
ಪಂಜಾಬ್‌ನ ಸ್ಪಿನ್ನರ್ ರಾಹುಲ್ ಶರ್ಮಾ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆಯ ಎಲಲ್ಆ ಮಾದರಿಗಳಿಗೆ ವಿದಾಯವನ್ನು ಘೋಷಣೆ ಮಾಡಿದ್ದಾರೆ. 2010ರ ಐಪಿಎಲ್ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಪರವಾಗಿ ಆಡಿದ್ದ ರಾಹುಲ್ ಶರ್ಮಾ 2011ರಲ್ಲಿ ಪುಣೆ ವಾರಿಯರ್ಸ್ ಪರವಾಗಿ ಆಡಿದ್ದರು. ಈ ಆವೃತ್ತಿಯಲ್ಲಿ ನೀಡಿದ ಪ್ರದರ್ಶನ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.
2011ರ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದಿಂದಾಗಿ ಭಾರತ ತಂಡದಲ್ಲಿ ಅವಕಾಶವನ್ನು ಪಡೆದುಕೊಳ್ಳುವಲ್ಲಿ ರಾಹುಲ್ ಶರ್ಮಾ ಯಶಸ್ವಿಯಾಗಿದ್ದರು. ತಮ್ಮ ಬೌಲಿಂಗ್‌ನಲ್ಲಿನ ಏರಿಳಿತ ಹಾಗೂ ಬೌನ್ಸ್‌ಅನ್ನು ಅದ್ಭುತವಾಗಿ ಬಳಸಿಕೊಂಡ ಅವರು ಬ್ಯಾಟರ್‌ಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾಗಿದ್ದರು. ಆ ಒಂದು ಆವೃತ್ತಿಯಲ್ಲಿ 16 ವಿಕೆಟ್ ಪಡೆದು ಮಿಂಚಿದ ರಾಹುಲ್ ಶರ್ಮಾ ನಂತರ ಭಾರತಕ್ಕೂ ಆಯ್ಕೆಯಾದರು.
ಭಾರತ ತಂಡದಲ್ಲಿ ಆಡುವ ಅವಕಾಶ ಪಡೆದ ರಾಹುಲ್ ಶರ್ಮಾ ನಾಲ್ಕು ಏಕದಿನ ಪಂದ್ಯಗಳಲ್ಲಿ ಹಾಗೂ ಎರಡು ಅಂತಾಷರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಬಳಿಕ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ರಾಹುಲ್ ಶರ್ನಾ ಒಂದು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ನಿರಪರಾಧಿ ಎಂದು ಸಾಬೀತುಪಡಿಸಿದರು. ಆದರೆ ನಂತರ ಭಾರತ ತಂಡದಲ್ಲಿ ಆಡುವ ಅವಕಾಶ ರಾಹುಲ್ ಶರ್ಮಾಗೆ ದೊರೆಯಲಿಲ್ಲ.
2014ರಲ್ಲಿ ತಮ್ಮ ಅಂತಿಮ ಐಪಿಎಲ್ ಪಂದ್ಯವನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ್ದಾರೆ. 201ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಪ್ಪಂದವನ್ನು ಕೂಡ ಹೊಂದಿದ್ದರು. ಆದರೆ ಆಡುವ ಅವಕಾಶ ದೊರೆಯಲಿಲ್ಲ. 2014ರ ಬಳಿಕ ರಾಹುಲ್ ಶರ್ಮಾ ದೇಶೀಯ ಕ್ರಿಕೆಟ್ ಅಥವಾ ಲಿಸ್ಟ್ ಎ ಪಂದ್ಯದಲ್ಲಿಯೂ ತಮ್ಮ ರಾಜ್ಯ ತಂಡವಾದ ಪಂಜಾಬ್ ಅನ್ನು ಪ್ರತಿನಿಧಿಸಿಲ್ಲ ರಾಹುಲ್ ಶರ್ಮಾ.
ಭಾನುವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಪತ್ರದಲ್ಲಿ ಸಾಕಷ್ಟು ಭಾವನಾತ್ಮಕ ಸಂಗತಿಗಳನ್ನು ರಾಹುಲ್ ಶರ್ಮಾ ಹಂಚಿಕೊಂಡಿದ್ದು ಡ್ರೆಸ್ಸಿಂಗ್‌ರೂಮ್‌ನಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಅವರಂತಾ ದಿಗ್ಗಜರೊಂದಿಗೆ ಕಾಲ ಕಳೆಯಲು ಅವಕಾಶ ದೊರೆತಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಆಡುವುದಕ್ಕೆ ಅವಕಾಶ ಮಾಡಿಕೊಟ್ಟ ಐಪಿಎಲ್‌ನ ಎಲ್ಲಾಫ್ರಾಂಚೈಸಿಗಳಿಗೂ ರಾಹುಲ್ ಶರ್ಮಾ ಧನ್ಯವಾದವನ್ನು ಸಲ್ಲಿಸಿದ್ದಾರೆ. ಅಲ್ಲದೆ ಪಂಜಾಬ್ ಕ್ರಿಕೆಟ್ ಅಸೊಸೊಯೇಶನ್ ಹಾಗೂ ಜಲಂಧರ್ ಜಿಲ್ಲಾ ಕ್ರಿಕೆಟ್ ಅಸೊಸಿಯೇಶನ್‌ಗೂ ಅವರು ಧನ್ಯವಾದವನ್ನು ಸಲ್ಲಿಸಿದ್ದಾರೆ.