Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಸೌತ್ ಆಫ್ರಿಕಾ ಕಿತ್ತು ಹಾಕಿದ ದಕ್ಷಿಣ ಆಫ್ರಿಕಾ ಒಲಿಂಪಿಕ್ ಸಮಿತಿ

South African Olympic Committee removes South Africa cricket board

ಕೇಪ್‌ ಆಫ್‌ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ದಕ್ಷಿಣ ಆಫ್ರಿಕಾದ ಒಲಿಂಪಿಕ್ ಸಮಿತಿ ಕಿತ್ತು ಹಾಕಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿಯಂತ್ರ ಈಗ ಅಲ್ಲಿನ ಒಲಿಂಪಿಕ್ ಸಮಿತಿಯ ಅಡಿಯಲ್ಲಿದೆ. ಈ ನಡೆಯಿಂದ ಐಸಿಸಿ ನಿಯಮಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಪ್ಪಿಸಿಕೊಂಡಂತಾಗುತ್ತದೆ. ಇದು ಐಸಿಸಿಯು ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಿಂದ ಹೊರ ಹಾಕಲು ಕಾರಣವಾಗಬಹುದು.

ದಕ್ಷಿಣ ಆಫ್ರಿಕಾ ಸ್ಪೋರ್ಟ್ಸ್ ಕಾನ್ಫಿಡೇಶನ್ ಆ್ಯಂಡ್ ಒಲಿಂಪಿಕ್ ಕಮಿಟಿಯು (SASCOC) ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಬರೆದಿರುವ ಪತ್ರದಲ್ಲಿ, ಮಂಡಳಿಯಲ್ಲಿ ಸೇವೆಯಲ್ಲಿರುವ ಅಧಿಕಾರಿಗಳು ಆಡಳಿತದಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ ಎಂದು ಕ್ರಿಕ್‌ಬಝ್ ವರದಿಯಲ್ಲಿ ಹೇಳಿದೆ.

'ಸಿಎಸ್ಎ ಮಂಡಳಿ ಮತ್ತು ಮಂಡಳಿಯಲ್ಲಿ ಎಕ್ಸ್-ಆಫೀಸಿಯೊದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು (ಕಂಪನಿಯ ಕಾರ್ಯದರ್ಶಿ, ಆಕ್ಟಿಂಗ್ ಸಿಇಒ, ಸಿಎಫ್‌ಒ ಮತ್ತು ಸಿಒಒ) ಸಿಎಸ್‌ಎ ಆಡಳಿತದಿಂದ ಪೂರ್ಣ ವೇತನದಿಂದ ಹೊರಗುಳಿಯುವಂತೆ ನಿರ್ದೇಶಿಸಲಾಗಿದೆ,' ಎಂದು ಎಸ್‌ಎಎಸ್‌ಸಿಒಸಿ ಸಿಎಸ್‌ಎಗೆ ಪತ್ರದಲ್ಲಿ ಸೂಚಿಸಿದೆ.

ಕನಿಷ್ಠ 2019ರ ಡಿಸೆಂಬರ್‌ನಿಂದಲೂ ಕ್ರಿಕೆಟ್ ಮಂಡಳಿಯಲ್ಲಿ ಬಹಳಷ್ಟು ಅಸಮರ್ಪಕತೆಗಳು ಮತ್ತು ದುಷ್ಕೃತ್ಯದ ಅನೇಕ ನಿದರ್ಶನಗಳು ನಡೆಯುತ್ತಿದೆ ಎಂದು ಎಸ್‌ಎಎಸ್‌ಸಿಒಸಿ ಹೇಳಿದೆ. ಸುಮಾರು ಒಂದು ತಿಂಗಳಿನಿಂದಲೂ ತನಿಖೆ ನಡೆಸಿದ ಎಸ್‌ಎಎಸ್‌ಸಿಒಸಿ ಈ ನಿರ್ಧಾರ ಪ್ರಕಟಿಸಿದೆ.

Story first published: Friday, September 11, 2020, 10:04 [IST]
Other articles published on Sep 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+