ಅತಿವೇಗದ ತ್ರಿ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಕ್ರಿಕೆಟರ್
ಜೋಹಾನ್ಸ್ ಬರ್ಗ್, ಡಿಸೆಂಬರ್ 01 : ದಕ್ಷಿಣ ಆಫ್ರಿಕಾದ ಆಟಗಾರರೊಬ್ಬರು ಅತಿವೇಗದ ತ್ರಿಶತಕ ಸಿಡಿಸಿದ್ದಾರೆ. ಮಾರ್ಕೊ ಮರಾಯಸ್ ಅವರು 191 ಎಸೆತಗಳಲ್ಲಿ ಅಜೇಯ 300 ರನ್ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ.
ದೇಶೀಯ ಕ್ರಿಕೆಟ್ ಟೂರ್ನಿಯ 3 ದಿನಗಳ ಪಂದ್ಯದಲ್ಲಿ ಬಾರ್ಡರ್ ತಂಡವನ್ನು ಪ್ರತಿನಿಧಿಸಿದ್ದ ಮಾರ್ಕೊ ಮರಾಯಸ್,191 ಎಸೆತಗಳಲ್ಲಿ 35 ಬೌಂಡರಿ, 13 ಸಿಕ್ಸರ್ ಒಳಗೊಂಡ ಅಜೇಯ 300 ರನ್ ಗಳಿಸಿದ್ದಾರೆ.

1921 ರಲ್ಲಿ ಆಸ್ಟ್ರೇಲಿಯಾದ ಚಾರ್ಲಿ ಮಕಾರ್ಟ್ನಿ 221 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದರು. ಇಂಗ್ಲೆಂಡ್ ನ ಫ್ರಾಂಕ್ ವೂಲಿ 230 ಎಸೆತಗಳಲ್ಲಿ, ನ್ಯೂಜಿಲೆಂಡ್ ನ ಕೆನ್ ರುದರ್ ಫೋರ್ಡ್ 234 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್ 244 ಎಸೆತ, ಶ್ರೀಲಂಕಾದ ಕುಶಾಲ್ ಪೆರೆರಾ 244 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದಾರೆ. ಮಾರ್ಕೊ ಮರಾಯಸ್ 191 ಎಸೆತಗಳಲ್ಲಿ 300 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications