ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಭಾರೀ ಪೆಟ್ಟು: ಪ್ರಮುಖ ಬೌಲರ್ ಗಾಯಕ್ಕೆ ತುತ್ತು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಎರಡನೇ ದಿನದವರೆಗೂ ಇಂಗ್ಲೆಂಡ್ ತಂಡ ಸಂಪೂರ್ಣ ಹಿನ್ನಡೆ ಅನುಭವಿಸಿತ್ತು. ಭಾರತ 175 ರನ್‌ಗಳ ಮುನ್ನಡೆ ಸಾಧಿಸಿದೆ. ಇದೇ ವೇಳೆ ಇಂಗ್ಲೆಂಡ್ ತಂಡದ ಬೌಲರ್ ಒಬ್ಬ ಗಾಯಕ್ಕೆ ತುತ್ತಾಗಿದ್ದಾರೆ. ತಂಡದ ಬೌಲರ್ ಜಾಕ್ ಲೀಚ್ ಗಾಯಗೊಂಡಿದ್ದಾರೆ. ಲೀಚ್ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಅವರ ಗಾಯವು ಇಂಗ್ಲೆಂಡ್‌ನ ಒತ್ತಡವನ್ನು ಹೆಚ್ಚಿಸಿದೆ. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.
ಲೀಚ್ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬತ್ತಳಿಕೆಯ ಪ್ರಮುಖ ಸ್ಪಿನ್ ಬೌಲರ್. ಅವರ ಗಾಯ ತಂಡಕ್ಕೆ ಹಾನಿಯಾನ್ನು ಉಂಟು ಮಾಡಬಹುದು. ಪಂದ್ಯದ ಮೊದಲ ದಿನವೇ ಲೀಚ್ ಗಾಯಗೊಂಡರು. ಅವರು ಬೌಂಡರಿ ನಿಲ್ಲಿಸಲು ಪ್ರಯತ್ನಿಸುತ್ತಿರುವಾಗ ಗಾಯಗೊಂಡರು. ಮತ್ತು ಮರುದಿನ ಅವರು ಗಂಭೀರವಾದ ಮೊಣಕಾಲಿನ ನೋವನ್ನು ಅನುಭವಿಸಿದರು. ಟೀಂ ಇಂಡಿಯಾ ವಿರುದ್ಧ ಲೀಚ್ ಉತ್ತಮ ಬೌಲಿಂಗ್ ಮಾಡಿದ್ದಾರೆ. 25 ಓವರ್ ಗಳಲ್ಲಿ 54 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 6 ಮೇಡನ್ ಓವರ್ ಗಳನ್ನೂ ಹಾಕಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಕೋಚ್ ಜಿತನ್ ಪಟೇಲ್ ಕೂಡ ಲೀಚ್ ಗಾಯದ ತೀವ್ರತೆಯ ಬಗ್ಗೆ ಖಚಿತಪಡಿಸಿದ್ದಾರೆ. ಆದರೆ, ಶನಿವಾರ ಬೌಲಿಂಗ್ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ಕ್ರಿಕ್‌ಇನ್‌ಫೋದ ಸುದ್ದಿಯ ಪ್ರಕಾರ, ಜಿತನ್ ಪಟೇಲ್, "ಲೀಚ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ದಿನ ಅವರನ್ನು ಔಟ್‌ಫೀಲ್ಡ್‌ನಲ್ಲಿ, ಫೀಲ್ಡಿಂಗ್ ಮಾಡುವಾಗ ಅವರು ತೊಂದರೆ ಎದುರಿಸುತ್ತಿರುವುದು ಕಂಡುಬಂದಿದೆ. ಮೊದಲ ದಿನವೇ ಲೀಚ್ ಗಾಯಗೊಂಡಿದ್ದರು. ಫೀಲ್ಡಿಂಗ್ ಮಾಡುವಾಗ ಅವರ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರ ನಂತರವೇ ಸಮಸ್ಯೆಗಳು ಪ್ರಾರಂಭವಾದವು.
ಎಡಗೈ ಆರ್ಥೊಡಾಕ್ಸ್ ಬೌಲರ್ ಜಾಕ್ ಲೀಚ್ ಅವರು ಅನೇಕ ಸಂದರ್ಭಗಳಲ್ಲಿ ಇಂಗ್ಲೆಂಡ್‌ಗೆ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಇದುವರೆಗೆ ಆಡಿರುವ 35 ಟೆಸ್ಟ್ ಪಂದ್ಯಗಳಲ್ಲಿ 125 ವಿಕೆಟ್ ಪಡೆದಿದ್ದಾರೆ. ಲೀಚ್ ಅವರ ಇನ್ನಿಂಗ್ಸ್‌ನಲ್ಲಿ 66 ರನ್‌ಗಳಿಗೆ 5 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications