For Quick Alerts
ALLOW NOTIFICATIONS  
For Daily Alerts
 

ಭಾರತದ ಪಿಚ್‌ಗಳಲ್ಲಿ ಸ್ಪಿರ್ನರ್ಸ್‌ ಕಿಂಗ್: ಹೇಗಿದೆ ಗೊತ್ತಾ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳ ಪ್ರದರ್ಶನ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ ಪಂದ್ಯಗಳ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಮುತ್ತಿನ ನಗರಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಅಭಿಯಾನ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಟೆಸ್ಟ್‌ ಸರಣಿಯಲ್ಲಿ ಅಂಕ ಪಟ್ಟಿ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಉಭಯ ತಂಡಗಳದ್ದಾಗಿದೆ.

ಭಾರತದಲ್ಲಿ ಟೆಸ್ಟ್‌ ಸರಣಿ ನಡೆಯುತ್ತಿದೆ ಎಂದರೆ ಹೇಳೋದೆ ಬೇಡ್‌ ಸ್ಪಿನ್ ಬೌಲರ್‌ಗಳು ರಾಜರಂತೆ ಮೆರೆಯುತ್ತಾರೆ. ತವರಿನ ಪಿಚ್‌ಗಳಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ಗಳ ಕೈಯಿಂದ ಪಿಚ್‌ ಆಗುವ ಚೆಂಡು, ಇವರು ಹೇಳಿದಂತೆ ಕುಣಿಯುತ್ತೆದೆ. ಭಾರತದ ಎಲ್ಲ ಪಿಚ್‌ಗಳ ಮರ್ಮವನ್ನು ಅರಿತಿರುವ ಟೀಮ್ ಇಂಡಿಯಾದ ಸ್ಪಿನರ್‌ಗಳ ಪ್ರದರ್ಶನ ಭಾರತದಲ್ಲಿ ಹೇಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದಲ್ಲಿ ಈ ಸರಣಿಲ್ಲಿ ಒಟ್ಟು ನಾಲ್ಕು ಡಿಫರೆಂಟ್ ಸ್ಪಿನ್ ಬೌಲರ್‌ಗಳು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಕೇರಂ ಸ್ಪೆಷಲಿಸ್ಟ್‌ ಅಶ್ವಿನ್‌, ಚೈನಾ ಮೆನ್‌ ಬೌಲರ್‌ ಕುಲ್ದೀಪ್ ಯಾದವ್, ಎಡಗೈ ಸ್ಪಿನ್ ಬೌಲರ್‌ಗಳಾದ ರವೀಂದ್ರ ಜಡೇಜಾ ಹಾಗೂ ಅಕ್ಷರ್‌ ಪಟೇಲ್‌. ಈ ಸ್ಪಿನ್ ಬೌಲರ್ಸ್‌ಗಳು ಭಾರತದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಂಕಿ ಅಂಶಗಳು ಇದಕ್ಕೆ ಸಾಕ್ಷಿ ನೀಡುತ್ತಿವೆ.

Spinners are the king of Indian pitches, How is the performance in India?

ಆರ್‌.ಆಶ್ವಿನ್‌

ಟೀಮ್ ಇಂಡಿಯಾದ ಸ್ಟಾರ್‌ ಸ್ಪಿನರ್‌ ಆರ್‌.ಅಶ್ವಿನ್‌ ತಮ್ಮ ಪ್ರಭಾವಿ ಬೌಲಿಂಗ್‌ನಿಂದ ಎದುರಾಳಿಗಳನ್ನು ಕಾಡಬಲ್ಲರು. ಐತಿಹಾಸಿಕ ದಾಖಲೆಯ ಸನಿಹದಲ್ಲಿರುವ ಅಶ್ವಿನ್‌ ಇನ್ನು ಹತ್ತು ವಿಕೆಟ್‌ ಪಡೆದಲ್ಲಿ 500 ವಿಕೆಟ್‌ ಸೇರಲಿದ್ದಾರೆ. ಅಶ್ವಿನ್‌ ಇದುವರೆಗೆ 95 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 490 ವಿಕೆಟ್‌ ಕಬಳಿಸಿದ್ದಾರೆ. ಭಾರತದಲ್ಲಿ ಅಶ್ವಿನ್‌ ಚೆಂಡುಗಳನ್ನು ಎದುರಿಸುವುದು ಬ್ಯಾಟರ್‌ಗಳ ಕಷ್ಟ.. ಇವರು 55 ಟೆಸ್ಟ್‌ ಪಂದ್ಯಗಳಲ್ಲಿ 337 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧ ಅಶ್ವಿನ್‌ 19 ಪಂದ್ಯಗಳಲ್ಲಿ 88 ವಿಕೆಟ್‌ ಪಡೆದಿದ್ದು, ಇನ್ನು 12 ವಿಕೆಟ್‌ ಪಡೆದಲ್ಲಿ ವಿಕೆಟ್‌ಗಳ ಶತಕದ ಸಾಧನೆಯನ್ನು ಸಹ ಮಾಡಲಿದ್ದಾರೆ.

Spinners are the king of Indian pitches, How is the performance in India?

ರವೀಂದ್ರ ಜಡೇಜಾ

ಇನ್ನು ಎಡಗೈ ಸ್ಪಿನ್ ಬೌಲರ್‌ ರವೀಂದ್ರ ಜಡೇಜಾ ಎಲ್ಲರ ಚಿತ್ತ ಕದ್ದ ಇನ್ನೋರ್ವ ಬೌಲರ್‌.. ಇವರು ಆಡಿದ 68 ಪಂದ್ಯಗಳಲ್ಲಿ 275 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಇಂಗ್ಲೆಂಡ್‌ ವಿರುದ್ಧ ಆಡಿದ 16 ಪಂದ್ಯಗಳಲ್ಲಿ 51 ವಿಕೆಟ್‌ ಕಬಳಿಸಿ ಅಬ್ಬರಿಸಿದ್ದಾರೆ. ಇನ್ನು ತವರಿನಲ್ಲಿ ಇವರು ಅಶ್ವಿನ್‌ಗೆ ಉತ್ತಮ ಸಾಥ್ ನೀಡಬಲ್ಲ ಬೌಲರ್ ಇವರು 40 ಪಂದ್ಯಗಳಲ್ಲಿ 194 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಆರು ವಿಕೆಟ್‌ ಕಬಳಿಸಿದ್ದಲ್ಲಿ 200 ವಿಕೆಟ್‌ ಪಡೆದ ಸಾಧನೆ ಇವರದ್ದಾಗಲಿದೆ.

ಅಕ್ಷರ್ ಪಟೇಲ್

ಟೀಮ್ ಇಂಡಿಯಾದ ಭರವಸೆ ಸ್ಪಿನ್ ಬೌಲರ್‌ ಅಕ್ಷರ್ ಪಟೇಲ್ ಸಹ ವಿಕೆಟ್‌ ಬೇಟೆ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಇಲ್ಲಿವರೆಗೆ ಅಕ್ಷರ್ ಆಡಿದ 12 ಪಂದ್ಯಗಳಲ್ಲಿ 50 ವಿಕೆಟ್‌ ಕಬಳಿಸಿದ್ದಾರೆ. ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ಅಕ್ಷರ್ 10 ಪಂದ್ಯಗಳಲ್ಲಿ 42 ವಿಕೆಟ್‌ ಪಡೆದಿದ್ದಾರೆ. ಇಂಗ್ಲೆಂಡ್‌ ಬ್ಯಾಟರ್‌ಗಳಿಗೆ ಇವರು ಸಿಂಹ ಸ್ವಪ್. ಇಂಗ್ಲೆಂಡ್ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ 27 ವಿಕೆಟ್‌ ಕಬಳಿಸಿದ್ದಾರೆ.

Spinners are the king of Indian pitches, How is the performance in India?

ಕುಲ್‌ದೀಪ್ ಯಾದವ್

ಕಳೆದ ವರ್ಷ ಅಬ್ಬರದ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರುವ ಟೀಮ್ ಇಂಡಿಯಾದ ಚೈನಾ ಮೆನ್ ಬೌಲರ್ ಕುಲ್‌ದೀಪ್ ಯಾದವ್. ಇವರು ಆಡಿದ 8 ಪಂದ್ಯಗಳಲ್ಲಿ 34 ವಿಕೆಟ್‌ ಕಬಳಿಸಿದ್ದಾರೆ. ಇವರು ತವರು ಹಾಗೂ ವಿದೇಶದಲ್ಲಿ ಪ್ರಭಾವ ಶಾಲಿ ಬೌಲರ್‌. 29 ವರ್ಷದ ಯುವ ಬೌಲರ್‌ ಹಲವು ದಾಖಲೆಗಳನ್ನು ಅಳಿಸಿ ಹಾಕುವ ಕ್ಷಮತೆ ಹೊಂದಿದ್ದಾರೆ.

Story first published: Monday, January 22, 2024, 8:00 [IST]
Other articles published on Jan 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+