Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuzvendra Chahal: ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌ ಇವರೇ!

ಮಂಗಳವಾರ ನವದೆಹಲಿಯ ಅರಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ತಮ್ಮ ಹೆಸರು ದಾಖಲೆ ಪುಸ್ತಕದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ರಾಜಸ್ಥಾನದ ಪರ ಸತತವಾಗಿ ವಿಕೆಟ್‌ಗಳನ್ನು ಯುಜ್ವೇಂದ್ರ ಚಹಾಲ್ ಪಡೆಯುತ್ತಿದ್ದಾರೆ. ಕಳೆದ ಪಂದ್ಯದಲ್ಲೂ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರನ್ನು ಔಟ್‌ ಮಾಡುವ ಮೂಲಕ ಚಹಾಲ್‌ ಇತಿಹಾಸವನ್ನು ಸೃಷ್ಟಿಸಿದ್ದಾರೆ.

Spinner Yuzvendra Chahal new record in T20 cricket

ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್‌ ಪಡೆದ ಮೊದಲ ಬೌಲರ್‌

ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಇನ್ನಿಂಗ್ಸ್‌ನ 14ನೇ ಓವರ್ ಬೌಲ್ ಮಾಡಲು ಬಂದಿದ್ದ ಚಹಾಲ್ ಕೊನೆಯ ಎಸೆತದಲ್ಲಿ ಪಂತ್ ಅವರನ್ನು ಔಟ್‌ ಮಾಡಿದರು. ಪಂತ್‌ ಸಿಕ್ಸರ್‌ ಹೊಡೆಯುವ ಬರದಲ್ಲಿ ಸಮತೋಲನ ಕಳದುಕೊಂಡು ಚೆಂಡನ್ನು ತಪ್ಪಾಗಿ ಹೊಡೆದರು ಹೀಗಾಗಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಟ್ರೆಂಟ್ ಬೌಲ್ಟ್‌ಗೆ ಸುಲಭವಾದ ಕ್ಯಾಚ್ ನೀಡಿ ಪಂತ್‌ ಹೊರ ನಡೆದರು. ಈ ಮೂಲಕ ಬಲಗೈ ಲೆಗ್ ಸ್ಪಿನ್ನರ್ ಆಗಿರುವ ಯುಜ್ವೇಂದ್ರ ಚಹಾಲ್ ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಆಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತ ಬೌಲರ್ಸ್‌

ಈವರೆಗೆ ಚಹಾಲ್ ಆಡಿರುವ 300 ಟಿ20 ಪಂದ್ಯಗಳಿಂದ ‌350 ವಿಕೆಟ್‌ಗಳನ್ನು ಕಬಳಿಸಿ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತ ಬೌಲರ್‌ ಎಂಬ ಸಾಧನೆ ಮಾಡದ್ದಾರೆ. ನಂತರ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 310 ವಿಕೆಟ್‌ಗಳೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತಮ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮತ್ತೊರ್ವ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿ 303 ವಿಕೆಟ್‌ಗಳಿದ್ದರೆ, ಸ್ವಿಂಗ್‌ ಕಿಂಗ್‌ ಖ್ಯಾತಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ 297 ಟಿ20 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 285 ವಿಕೆಟ್‌ ಪಡೆದು ಐದನೇ ಸ್ಥಾನದಲ್ಲಿದ್ದಾರೆ.

Story first published: Wednesday, May 8, 2024, 12:50 [IST]
Other articles published on May 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+