ಧೋನಿ, ಧವನ್, ರೋಹಿತ್ ಸಾಧನೆಗೆ ವೇದಿಕೆಯಾದ 2ನೇ ಏಕದಿನ
ಕ್ಯಾಂಡಿ (ಶ್ರೀಲಂಕಾ), ಆಗಸ್ಟ್ 25: ಗುರುವಾರ ರಾತ್ರಿ ಮುಗಿದ ಭಾರತ- ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ, ಲಂಕಾ ವಿರುದ್ಧ 3 ವಿಕೆಟ್ ಗಳ ರೋಚಕ ಜಯ ಸಾಧಿಸಿತು.
ಮಳೆಯಿಂದ ತೊಂದರೆಗೊಳಗಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತ್ತು. ಆದರೆ, ಭಾರತದ ಇನಿಂಗ್ಸ್ ಶುರುವಾಗುವಷ್ಟರಲ್ಲಿ ಮಳೆಯಾಗಿದ್ದರಿಂದಾಗಿ, ಪಂದ್ಯದ ಗೆಲುವಿನ ಗುರಿಯನ್ನು 47 ಓವರ್ ಗಳಿಂದ 231 ರನ್ ಪೇರಿಸುವಂತೆ ನಿಗದಿಗೊಳಿಸಲಾಯಿತು. ಈ ಗುರಿಯನ್ನು ಮುಟ್ಟಿ ಭಾರತ ಜಯಶಾಲಿಯಾಯಿತು.
ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 236 (ಸಿರಿವರ್ದನ 58, ಕಪುಗೇದರಾ 40; ಜಸ್ ಪ್ರೀತ್ ಬುಮ್ರಾ 43ಕ್ಕೆ 4, ಯಜುವೇಂದ್ರ ಚಾಹಲ್ 43ಕ್ಕೆ 2); ಭಾರತ 44.2 ಓವರ್ ಗಳಲ್ಲಿ 7 ವಿಕೆಟ್ ಗೆ 231 (ರೋಹಿತ್ ಶರ್ಮಾ 54, ಭುವನೇಶ್ವರ್ ಕುಮಾರ್ ಅಜೇಯ 53; ಅಖಿಲ ಧನಂಜಯ 54ಕ್ಕೆ 6, ಸಿರಿವರ್ದನ 39ಕ್ಕೆ 1.) ಪಂದ್ಯಶ್ರೇಷ್ಠ: ಅಖಿಲ ಧನಂಜಯ (ಶ್ರೀಲಂಕಾ) ಫಲಿತಾಂಶ: ಭಾರತಕ್ಕೆ 3 ವಿಕೆಟ್ ಜಯ (ಡಕ್ ವರ್ತ್ ಲೂಯಿಸ್ ನಿಯಮಗಳ ಪ್ರಕಾರ)
ಈ ಪಂದ್ಯದಲ್ಲಿನ ಜಯದ ಮೂಲಕ ಭಾರತ, ಐದು ಪಂದ್ಯಗಳ ಈ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ, ಅದಕ್ಕಿಂತ ಸ್ವಾರಸ್ಯಕರವಾದ ವಿಚಾರಗಳು ಇಲ್ಲಿವೆ.
ತಂಡದಲ್ಲಿರುವ ಹಿರಿಯ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಹೊಸ ಸಾಧನೆಯತ್ತ ಮುನ್ನುಗ್ಗುತ್ತಿದ್ದಾರೆ. ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಲಂಕಾದ ಸ್ಪಿನ್ನರ್ ಅಕಿಲಾ ದನಂಜಯ ಹೊಸ ಸಾಧನೆ ಮಾಡಿದ್ದಾರೆ.
ಇನ್ನು, ಭಾರತ ತಂಡದ ಆರಂಭಿಕ ಆಟಗಾರರಾದ ಧವನ್ ಹಾಗೂ ರೋಹಿತ್ ಅವರದ್ದು ಮತ್ತೊಂದು ಹೆಚ್ಚುಗಾರಿಕೆಯಾದರೆ, ಕೊಹ್ಲಿ ಅವರದ್ದು ಇನ್ನೊಂದು ಸಾಧನೆ.
ಒಂದೇ ಪಂದ್ಯದಲ್ಲಿ ಇಷ್ಟೆಲ್ಲಾ ವಿಶೇಷತೆಗಳು, ಏನು, ಎತ್ತ ಎಂಬುದರ ಮಾಹಿತಿ ಇಲ್ಲಿದೆ.

99ನೇ ಸ್ಟಂಪಿಂಗ್ ದಾಖಲಿಸಿದ ಮಾಜಿ ನಾಯಕ
ಲಂಕಾದ ಆರಂಭಿಕ ಆಟಗಾರ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ, ಧೋನಿಯವರ ಅಂತಾರಾಷ್ಟ್ರೀಯ ಏಕದಿನದ ಸ್ಟಂಪಿಂಗ್ ಲೆಕ್ಕ 99ಕ್ಕೆ ಬಂದು ಮುಟ್ಟಿದೆ. ಮುಂದಿನ ಪಂದ್ಯದಲ್ಲಿ ಇನ್ನೊಂದೇ ಸ್ಟಂಪ್ ಮಾಡಿದರೆ, ಅದು ಅವರ 100ನೇ ಸ್ಟಂಪಿಂಗ್ ಆಗಲಿದೆ.

ಲಂಕಾ ಬೌಲಿಗನ ವಿಶೇಷ ಸಾಧನೆ
ಈ ಪಂದ್ಯದಲ್ಲಿ ಕೇವಲ 13 ಎಸೆತಗಳ ಅಂತರದಲ್ಲೇ ಶ್ರೀಲಂಕಾದ ಸ್ಪಿನ್ನರ್ ಅಕಿಲಾ ದನಂಜಯ ಐದು ವಿಕೆಟ್ ಪಡೆದರು. 2000ನೇ ಇಸವಿಯಿಂದ ಈಚೆಗೆ ಇದು ಅತ್ಯುತ್ತಮ ಪ್ರದರ್ಶನ ಎನಿಸಿದೆ. ಭಾರತದ ಪರವಾಗಿ, ಈ ಹಿಂದೆ, 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವಾಗ ವೇಗಿ ಮೊಹಮ್ಮದ್ ಶಮಿ ಅವರು, 11 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದು, ಭಾರತದ ಪರವಾಗಿ ಹೊರಹೊಮ್ಮಿರುವ ಉತ್ತಮ ಸಾಧನೆಯಾಗಿದೆ.

ರೋಹಿತ್-ಶಿಖರ್ ಸಾಧನೆಯ ಜತೆಯಾಟ
ಭಾರತ ತಂಡದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ, 50 ರನ್ ಗಳಿಗೂ ಹೆಚ್ಚಿನ ಜತೆಯಾಟವಾಡಿದ್ದು ಇದು 20ನೇ ಬಾರಿ. 2013ರಲ್ಲಿ ದಕ್ಷಿಣ ಆಫ್ರಿಕಾದ ಖ್ವಿಂಟಾನ್ ಡಿ ಕಾಕ್ ಹಾಗೂ ಹಾಷೀಂ ಆಮ್ಲಾ ಜೋಡಿ ಈ ಸಾಧನೆ ಮಾಡಿತ್ತು. ಆನಂತರ, ಇಂಥ ಸಾಧನೆ ಆರಂಭಿಕರಿಂದ ಹೊರಹೊಮ್ಮಿರುವುದು ಈಗಲೇ. (ಫೋಟೋ: ಸಂಗ್ರಹ ಚಿತ್ರ)

ನಾಲ್ಕು ವಿಕೆಟ್ ಗಳಿಸಿದ ಜಸ್ ಪ್ರೀತ್
ಈ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಅವರು, 10 ಓವರ್ ಮಾಡಿ, 43 ರನ್ ನೀಡಿ, 4 ವಿಕೆಟ್ ಗಳಿಸಿದ್ದಾರೆ. ಹೀಗೆ, ಅವರು ಮೂರಕ್ಕಿಂತ ಹೆಚ್ಚು ವಿಕೆಟ್ ಗಳಿಸಿರುವುದು ಇದು 3ನೇ ಬಾರಿ.

ಅತಿ ಹೆಚ್ಚು ಬಾರಿ ಟಾಸ್ ಗೆದ್ದಿದ್ದ ಕೊಹ್ಲಿ
ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದಿದ್ದರು. ಏಕದಿನ ಮಾದರಿಯಲ್ಲಿ ಕೊಹ್ಲಿ ಹೀಗೆ ಟಾಸ್ ಗೆದ್ದಿದ್ದು 14ನೇ ಬಾರಿ. ಈವರೆಗೆ 15 ಏಕದಿನ ಪಂದ್ಯಗಳಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿರುವ ಅವರು, 14 ಬಾರಿ ಟಾಸ್ ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications