Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sai Kishore: ಇಂಗ್ಲೆಂಡ್‌ ಫ್ಲೈಟ್ ಹತ್ತಲಿರುವ ಸಾಯಿ ಕಿಶೋರ್‌: ಏಕೆ?

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಬರ್ಮಿಂಗ್‌ ಹ್ಯಾಮ್‌ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇನ್ನು ಟೀಮ್ ಇಂಡಿಯಾ ಪ್ರಕಟಿಸಿದಾಗ ಸ್ಟಾರ್ ಸ್ಪಿನ್ ಬೌಲರ್‌ ಸಾಯಿ ಕಿಶೋರ್‌ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಈಗ ಇವರು ಇಂಗ್ಲೆಂಡ್ ಫ್ಲೈಟ್ ಹತ್ತಲು ರೆಡಿಯಾಗಿದ್ದಾರೆ. ಇವರು ಯಾವ ತಂಡದ ಪರ ಆಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರ್‌ ಸಾಯಿ ಕಿಶೋರ್ ಭಾರತದ ಭರವಸೆಯ ಸ್ಪಿನ್ ಬೌಲರ್. ಇವರು ಇತ್ತೀಚಿಗೆ ನಡೆದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇವರು ಇಂಗ್ಲೆಂಡ್ ಫ್ಲೈಟ್ ಏರಲಿದ್ದು, ಕೌಂಟಿ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದನ್ನು ಕಾಣಬಹುದಾಗಿದೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪಂದ್ಯಗಳಿಗೆ ಸರ್ರೆ ತಂಡದೊಂದಿಗೆ ಸಹಿ ಹಾಕಿದ್ದಾರೆ. ಜುಲೈ ಅಂತ್ಯದಲ್ಲಿ ಈ ಪಂದ್ಯಗಳು ನಡೆಯಲಿವೆ.

Spin Sensation Sai Kishore Joins Surrey for County Championship Stint

ಸರ್ರೆ ಕ್ಲಬ್‌ ಸೇರಿದ್ದು ಖುಷಿಯ ವಿಚಾರ ಎಂದು ಸಾಯಿ ಕಿಶೋರ್ ಹೇಳಿದ್ದಾರೆ. ನಾನು ಎರಡು ಪಂದ್ಯಗಳನ್ನು ಆಡಲು ನಿಜಕ್ಕೂ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ವಿಶ್ವದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಸರ್ರೆ ಒಂದಾಗಿದೆ. ಈ ತಂಡದ ಬಗ್ಗೆ ಬಹಳ ಜನರಿಂದ ಒಳ್ಳೆಯ ಮಾತುಗಳನ್ನು ಕೇಳಿದ್ದೇನೆ. ಈಗ ಈ ತಂಡದ ಪರ ಆಡಲು ತಯಾರಾಗಿದ್ದೇನೆ ಎಂದು ಸಾಯಿ ಕಿಶೋರ್ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಸರ್ರೆ ಕ್ಲಬ್‌ ಅಧಿಕಾರಿ, ಸಾಯಿ ಕಿಶೋರ್‌ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದು ಸಂತೋಷ ತಂದಿದೆ. ದೇಶೀಯ ಟೂರ್ನಿಯಲ್ಲಿ ಅವರ ದಾಖಲೆ ಅಮೋಘವಾಗಿದೆ. ಅವರಿಗೆ ಅನುಭವದ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ

ಗುಜರಾತ್‌ ಟೈಟನ್ಸ್‌ ತಂಡ ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರ ಹಿಂದೆ ಸಾಯಿ ಕಿಶೋರ್ ಕೊಡುಗೆ ಸಹ ಅಪಾರ. ಇವರು ಒಟ್ಟಾರೆ ಐಪಿಎಲ್‌ನಲ್ಲಿ 32 ಪಂದ್ಯಗಳನ್ನು ಕಬಳಿಸಿದ್ದಾರೆ. ಇವರು 2025ರಲ್ಲಿ ಒಟ್ಟು 19 ವಿಕೆಟ್‌ ಹೊಂದಿದ್ದಾರೆ. ಯಾವುದೇ ಬ್ಯಾಟರ್‌ಗಳಿಗೆ ಇವರು ಚಳ್ಳೆ ಹಣ್ಣು ತಿನ್ನಿಸುವ ಕ್ಷಮತೆಯನ್ನು ಹೊಂದಿದ್ದಾರೆ.

ತಮಿಳು ನಾಡು ತಂಡದ ಪರ ದೇಶೀಯ ಪಂದ್ಯಗಳು ಆಡುವ ಸಾಯಿ ಕಿಶೋರ್ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 60 ಲೀಸ್ಟ್‌ ಎ ಪಂದ್ಯಗಳಲ್ಲಿ 90 ವಿಕೆಟ್‌ ಕಬಳಿಸಿದ್ದಾರೆ. ಇವರು 46 ಪ್ರಥಮ ದರ್ಜೆ ಪಂದ್ಯಗಳಲ್ಲಿ 192 ವಿಕೆಟ್‌ ಪಡೆದಿದ್ದಾರೆ. ಇತ್ತೀಚೆಗೆ, ನಾಯಕರಾಗಿ, ಅವರು ತಿರುಪ್ಪೂರ್ ತಮಿಳನ್ಸ್ ತಂಡವನ್ನು ತಮಿಳುನಾಡು ಪ್ರೀಮಿಯರ್ ಲೀಗ್ ಮುನ್ನಡೆಸಿದ ಅನುಭವ ಹೊಂದಿದ್ದಾರೆ.

Story first published: Monday, July 7, 2025, 22:21 [IST]
Other articles published on Jul 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+