ವಿಭಜಿತ ನಾಯಕತ್ವ ನಮ್ಮ ಸಂಸ್ಕೃತಿಯಲ್ಲಿ ಇಲ್ಲ: ಕಪಿಲ್ ದೇವ್

ನವದೆಹಲಿ: ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಇಬ್ಬರು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಇರೋಲ್ಲ. ಹಾಗೇನೆ ವಿಭಜಿತ ನಾಯಕತ್ವ ನಮ್ಮ ಸಂಸ್ಕೃತಿಯಲ್ಲಿ ಕೆಲಸಕ್ಕೆ ಬರೋಲ್ಲ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ. ಭಾರತ ತಂಡಕ್ಕೆ ಇಬ್ಬರು ನಾಯಕರು ಬೇಕೆನ್ನುವ ಮಾತಿಗೆ ಕಪಿಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಟೀಮ್ ಇಂಡಿಯಾಕ್ಕೆ ಇಬ್ಬರು ನಾಯಕರು ಬೇಕೆನ್ನುವ ಚರ್ಚೆ ಹುಟ್ಟಿಕೊಂಡಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 5ನೇ ಐಪಿಎಲ್ ಟ್ರೋಫಿ ಎತ್ತುತ್ತಲೇ ಚರ್ಚೆ ಶುರುವಾಗಿತ್ತು. ಕನಿಷ್ಠ ಟಿ20 ಮಾದರಿಗಾದರೂ ರೋಹಿತ್ ನಾಯರಾಗಬೇಕು ಎಂದು ಕೆಲವರು ಹೇಳಿದ್ದರು.
ಸದ್ಯ ಭಾರತ ಕ್ರಿಕೆಟ್ ತಂಡಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಈ ಮೂರೂ ಮಾದರಿಗಳಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಇದರಲ್ಲಿ ಟಿ20 ಮಾದರಿಗೆ ರೋಹಿತ್ ನಾಯಕರಾಗಬೇಕು ಅನ್ನೋದು ಕೆಲವರ ವಾದ. ಹೀಗೆ ಒಂದು ತಂಡಕ್ಕೆ ಇಬ್ಬಿಬ್ಬರು ನಾಯಕರಾಗಲು ಸಾಧ್ಯವಿಲ್ಲ ಎಂದು ಕಪಿಲ್ ಹೇಳಿದ್ದಾರೆ.
'ನಮ್ಮ ಸಂಸ್ಕೃತಿಯಲ್ಲಿ ಇಬ್ಬಿಬ್ಬರು ನಾಯಕರಾಗೋದು ಸಾದ್ಯವಿಲ್ಲ. ಒಂದೇ ಕಂಪನಿಯಲ್ಲಿ ಇಬ್ಬಿಬ್ಬರು ಸಿಇಒಗಳಿರುತ್ತಾರಾ? ಇಲ್ಲ ತಾನೆ? ಕೊಹ್ಲಿ ಟಿ20ಐ ಕ್ರಿಕೆಟ್ ಆಡುತ್ತಿದ್ದಾರೆಂದರೆ ಅದು ಬೇಕಾದಷ್ಟು ಸಾಕು. ಅವರೇ ನಾಯಕರಾಗಲಿ ಬಿಡಿ. ಬೇರೆ ನಾಯಕರಾಗಲಿ ಅಂತ ನನಗೂ ಅನ್ನಿಸಬಹುದು. ಆದರೆ ಅದು ಕಷ್ಟ,' ಎಂದು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಕಪಿಲ್ ಅಭಿಪ್ರಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications