For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?

Sprinter Yohan Blake wants to play in IPL for KKR or RCB after retirement

ಬೆಂಗಳೂರು, ಡಿಸೆಂಬರ್ 4: ಓಟದಾಟ ನಿಲ್ಲಿಸಿದ ಬಳಿಕ ಜಮೈಕಾದ ಸ್ಪ್ರಿಂಟರ್, ವಿಶ್ವದ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ತಾನು ಫುಟ್ಬಾಲ್‌ನಲ್ಲಿ ವೃತ್ತಿಬದುಕು ಕಂಡುಕೊಳ್ಳುವ ಆಶಯ ವ್ಯಕ್ತಪಡಿಸಿದ್ದರು. ಅದರಂತೆ ಬೊರುಸ್ಸಿಯಾ ಡಾರ್ಟ್ಮಂಡ್‌ನಿಂದ ತರಬೇತಿ ಪಡೆದಿದ್ದ ಬೋಲ್ಟ್ ಆ ಬಳಿಕ ಆಸ್ಟ್ರೇಲಿಯಾನ್ ಫುಟ್ಬಾಲ್ ಕ್ಲಬ್ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಪರವೂ ಆಡಿದ್ದರು.

ಇದೀಗ ಜಮೈಕಾದ ಮತ್ತೊಬ್ಬ ಕ್ರೀಡಾಪಟು ಯೋಹಾನ್ ಬ್ಲೇಕ್ ಕೂಡ ತನ್ನ ಮೂಲ ಕ್ರೀಡೆಗೆ ನಿವೃತ್ತಿ ನೀಡಿದ ಬಳಿಕ ತಾನು ಕ್ರಿಕೆಟ್‌ನಲ್ಲಿ ಮುಂದುವರೆಯುವ ಆಸೆ ತೋರಿಕೊಂಡಿದ್ದಾರೆ. ಅದರಲ್ಲೂ ಬ್ಲೇಕ್ ತನಗೆ ಭಾರತದ ಅದ್ದೂರಿ ಕ್ರಿಕೆಟ್‌ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಆಡಲು ಆಸೆಯಿರುವುದಾಗಿ ಹೇಳಿಕೊಂಡಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಜಮೈಕಾ ಪರ 100 ಮೀ., 200 ಮೀ. ಓಟದಲ್ಲಿ ಬೆಳ್ಳಿ ಗೆದ್ದಿದ್ದ ಬ್ಲೇಕ್, ಐಪಿಎಲ್‌ನಲ್ಲಿ ಯಾವ ತಂಡ ಪರ ಆಡುತ್ತಾರೆ, ಯಾವ ತಂಡಗಳು ಇಷ್ಟ ಎಂಬುದನ್ನೆಲ್ಲಾ ಹರವಿಕೊಂಡಿದ್ದಾರೆ.

ಕ್ರಿಕೆಟ್ ಫೀಲ್ಡ್‌ಗಿಳಿಯುವ ಆಸೆ

ಕ್ರಿಕೆಟ್ ಫೀಲ್ಡ್‌ಗಿಳಿಯುವ ಆಸೆ

ಭಾರತಕ್ಕೆ ಬಂದಿದ್ದ ಯೋಹಾನ್ ಬ್ಲೇಕ್, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ ಟಿ20 ಲೀಗ್ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ತಾನು ಓಟಕ್ಕೆ ನಿವೃತ್ತಿ ನೀಡಿದ ಬಳಿಕ ಕ್ರಿಕೆಟ್‌ ರಂಗದಲ್ಲಿ ವೃತ್ತಿ ಬದುಕು ಕಂಡುಕೊಳ್ಳಲು ಬಯಸಿರುವುದಾಗಿ ಹೇಳಿದರು.

ವೆಸ್ಟ್ ಇಂಡೀಸ್ ಪರ ಆಡುತ್ತಿಲ್ಲ

ವೆಸ್ಟ್ ಇಂಡೀಸ್ ಪರ ಆಡುತ್ತಿಲ್ಲ

ಆದರೆ ಈ ಜಮೈಕನ್ ಅಥ್ಲೀಟ್ ಬ್ಲೇಕ್‌ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಆಡಲು ಆಸೆಯಿಲ್ಲ. ಬದಲಾಗಿ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುವಾಸೆ. 'ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ನಾನು ಇನ್ನೊಂದೆರಡು ವರ್ಷ ಇರಲಿದ್ದೇನೆ. ಅನಂತರ ಕ್ರಿಕೆಟ್‌ಗೆ ಬರಲಿದ್ದೇನೆ. ಆದರೆ ನಾನು ವೆಸ್ಟ್ ಇಂಡೀಸ್ ಪರ ಆಡುತ್ತಿಲ್ಲ. ಬದಲಿಗೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡಬಯಸಿದ್ದೇನೆ,' ಎಂದು ಬ್ಲೇಕ್ ತಿಳಿಸಿದ್ದಾರೆ.

ಭಾರತದಲ್ಲಿ ಸ್ವಂತ ಫ್ರಾಂಚೈಸಿ?

ಭಾರತದಲ್ಲಿ ಸ್ವಂತ ಫ್ರಾಂಚೈಸಿ?

'ಫ್ರಾಂಚೈಸಿ ಕ್ರಿಕೆಟ್‌ ಅಂದರೆ ಅದರಲ್ಲೂ ಭಾರತದಲ್ಲಿ ತನ್ನದೇ ಒಂದು ಕ್ರಿಕೆಟ್ ಫ್ರಾಂಚೈಸಿ ಹೊಂದಲು ಇಷ್ಟಪಟ್ಟಿದ್ದೇನೆ. ಮುಖ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಅಥವಾ ರಾಯಲ್ ಚಾಲೆಂರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಲು ಬಯಸಿದ್ದೇನೆ,' ಎಂದು ಬ್ಲೇಕ್ 'ಮಿಡ್‌-ಡೇ' ಜೊತೆ ಹೇಳಿಕೊಂಡಿದ್ದಾರೆ.

ಬೆಂಗಳೂರು ತಂಡವೆಂದರೆ ಇಷ್ಟ

ಬೆಂಗಳೂರು ತಂಡವೆಂದರೆ ಇಷ್ಟ

'ಕ್ರಿಸ್ ಗೇಲ್ ದೀರ್ಘ ಕಾಲದಿಂದ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ನನಗೆ ಬೆಂಗಳೂರು ತಂಡವೆಂದರೆ ಇಷ್ಟ. ಅದರಲ್ಲೂ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಹೆಚ್ಚು ಅಚ್ಚುಮೆಚ್ಚು. ಹಾಗೇ ಕೋಲ್ಕತ್ತಾ ತಂಡವೂ ಇಷ್ಟ. ಯಾಕೆಂದರೆ ಗೇಲ್ ಆ ತಂಡದ ಪರವೂ ಆಡಿದ್ದರು,' ಎಂದು ಯೋಹಾನ್ ಹೇಳಿದ್ದಾರೆ.ಸದ್ಯ ಬ್ಲೇಕ್ ದೋಹಾ ವರ್ಲ್ಡ್ ಚಾಂಪಿಯನ್‌ಷಿಪ್‌ಗೆ ತಯಾರಿ ನಡೆಸುತ್ತಿದ್ದಾರೆ.

Story first published: Wednesday, December 4, 2019, 17:42 [IST]
Other articles published on Dec 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+