Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿಯಿಂದ ಬೊಂಬಾಟ್ ಗಿಫ್ಟ್ ಪಡೆದ ಆರ್‌ಸಿಬಿ ವೇಗಿ

ಕಳೆದ ನಾಲ್ಕು ದಿನಗಳಿಂದ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಸೆಪ್ಟೆಂಬರ್ 19 ರಿಂದ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.

ಈ ಸರಣಿಗೆ ಟೀಮ್ ಇಂಡಿಯಾ ಪರ ಹೊಸ ಮುಖಗಳು ಕಾಣಿಸಿಕೊಳ್ಳಿದ್ದು, ಅವರಲ್ಲಿ ಬೌಲಿಂಗ್ ಆಲ್‌ರೌಂಡರ್ ಆಕಾಶ್ ದೀಪ್ ಅವರ ಹೆಸರೂ ಇದೆ. 27 ವರ್ಷದ ಆಕಾಶ್ ದೀಪ್ ಟೀಮ್ ಇಂಡಿಯಾ ಪರ ಮಿಂಚಲು ಅಭ್ಯಾಸ ಶಿಬಿರದಲ್ಲಿ ಬೆವರು ಹರಿಸುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಅವರಿಗೆ ಅದೃಷ್ಟ ಕೈ ಹಿಡಿದೆ.

Special gift from Virat Kohli to Akash Deep

ಟೀಮ್ ಇಂಡಿಯಾ ಸೇರುವ ಮುನ್ನ ಆಕಾಶ್ ದೀಪ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದರು. ಅಲ್ಲಿಯೂ ಅವರು ತಮ್ಮ ವೇಗದ ಬೌಲಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಬೆಂಬಲವಾಗಿ ನಿಂತಿದ್ದರು.

ಈಗ ಟೀಮ್ ಇಂಡಿಯಾದಲ್ಲಿಯೂ ವಿರಾಟ್ ಕೊಹ್ಲಿ ಅವರು ಆಕಾಶ್ ದೀಪ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಕೊಹ್ಲಿ ತಮ್ಮ ಬ್ಯಾಟ್ ಅನ್ನು ಆಕಾಶ್ ದೀಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಬ್ಯಾಟ್ ಪಡೆದ ಆಕಾಶ್ ದೀಪ್ ಸಂತಸಗೊಂಡಿದ್ದಾರೆ.

ಪೋಸ್ಟ್ ಹಂಚಿಕೊಂಡ ಆಕಾಶ್

ಈ ಬಗ್ಗೆ ಆಕಾಶ್ ದೀಪ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೊಹ್ಲಿ ಕೊಟ್ಟಿರುವ ಬ್ಯಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಮೇಲೆ
'ಧನ್ಯವಾದ ವಿರಾಟ್ ಭಯ್ಯಾ' ಎಂದು ಬರೆದುಕೊಂಡಿದ್ದಾರೆ. ಸದ್ಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ.

ವಿರಾಟ್ ಕೊಹ್ಲಿಯ ಕ್ರಿಕೆಟ್ ಕಿಟ್‌ನಲ್ಲಿರುವ ಯಾವುದೇ ವಸ್ತು ಲಕ್ಷಗಳಲ್ಲಿ ಮಾರಾಟವಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇತ್ತೀಚೆಗೆ ಕೆಎಲ್ ರಾಹುಲ್ ಆಯೋಜಿಸಿದ್ದ ಹರಾಜಿನಲ್ಲಿ ಕೊಹ್ಲಿ ಗ್ಲೌಸ್ ಬೆಲೆ 28 ಲಕ್ಷ ರೂ.ಗಳಿಗೆ ಮಾರಾಟವಾದರೆ, ಜೆರ್ಸಿ ಬೆಲೆ 40 ಲಕ್ಷ ರೂ. ಗಳಿಗೆ ಖರೀದಿ ಮಾಡಿದ್ದರು. ಹೀಗಿರುವಾಗ ವಿರಾಟ್ ಬ್ಯಾಟ್ ನ ಬೆಲೆ ಕೋಟಿಗೆ ಏರಿದರೆ ಅಚ್ಚರಿ ಪಡಬೇಕಿಲ್ಲ. ಆದರೆ ವಿರಾಟ್ ತಮ್ಮ ಬ್ಯಾಟ್ ಅನ್ನು ಯುವ ಆಟಗಾರರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ಹಿಂದೆಯೂ ಐಪಿಎಲ್‌ ಸಂದರ್ಭದಲ್ಲಿ ಕೊಹ್ಲಿ ಅವರಿಂದ ಪಡೆದಿದ್ದ ಬ್ಯಾಟ್ ಅನ್ನು ರಿಂಕು ಸಿಂಗ್ ಮುರಿದ್ದರು. ಬಳಿಕ ಅವರು ಮತ್ತೊಂದು ಬ್ಯಾಟ್ ಕೇಳಲು ವಿರಾಟ್ ಬಳಿ ಹೋಗಿದ್ದರು. ಆಗ ಅವರ ನಡುವೆ ಸಂಭಾಷಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿಯಿಂದ ರಿಂಕು ಸಿಂಗ್ ಎರಡನೇ ಬ್ಯಾಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಕೊಹ್ಲಿ, ಆಕಾಶ್ ದೀಪ್‌ಗೆ ಬ್ಯಾಟ್ ಗಿಫ್ಟ್ ನೀಡಿದ್ದಾರೆ.

Story first published: Tuesday, September 17, 2024, 7:00 [IST]
Other articles published on Sep 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+