For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌, ಸ್ಕಾಟ್ಲೆಂಡ್‌ ಸರಣಿಗೂ ಮುನ್ನವೇ ಆಸೀಸ್‌ಗೆ ಪೆಟ್ಟು: ವೇಗದ ಬೌಲರ್‌ ಔಟ್‌

ವಿಶ್ವದಲ್ಲಿ ಮತ್ತೆ ಕ್ರಿಕೆಟ್‌ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ತಂಡಗಳು ತಮ್ಮ ತಮ್ಮ ವೇಳಾಪಟ್ಟಿಯಂತೆ ಆಡಲು ಆರಂಭಿಸುತ್ತವೆ. ಭಾರತದ ಆಟಗಾರರು ಸದ್ಯ ರೆಸ್ಟ್‌ನಲ್ಲಿದ್ದು, ಇನ್ನೊಂದು ತಿಂಗಳ ಬಳಿಕ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಗೆ ಕಾಯುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾ ಸಹ ತನ್ನ ಮುಂದಿನ ಸರಣಿಯನ್ನು ಎದುರು ನೋಡುತ್ತಿದೆ. ಸೆಪ್ಟೆಂಬರ್‌ನಲ್ಲಿ ಆಸೀಸ್‌ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಎರಡು ದೇಶಗಳ ನಡುವಿನ ಟಿ20 ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಪ್ರವಾಸಕ್ಕೂ ಮುನ್ನವೇ ಆಸೀಸ್‌ ತಂಡಕ್ಕೆ ಭಾರೀ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ವೇಗದ ಬೌಲರ್ ಸ್ಪೆನ್ಸರ್ ಜಾನ್ಸನ್ ಗಾಯದ ಸಮಸ್ಯೆಯಿಂದಾಗಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಇವರ ಸ್ಥಾನವನ್ನು ಸ್ಟಾರ್‌ ಆಟಗಾರ ಸೀನ್ ಅಬಾಟ್ ತುಂಬಲಿದ್ದಾರೆ.

Spencer Johnson Injured Sean Abbott to Replace Him for T20 Series

ಸ್ಪೆನ್ಸರ್ ಜಾನ್ಸನ್‌ಗೆ ಗಾಯ

ದಿ ಹಂಡ್ರೆಡ್ ಮೆನ್ಸ್ ಕಾಂಪಿಟೇಷನ್ ಟೂರ್ನಿಯಲ್ಲಿ ಆಡುವಾಗ ಸ್ಪೆನ್ಸರ್ ಜಾನ್ಸನ್ ಗಾಯಗೊಂಡರು. ಅವರ ಗಾಯ ಚೇತರಿಕೆಗೆ ಕಾಲಾವಕಾಶ ಬೇಕಾಗುತ್ತದೆ. ಈ ಹಿಂದಿನ ಪಂದ್ಯದಲ್ಲಿ ಸ್ಟಾರ್ ಬೌಲರ್ ಸ್ಥಿರ ಪ್ರದರ್ಶನ ನೀಡಲು ಸಾಧ್ಯವೇ ಆಗಿರಲಿಲ್ಲ. ಈ ಸರಣಿಯ ಕೊನೆಯ 6 ಪಂದ್ಯಗಳಲ್ಲಿ ಅವರು ಕೇವಲ 2 ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಅವರು ನಾರ್ದರ್ನ್ ಸೂಪರ್ಚಾರ್ಜರ್ಸ್ ವಿರುದ್ಧ ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. ಈ ವೇಳೆ ಅವರು 20 ಬೌಲ್‌ ಎಸೆದು 10 ರನ್‌ ನೀಡಿ 1 ವಿಕೆಟ್‌ ಕಬಳಿಸಿದ್ದರು.

ಬಿಬಿಎಲ್‌ನಲ್ಲಿ ಮಿಂಚು

ಸ್ಪೆನ್ಸರ್ ಜಾನ್ಸನ್ ಬದಲಿಗೆ ಆಸ್ಟ್ರೇಲಿಯಾ ತಂಡಕ್ಕೆ ಇನ್ನೋಬ್ಬ ಸ್ಟಾರ್ ಆಟಗಾರ ಎಂಟ್ರಿ ನೀಡಿದ್ದಾರೆ. ಇವರು ಬಿಬಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಿಂಚು ಹರಿಸಿದ್ದರು. ಆಸೀಸ್ ಪರ ಆಡಲು ಸೀನ್ ಅಬಾಟ್ ಸಜ್ಜಾಗಿದ್ದು, ಇದುವರೆಗೆ ಇವರು 15 ಟಿ20 ಪಂದ್ಯಗಳಲ್ಲಿ 15 ವಿಕೆಟ್‌ಗಳು ಉರುಳಿಸಿದ್ದಾರೆ. ಅಬಾಟ್ ಬಿಬಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇವರು ಬಿಬಿಎಲ್‌ನಲ್ಲಿ ಒಟ್ಟು 165 ವಿಕೆಟ್ ಕಬಳಿಸಿದ್ದಾರೆ. ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಸ್ಥಾನ ಭಧ್ರ ಪಡಿಸಿಕೊಳ್ಳುವ ಪ್ಲ್ಯಾನ್ ಅಬಾಟ್‌ ಅವರದ್ದಾಗಿದೆ.

Spencer Johnson Injured Sean Abbott to Replace Him for T20 Series

ಮಿಚೆಲ್ ಸ್ಟಾರ್ಕ್‌ಗೆ ವಿಶ್ರಾಂತಿ

ಸ್ಪೆನ್ಸರ್ ಜಾನ್ಸನ್ ಕಳೆದ ವರ್ಷ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ್ದರು. ಅವರು ಆಸ್ಟ್ರೇಲಿಯಾ ಪರ 5 ಟಿ20 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಒಂದು ಏಕದಿನ ಪಂದ್ಯದಲ್ಲೂ ಆಸೀಸ್ ಪರ ಕಾಣಿಸಿಕೊಂಡಿದ್ದಾರೆ.

ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಮಿಚೆಲ್ ಸ್ಟಾರ್ಕ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಅವರು ಏಕದಿನ ಪಂದ್ಯಗಳಲ್ಲಿ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ವೇಗಿ ಪ್ಯಾಟ್ ಕಮಿನ್ಸ್ ಸಹ ಪ್ರವಾಸದಿಂದ ಹೊರಗುಳಿದಿದ್ದಾರೆ.

ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಆಸ್ಟ್ರೇಲಿಯಾ T20 ತಂಡ:

ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ.

Story first published: Thursday, August 15, 2024, 17:20 [IST]
Other articles published on Aug 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+