Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20: ಗೋವಾ ಮಣಿಸಿದ ಕರ್ನಾಟಕ, ಮಿಂಚಿದ ಮಯಾಂಕ್

 South Zone T20: Karnataka wallop Goa

ವಿಶಾಖಪಟ್ಟಣಂ, ಜನವರಿ 08: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ದಕ್ಷಿಣ ವಲಯ ಟಿ20 ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ ಕರ್ನಾಟಕ ಭರ್ಜರಿ ಜಯ ದಾಖಲಿಸಿದೆ.

ಗೋವ ವಿರುದ್ಧ 49ರನ್ ಗಳ ಜಯ ದಾಖಲಿಸಿರುವ ಕರ್ನಾಟಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಗದಿತ 20 ಓವರ್ ಗಳಲ್ಲಿ 172/4 ಸ್ಕೋರ್ ಮಾಡಿತು. ಇದಕ್ಕೆ ಪ್ರತಿಯಾಗಿ ಗೋವಾ 123/8 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.

ಕರ್ನಾಟಕದ ಪರ ಮಯಾಂಕ್ ಅಗರವಾಲ್ 55ರನ್(35ಎಸೆತ, 8x4, 2x6), ಸ್ಟುವರ್ಟ್ ಬಿನ್ನಿ ಅಜೇಯ28, ಮನೀಶ್ ಪಾಂಡೆ 24, ಆರ್ ಸಮರ್ಥ್ 28ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಬೌಲಿಂಗ್ ವಿಭಾಗದಲ್ಲಿ ಎಸ್ ಅರವಿಂದ್ 2/22 ಹಾಗೂ ಎ ಮಿಥುನ್ 2/13 ಪಡೆದು ಮಿಂಚಿದರು. ಕರ್ನಾಟಕದ ತನ್ನ ಮುಂದಿನ ಪಂದ್ಯವನ್ನು ಜನವರಿ 10ರಂದು ಆಂಧ್ರ ವಿರುದ್ಧ ಆಡಲಿದೆ.

Story first published: Monday, January 8, 2018, 18:10 [IST]
Other articles published on Jan 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+