ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಿಂದ ಮುಜುಗರದ ಸುದ್ದಿಯೊಂದು ಹೊರ ಬಿದ್ದಿದೆ. ಈ ಸುದ್ದಿಯನ್ನು ಕ್ರಿಕೆಟ್ ಜಗತ್ತು ಒಮ್ಮೆ ಸ್ಟನ್ ಆಗಿದೆ. ಕ್ರಿಕೆಟ್ ಆಟದಲ್ಲಿ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ. ಈ ಕೃತ್ಯ ಬಹಿರಂಗ ಗೊಂಡ ಬಳಿಕ ಇದರಲ್ಲಿ ತೊಡಗಿದ ಆಟಗಾರರು ಕಂಬಿ ಹಿಂದೆ ಇರುತ್ತಾರೆ. ಮ್ಯಾಚ್ ಫಿಕ್ಸಿಂಗ್ ಹಗರಣ ಬಯಲಾಗಿದ್ದು, ಮೂವರು ಆಟಗಾರರನ್ನು ಬಂಧಿಸಲಾಗಿದೆ.
ಆಫ್ರಿಕನ್ ಆಟಗಾರರಾದ ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಅವರನ್ನು ಮ್ಯಾಚ್ ಫಿಕ್ಸಿಂಗ್ ಆರೋಪಗಳಲ್ಲಿ ಬಂಧಿಸಲಾಗಿದೆ. ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟ ಕಾಯಿದೆ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ. ಈ ಮೂವರು ಕ್ರಿಕೆಟಿಗರನ್ನು ಇದೇ ನವೆಂಬರ್ 18, 28 ಮತ್ತು 29 ರಂದು ಬಂಧಿಸಲಾಗಿದೆ. 2015-16ರ ಟಿ20 ರಾಮ್ ಸ್ಲಾಮ್ ಚಾಲೆಂಜ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಈ ಕ್ರಿಕೆಟ್ ಆಟಗಾರರು ಎದುರಿಸುತ್ತಿದ್ದಾರೆ.

ಗುಲಾಮ್ ಬೋಡಿ ಅವರ ಅನುಮಾನಾಸ್ಪದ ನಡೆಯನ್ನು ಪತ್ತೆ ಹಚ್ಚಿದ ಕ್ರಿಕೆಟ್ ಮಂಡಳಿ ಈ ತನಿಖೆ ನಡೆಸಿದೆ. ಈ ಪ್ರಕರಣವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾದ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಕೊನೆಗೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಪಿಸಿಐನ ಗಂಭೀರ ಭ್ರಷ್ಟಾಚಾರ ತನಿಖಾ ದಳದಿಂದ ಈ ಬಂಧನ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಮಿ ಸೊಲೆಕಿಲ್ ಮತ್ತು ಲೊನಾವೊ ತ್ಸೊಟೊಬೆ ಅವರನ್ನು ಪ್ರಿಟೋರಿಯಾದ ವಿಶೇಷ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಇನ್ನು ಈ ಪ್ರಕರಣದ ಮುಂದಿನ ವಿಚಾರಣೆಯನ್ನು 26 ಫೆಬ್ರವರಿ 2025 ಕ್ಕೆ ನಿಗದಿಪಡಿಸಲಾಗಿದೆ.
ಗುಲಾಂ ಬೋಡಿ ಭಾರತೀಯ ಬುಕ್ಕಿಗಳೊಂದಿಗೆ ಪಿತೂರಿಯಲ್ಲಿ ಭಾಗವಹಿಸಿದ್ದು ಬೆಳಕಿಗೆ ಬಂದಿದೆ. ಅಲ್ಲದೆ ಇವರು ಹಲವು ಆಟಗಾರರನ್ನು ಸಂಪರ್ಕಿಸಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಆಟದ ಫಲಿತಾಂಶದ ಮೇಲೆ ಪ್ರಭಾವ ಬೀರಲು ಇವರು ಪ್ರಯತ್ನಿಸಿದರು. ಇವರನ್ನು 2018ರಲ್ಲಿ ಬಂಧಿಸಲಾಗಿತ್ತು. ಅಲ್ಲದೆ 8 ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಲಾಗಿದ್ದು, ಇವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಬಂಧಿತ ಆರೋಪಿಗಳಲ್ಲಿ ಲೊನಾವೊ ತ್ಸೊಟೊಬೆ ದಕ್ಷಿಣ ಆಫ್ರಿಕಾದ ಪರ ಆಡಿದ ಅನುಭವ ಹೊಂದಿದ್ದಾರೆ. ಇವರು ಹರಿಣಿಗಳ ಪರ 5 ಟೆಸ್ಟ್, 61 ಏಕದಿನ, 23 ಟಿ20 ಪಂದ್ಯಗಳನ್ನು ಆಡಿದ್ದರು. ಥಾಮಿ ಸೊಲೆಕಿಲ್ ಮತ್ತು ಅತಿ ಎಂಬಾಟಿಯವರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ.