RCB ಸೇರುತ್ತಾರಾ ಕೆಎಲ್ ರಾಹುಲ್? ವೈರಲ್ ಆಗುತ್ತಿದೆ ಪೋಸ್ಟ್
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿದಿದೆ. ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ಸರಣಿಗೆ ಕಮ್ ಬ್ಯಾಕ್ ಮಾಡಿದ್ದ ಸ್ಟಾರ್ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ಭರವಸೆಗೆ ಪೂರಕವಾಗಿ ಆಟವಾಡಿದ್ದಾರೆ. ಈ ಸರಣಿಯಲ್ಲಿ ಹಲವು ಆಟಗಾರರ ಮೇಲೆ ಅಭಿಮಾನಿಗಳು ಕಣ್ಣು ನೆಟ್ಟಿದ್ದರು.
ಸ್ಟಾರ್ ಆಟಗಾರರು ಅಂಗಳ ಪ್ರವೇಶಿಸಿದ್ದರಿಂದ ಕುತೂಹಲ ಮನೆ ಮಾಡಿತ್ತು. ಗಾಯದ ಬಳಿಕ ಟೆಸ್ಟ್ ತಂಡಕ್ಕೆ ಎಂಟ್ರಿ ನೀಡಿದ್ದ ಕೆ.ಎಲ್ ರಾಹುಲ್ ಅವರ ಮೇಲೂ ಎಲ್ಲರ ಚಿತ್ತ ನೆಟ್ಟಿತ್ತು. ಇವರು ಎರಡನೇ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ ಗಮನ ಸೆಳೆದರು. ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಮಾಡಿದೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ವೈರಲ್ ಪೋಸ್ಟ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ತವರು ತಂಡಕ್ಕೆ ಮರಳುತ್ತಾರೆ ಎಂಬ ಊಹಾಪೋಗಳು ಎದ್ದಿವೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಮಾಡಿರುವ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಿಂದ ಫ್ಯಾನ್ಸ್ ರಾಹುಲ್ ಮತ್ತೆ ಬೆಂಗಳೂರು ತಂಡ ಸೇರುತ್ತಾರೆ ಎಂಬ ಲೆಕ್ಕಾಚಾರ ಆರಂಭಿಸಿದ್ದಾರೆ.
ಆರ್‌ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯದ ವೇಳೆ ಒಂದು ಪೋಸ್ಟ್ ಮಾಡಿತ್ತು. ನಾಲ್ಕನೇ ದಿನದಾಟದದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಟಿವಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್-ರಾಹುಲ್ ನಡುವಿನ ಜೊತೆಯಾದ ಪೋಟೋ ಇದಾಗಿದೆ. ಆತ್ಮೀಯ ನೆರೆಹೊರೆಯ ಮಿತ್ರರೇ, ಟೀಮ್ ಇಂಡಿಯಾದ ಪ್ರದರ್ಶನವನ್ನು ನೋಡಿ ನಿಮ್ಮ ಟಿವಿಯನ್ನು ಒಡೆಯಬೇಡಿ. ಶಾಂತಿ ಕಾಪಾಡಿ ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.

ಆರ್‌ಸಿಬಿ ಈ ಪೋಸ್ಟ್ ಮಾಡಿದ್ದೆ ತಡ ಫ್ಯಾನ್ಸ್ ಈ ಪೋಸ್ಟ್‌ಗೆ ರಿಯಾಕ್ಟ್ ಮಾಡಲು ಆರಂಭಿಸಿದ್ದಾರೆ. ಅಲ್ಲದೆ 2025ರ ಐಪಿಎಲ್‌ನಲ್ಲಿ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ ಎಂಬ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.
ಮಾಲೀಕರೊಂದಿಗೆ ವಾಗ್ವಾದ
ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಮುನ್ನಡೆಸಿದ್ದರು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಲ್‌ಎಸ್‌ಜಿ ಸೋಲು ಕಂಡಿತ್ತು. ಇದೇ ವೇಳೆ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಹಾಗೂ ಕೆಎಲ್ ರಾಹುಲ್ ನಡುವೆ ವಾಗ್ವಾದಗಳು ನಡೆದವು. ಈ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಯಿತು. ಇದಾದ ಬಳಿಕ ರಾಹುಲ್ ಈ ತಂಡವನ್ನು ತೊರೆಯುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾದವು.
ಆರ್‌ಸಿಬಿ ರಾಹುಲ್ ಮೇಲೆ ಕಣ್ಣು ಇಟ್ಟಿದ್ದು ಏಕೆ?
ಎಲ್‌ಎಸ್‌ಜಿ ತಂಡವನ್ನು ರಾಹುಲ್ ತೊರೆಯಲು ಮುಂದಾದರೆ, ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಕಳೆದ ಆವೃತ್ತಿಯಲ್ಲಿ ವಿದಾಯ ಹೇಳಿದ್ದರು. ಇವರ ಸ್ಥಾನವನ್ನು ತುಂಬುವ ಆಟಗಾರರ ಹುಡುಕಾಟ ನಡೆದಿದೆ. ಹೀಗಾಗಿ ರಾಹುಲ್ ತಂಡಕ್ಕೆ ಸೇರಿದರೆ, ಇವರು ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್‌ಗೂ ಆಧಾರವಾಗಬಲ್ಲ ಆಟಗಾರ. ಹೀಗಾಗಿ ಆರ್‌ಸಿಬಿ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ.
ರಾಯಲ್ ಚಾಲೆಂಜರ್ಸ್ ಪರ ಕೆಎಲ್ ರಾಹುಲ್ 19 ಪಂದ್ಯಗಳಲ್ಲಿ, ಅವರು 145.30 ಸ್ಟ್ರೈಕ್ ರೇಟ್‌ನಲ್ಲಿ 417 ರನ್ ಗಳಿಸಿದ್ದಾರೆ, ಇದರಲ್ಲಿ 4 ಅರ್ಧ ಶತಕಗಳೂ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications