾಸೆನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರವನ್ನು ತೆಗೆದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡೆ. ಇದು ನಿಜಕ್ಕೂ ಕಷ್ಟಕರ ನಿರ್ಧಾರ. ಆದರೆ ಈ ನಿರ್ಧಾರದಿಂದ ನಾನು ಸಂಪೂರ್ಣ ತೃಪ್ತ ನಾಗಿದ್ದೇನೆ. ನನ್ನ ದೇಶವನ್ನು ಪ್ರತಿನಿಧಿಸಿದ್ದು ನನ್ನಗೆ ಸಿಕ್ಕ ದೊಡ್ಡ ಗೌರವ ಎಂದು ತಿಳಿಸಿದ್ದಾರೆ. ಚಿಕ್ಕವನಿದ್ದಾಗ ಕಂಡ ಕನಸು ನನಸಾಗಿದೆ ಎಂದು ಕ್ಲಾಸೆನ್‌ ಬರೆದುಕೊಂಡಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಸಿಕ್ಕ ಸ್ನೇಹವನ್ನು ಜೀವನ ಪರ್ಯಂತ ಕಾಪಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ದೇಶಕ್ಕಾಗಿ ಆಡುವ ಅವಕಾಶ ಪಡೆದಿದ್ದರಿಂದ ಮಹಾನ್‌ ವ್ಯಕ್ತಿಗಳನ್ನು ಭೇಟಿ ಆಗುವ ಅವಕಾಶ ಲಭಿಸಿತು. ದೇಶದ ಬ್ಯಾಡ್ಜ್‌ ಹೊಂದಿರುವ ಬಟ್ಟೆ ತೊಟ್ಟು ಆಡುವುದು ನನ್ನ ಪಾಲಿಗೆ ದೊಡ್ಡ ಗೌರವ ಎಂದು ಬರೆದಿದ್ದಾರೆ.

South African Hard-Hitting Batter Heinrich Klaasen Announces International Retirement

ಕ್ಲಾಸೆನ್‌ ಸಾಧನೆ.

ಹೆನ್ರಿಕ್‌ ಕ್ಲಾಸೆನ್‌ ದಕ್ಷಿಣ ಆಫ್ರಿಕಾ ಪರ 4 ಟೆಸ್ಟ್ ಪಂದ್ಯವನ್ನು ಆಡಿದ್ದು 104 ರನ್‌ ಸಿಡಿಸಿದ್ದಾರೆ. ಇನ್ನು ದೇಶದ ಪರ 60 ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿದ್ದು. 43ರ ಸರಾಸರಿಯಲ್ಲಿ 2141 ರನ್‌ ಬಾರಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 11 ಅರ್ಧಶತಕಗಳು ಸೇರಿವೆ. ಇನ್ನು ಚುಟುಕು ಫಾರ್ಮೆಟ್‌ನಲ್ಲಿ ಕ್ಲಾಸೆನ್‌ ಆಡಿದ 58 ಪಂದ್ಯಗಳಲ್ಲಿ 23ರ ಸರಾಸರಿಯಲ್ಲಿ 1000 ರನ್‌ ಸಿಡಿಸಿದ್ದಾರೆ. ಈ ವೇಳೆ 5 ಅರ್ಧಶತಕಗಳನ್ನು ಬಾರಿಸಿದ್ದಾರೆ.

Story first published: Monday, June 2, 2025, 17:33 [IST]
Other articles published on Jun 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+