For Quick Alerts
ALLOW NOTIFICATIONS  
For Daily Alerts
 

Hardik Pandya: ಟೆಸ್ಟ್ ತಂಡ ಸೇರಲು ಹಾರ್ದಿಕ್‌ ಪಾಂಡ್ಯ ಅಭ್ಯಾಸ: ಫೋಟೋ ವೈರಲ್

ಟೀಮ್ ಇಂಡಿಯಾ ಈ ವರ್ಷ ಸಾಲು ಸಾಲು ಟೆಸ್ಟ್‌ ಸರಣಿಗಳನ್ನು ಆಡಲಿದೆ. ಗುರುವಾರದಿಂದ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌ ಆರಂಭವಾಗಲಿದ್ದು, ಟೀಮ್ ಇಂಡಿಯಾ ಆಟಗಾರರು ಮೈದಾನ ಪ್ರವೇಶಿಸಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದ್ದು, ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ತಂಡಕ್ಕೆ ಆಲ್‌ರೌಂಡರ್‌ಗಳ ಅವಶ್ಯಕತೆ ತುಂಬ ಇದೆ.

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ, ಟೆಸ್ಟ್‌ ಕ್ರಿಕೆಟ್‌ಗೆ ಮರಳಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಅವರು ಸೆಪ್ಟೆಂಬರ್ 2018 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟೆಸ್ಟ್ ಆಡಿದ್ದರು. ಸದ್ಯ ಹಾರ್ದಿಕ್ ವೈಟ್ ಬಾಲ್ ಕ್ರಿಕೆಟ್ ಮೇಲೆ ಮಾತ್ರ ಆಡುತ್ತಿದ್ದಾರೆ. ಗಾಯದ ಸಮಸ್ಯೆ ಕೊಂಚ ಹಾರ್ದಿಕ್ ಪಾಂಡ್ಯ ಅವರನ್ನು ಕಾಡುತ್ತಿದೆ. ಇದನ್ನು ಬಿಟ್ಟರೆ, ಸೀಮಿತ ಓವರ್‌ಗಳ ಪಂದ್ಯದಲ್ಲಿ ಪಾಂಡ್ಯ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈಗ ರೆಡ್ ಬಾಲ್‌ ಕ್ರಿಕೆಟ್‌ಗೆ ಕಮ್‌ ಬ್ಯಾಕ್‌ ಮಾಡಲು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.

Speculation Grows Over Hardik Pandya s Return to Test Cricket After Red Ball Practice

ಹಾರ್ದಿಕ್ ಅಭ್ಯಾಸ

ಹಾರ್ದಿಕ್‌ ಪಾಂಡ್ಯ ಟೆಸ್ಟ್ ತಂಡ ಸೇರುತ್ತಾರಾ ಎಂಬ ಚರ್ಚೆಗಳು ವ್ಯಾಪಕವಾಗಿವೆ. ಟೀಮ್ ಇಂಡಿಯಾದ ಆಲ್‌ರೌಂಡರ್‌ ಸದ್ಯ ಒಂದು ಪೋಸ್ಟ್‌ನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಫೋಟೋ ವೈರಲ್

ಈ ಫೋಟೋಗಳನ್ನೇ ಸೂಕ್ಷ್ಮವಾಗಿ ನೋಡಿದರೆ, ಹಾರ್ದಿಕ್ ಕೈಯಲ್ಲಿ ಕೆಂಪು ಚೆಂಡು ಕಾಣುತ್ತದೆ. ಇದಲ್ಲದೆ, ಬ್ಯಾಟಿಂಗ್ ಮಾಡುವಾಗ, ಅವರ ಬ್ಯಾಟ್ ಮುಂದೆ ಕೆಂಪು ಚೆಂಡು ಕಾಣುತ್ತದೆ. ಇದನ್ನು ನೋಡಿದರೆ ಹಾರ್ದಿಕ್ ಪಾಂಡ್ಯ ಟೆಸ್ಟ್‌ ಕ್ರಿಕೆಟ್‌ಗೆ ಮರಳಲು ಭರ್ಜರಿ ತಯಾರಿ ನಡೆಸಿದ ಹಾಗೆ ತೋರುತ್ತಿದೆ. ಇದಕ್ಕೆ ಅಭಿಮಾನಿಗಳು ಭಿನ್ನ ವಿಭಿನ್ನ ಕಮೆಂಟ್‌ಗಳನ್ನು ಮಾಡಿದ್ದಾರೆ.

Speculation Grows Over Hardik Pandya s Return to Test Cricket After Red Ball Practice

ಸದ್ಯ ದೇಶೀಯ ಟೂರ್ನಿ ದುಲೀಪ್‌ ಟ್ರೋಫಿಯ ಪಂದ್ಯಗಳು ಭಾರತದಲ್ಲಿ ನಡೆಯುತ್ತಿವೆ. ಈ ಟೂರ್ನಿಯಲ್ಲೂ ಹಾರ್ದಿಕ್ ಪಾಂಡ್ಯ ಆಡುತ್ತಿಲ್ಲ. ಇದೀಗ ಹಾರ್ದಿಕ್ ಟೆಸ್ಟ್ ಕ್ರಿಕೆಟ್‌ಗೆ ಪುನರಾಗಮನ ಮಾಡಲಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ. ಹಾಗಾಗಿ ಇದಕ್ಕೆ ಉತ್ತರ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಒಂದು ವೇಳೆ ಹಾರ್ದಿಕ್‌ ಟೆಸ್ಟ್ ತಂಡ ಸೇರಿದರೆ ಟೀಮ್ ಇಂಡಿಯಾದ ಬಲ ಹೆಚ್ಚುತ್ತದೆ.

ಹಾರ್ದಿಕ್ ಟೆಸ್ಟ್‌ ಸಾಧನೆ

ಹಾರ್ದಿಕ್ ಪಾಂಡ್ಯ ಇಲ್ಲಿಯ ವರೆಗೆ 11 ಟೆಸ್ಟ್‌ ಪಂದ್ಯಗಳನ್ನು ಭಾರತದ ಪರ ಆಡಿದ್ದಾರೆ. ಇನ್ನು 18 ಇನಿಂಗ್ಸ್‌ಗಳಲ್ಲಿ ಇವರಿಗೆ ಬ್ಯಾಟ್ ಮಾಡುವ ಅವಕಾಶ ಲಭಿಸಿದ್ದು, 31.29 ಸರಾಸರಿಯಲ್ಲಿ 532 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳು ಸೇರಿವೆ. ಇನ್ನು ಹಾರ್ದಿಕ್‌ ತಮ್ಮ ಬೌಲಿಂಗ್‌ ದಾಳಿಯನ್ನು 19 ಇನಿಂಗ್ಸ್‌ಗಳಲ್ಲಿ ನೆರವೇರಿಸಿದ್ದು, 17 ವಿಕೆಟ್‌ ಕಬಳಿಸಿದ್ದಾರೆ.

Story first published: Thursday, September 19, 2024, 8:59 [IST]
Other articles published on Sep 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+