ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ಭರವಸೆಯ ಆಟಗಾರ ವಿದಾಯ
ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ತಮ್ಮ ಭರ್ಜರಿ ಬ್ಯಾಟಿಂಗ್ ಶೈಲಿಯಿಂದ ಹೆಸರುವಾಸಿಯಾಗಿದ್ದ ಸ್ಟಾರ್ ಆಟಗಾರ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ನಿವೃತ್ತಿ ನಿರ್ಧಾರವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾರೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಠಾತ್ ನಿವೃತ್ತಿ ಘೋಷಿಸಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಅಪಾರ ಹೆಮ್ಮೆ ಹಾಗೂ ಕೃತಜ್ಞತೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ದೇಶದ ಜೆರ್ಸಿ ತೊಟ್ಟು ಅಂಗಳಕ್ಕೆ ಇಳಿಯುವುದು ಹೆಮ್ಮೆಯ ಸಂಗತಿ. ಚಿಕ್ಕವನಿದ್ದಾಗ ಈ ಕನಸು ಕಂಡಿದ್ದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಆಡಿದ್ದೇ ದೊಡ್ಡ ಸಾಧನೆ ಎಂದು ಅವರು ನಿವೃತ್ತಿ ಘೋಷಿಸುವಾಗ ಸಾಮಾಜಿಕ ತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಕುಟುಂಬಸ್ಥರನ್ನು ವಿಶೇಷವಾಗಿ ಸಹೋದರರನ್ನು ಮತ್ತು ಕ್ರಿಕೆಟ್ ಮಂಡಳಿಯ ಅಧಿಕಾರಿಗಳನ್ನು ಉಲ್ಲೇಖಿಸಿದ್ದಾರೆ.

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಏಕದಿನ ಪಂದ್ಯದಲ್ಲಿ ಅಮೋಘ ಸಾಧನೆಯನ್ನು ಮಾಡಿರುವ ಆಟಗಾರ. ಇವರ ಸರಾಸರಿ 50ರ ಆಸುಪಾಸಿನಲ್ಲಿದೆ. ಆದರೆ ಆರಂಭದಲ್ಲಿ ಈ ಸರಾಸರಿ 60ರ ಹತ್ತಿರದಲ್ಲಿತ್ತು. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಅವರಿಗೆ ಸುಮಾರು 29 ವರ್ಷ ವಯಸ್ಸಾಗಿತ್ತು. ಆದರೂ ಸಹ ತಮ್ಮ ವಯಸ್ಸು ಮೀರಿದ ಸಾಧನೆಯನ್ನು ಮಾಡಿದರು. ಇವರು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಪರಿಣಾಮವೇ ತಂಡ ಸೆಮಿಫೈನಲ್ ಹಂತವನ್ನು ಪ್ರವೇಶಿಸಿತ್ತು.
ಡೆರ್ ಡಸ್ಸೆನ್ ಸಾಧನೆ
37 ವರ್ಷದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮೂರು ಮಾದರಿಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ ಆಟಗಾರ. ಇವರು 18 ಟೆಸ್ಟ್ ಪಂದ್ಯಗಳಲ್ಲಿ 6 ಅರ್ಧಶತಕದ ನೆರವಿನಿಂದ 905 ರನ್ ಸಿಡಿಸಿದ್ದಾರೆ. ಅಲ್ಲದೆ 71 ಏಕದಿನ ಪಂದ್ಯಗಳಲ್ಲಿ 6 ಶತಕ ಹಾಗೂ 17 ಅರ್ಧಶತಕ ಬಾರಿಸಿದ್ದು, 2657 ರನ್ ಬಾರಿಸಿದ್ದಾರೆ. ಇವರು 57 ಟಿ20 ಪಂದ್ಯಗಳಲ್ಲಿ 10 ಅರ್ಧಶತಕದ ಬಲದಿಂದ 1406 ರನ್ ಕಲೆ ಹಾಕಿದ್ದಾರೆ. ಇವರು ವಿಶ್ವದಾದ್ಯಂತ ಲೀಗ್‌ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ರಾಜಸ್ಥಾನ ರಾಯಲ್ಸ್ ತಂಡದ ಪರವೂ ಬ್ಯಾಟ್ ಮಾಡಿದ್ದಾರೆ.

ಇತ್ತೀಚಿಗೆ ದಕ್ಷಿಣ ಆಫ್ರಿಕಾ ಕೇಂದ್ರ ಗುತ್ತಿಗೆ ಒಪ್ಪಂದವನ್ನು ಘೋಷಿಸಿತ್ತು. ಈ ಒಪ್ಪಂದದಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಸ್ಥಾನ ಪಡೆದಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications