Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಯೋಗದಿನ: ವಿಶೇಷ ಸಂದೇಶಗಳ ಮೂಲಕ ಶುಭಾಶಯ ಕೋರಿದ ಕ್ರೀಡಾಪಟುಗಳು

Sports Persons Take Part In International Yoga Day Celebrations

ಇಂದು ವಿಶ್ವ ಯೋಗದಿನದ ಅಂಗವಾಗಿ ವಿಶ್ವಾದ್ಯಂತ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಬಗ್ಗೆ ಭಾರತದ ಅನೇಕ ಕ್ರೀಡಾತಾರೆಯರು ಟ್ವಿಟ್ಟರ್‌ನಲ್ಲಿ ವಿಶೇಷವಾಗಿ ಈ ಬಗ್ಗೆ ಪೋಸ್ಟ್‌ಗಳನ್ನು ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.

ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಮೊಹಮದ್ ಕೈಫ್, ಹರ್ಭಜನ್ ಸಿಂಗ್ ಶ್ರೇಯಸ್ ಅಯ್ಯರ್ ಸೇರಿದಂತೆ ಫುಟ್ಬಾಲಿಗರು ಬಾಕ್ಸರ್‌ಗಳು ಈ ವಿಶೇಷ ದಿನದಂದು ತಮ್ಮ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿ ತಮ್ಮ ಯೋಗ ಭಂಗಿಯ ಫೋಟೊ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

2015ನೇ ಇಸವಿಯ ಬಳಿಕ ವಿಶ್ವಾದ್ಯಂತ ಜೂನ್ 21ನೇ ತಾರೀಕಿನಂದು ವಿಶ್ವ ಯೋಗದಿನವನ್ನಾಗಿ ಆಚರಿಸಲಾಗುತ್ತದೆ. ಅದ್ದೂರಿಯಾಗಿ ಪ್ರತೀ ಬಾರಿಯೂ ಆಚರಿಸಲ್ಪಡುವ ಈ ವಿಶೇಷ ದಿನವನ್ನು ಈ ಬಾರಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಮನೆಗಳಲ್ಲೇ ಆಚರಿಸಿಕೊಳ್ಳಲು ಕರೆ ನೀಡಲಾಗಿದೆ. ಪ್ರತೀ ವರ್ಷವೂ ಒಂದೊಂದು ಪರಿಕಲ್ಪನೆಯಲ್ಲಿ ಈ ಯೋಗದಿನವನ್ನು ಆಚರಿಸಲಾಗುತ್ತದೆ.

ಈ ಬಾರಿ ಆರೋಗ್ಯಕ್ಕಾಗಿ ಯೋಗ- ಮನೆಯಲ್ಲೇ ಯೋಗ (Yoga For Health - Yoga at Home) ಎಂಬ ಪರಿಕಲ್ಪನೆಯಲ್ಲಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ವೀರೇಂದ್ರ ಸೆಹ್ವಾಗ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಯೋಗದಿನಕ್ಕೆ ಶುಭಾಶಯ ಕೋರಿದ್ದಾರೆ.

ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಟ್ವಿಟ್ಟರ್‌ನಲ್ಲಿ ಫೋಟೋ ಹಂಚುವ ಮೂಲಕ ಶುಭಾಶಯ ಕೋರಿದ್ದಾರೆ. ಹರ್ಭಜನ್ ಸಿಂಗ್ 'ಯೋಗವೇ ಜೀವನ' ಎಂದು ಬರೆದುಕೊಂಡಿದ್ದು ತಮ್ಮ ಕುಟುಂಬ ಯೋಗದಲ್ಲಿ ತೊಡಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಯೋಗ ದಿನವನ್ನು ಮತ್ತು ಸಂಗೀತ ದಿನವನ್ನು ಆಚರಿಸಿಕೊಳ್ಳುತ್ತಿದ್ದೇನೆ ಎಂದು ತನ್ನ ಮುದ್ದಿನ ನಾಯಿಯ ಜೊತೆಗೆ ಎರಡು ವಿಭಿನ್ನ ಫೋಟೋಗಳನ್ನು ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಹಂಚಿಕೊಂಡಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಯೋಗದ ಭಂಗಿಯ ಜೊತೆಗೆ ಫೋಟೋವನ್ನು ಹಂಚಿಕೊಂಡಿದ್ದಾರೆ

ಇನ್ನು ಯೋಗದಿನದ ಅಂಗವಾಗಿ ರೆಸ್ಲರ್ ಸಂಗ್ರಾಮ್ ಸಿಂಗ್ ಕೂಡ ವಿಶೇಷ ವಿಡಿಯೋ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಯೋಗದ ಕುರಿತಾಗಿ ಸುದೀರ್ಘವಾಗಿ ಮಾತನಾಡಿದ್ದಾರೆ.

ಇನ್ನು ಭಾರತದ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಕೂಡ ವಿಶ್ವ ಯೋಗದ ಬಗ್ಗೆ ವಿಶೇಷ ಸಂದೇಶವನ್ನು ಬರೆದುಕೊಂಡಿದ್ದಾರೆ. ಯೋಗವೆಂದರೆ ನಮ್ಮೊಂದಿನ ನಮ್ಮ ಪಯಣ ಎಂದಿದ್ದಾರೆ.

Story first published: Monday, June 22, 2020, 9:52 [IST]
Other articles published on Jun 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+