Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

7 ವರ್ಷಗಳ ಬಳಿಕ ಶ್ರೀಶಾಂತ್ ಕಮ್‌ಬ್ಯಾಕ್: ವಿಕೆಟ್ ಕಿತ್ತು ಗಮನ ಸೆಳೆದ ಕೇರಳ ಎಕ್ಸ್‌ಪ್ರೆಸ್

sreesanth comeback compitative cricket ofter 7 year

ಸುದೀರ್ಘ 7 ವರ್ಷಗಳ ಬಳಿಕ ಎಸ್ ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಎರಡನೇ ದಿನ ಕೇರಳ ಹಾಗೂ ಪುದುಚೆರಿ ತಂಡಗಳ ಮಧ್ಯೆ ನಡೆದ ಪಂದ್ಯ ಶ್ರೀಶಾಂತ್ ಕಮ್‌ಬ್ಯಾಕ್‌ಗೆ ವೇದಿಕೆಯಾಯಿತು. ಈ ಮೂಲಕ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಳ್ಳುವ ಕನಸನ್ನು ನನಸು ಮಾಡಿಕೊಂಡರು.

37ರ ಹರೆಯದ ಶ್ರೀಶಾಂತ್ ಪುದುಚೆರಿ ವಿರುದ್ಧದ ಪಂದ್ಯದಲ್ಲಿ ಎರಡನೇ ಓವರ್ ಎಸೆಯುವ ಮೂಲಕ ಬೌಲಿಂಗ್ ಆರಂಭಿಸಿದರು. ಮೊದಲ ಪಂದ್ಯದಲ್ಲಿ ಶ್ರೀಶಾಂತ್ ಗಮನಾರ್ಹ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ತಾನು ಎಸೆದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿಯೇ ಶ್ರೀಶಾಂತ್ ವಿಕೆಟ್ ಪಡೆದು ಮಿಂಚಿದ್ದಾರೆ.

ಪುದುಚೇರಿಯ ಆರಂಭಿಕ ಆಟಗಾರ ಫಾಬಿದ್ ಅಹ್ಮದ್ ಶ್ರೀಶಾಂತ್ ಎಸೆದ ಅದ್ಭುತ ಎಸೆತಕ್ಕೆ ಉತ್ತರ ನೀಡಲು ವಿಫಲರಾಗಿ ಬೌಲ್ಡ್ ಆಗುವ ಮೂಲಕ ಶ್ರೀಶಾಂತ್ ತಮ್ಮ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್‌ನ ಮೊದಲ ವಿಕೆಟ್ ಪಡೆದುಕೊಂಡಿದ್ದಾರೆ.

ಶ್ರೀಶಾಂತ್ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಜೊತೆಗೆ ರನ್ ನಿಯಂತ್ರಣ ಮಾಡುವಲ್ಲಿಯೂ ಯಶಸ್ವಿಯಾದರು. ನಾಲ್ಕು ಓವರ್‌ಗಳನ್ನು ಎಸೆದ ಶ್ರೀಶಾಂತ್ 7.20 ಎಕಾನಮಿಯಲ್ಲಿ 29 ರನ್ನಗಳನ್ನಷ್ಟೇ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಲುಕಿಕೊಂಡ ಶ್ರೀಶಾಂತ್ ಆಜೀವ ನಿಷೇಧಕ್ಕೆ ಗುರಿಯಾದರು. ಆದರೆ ಬಳಿಕ ಕಾನೂನು ಹೋರಾಟವನ್ನು ನಡೆಸಿ ಆ ಶಿಕ್ಷೆಯನ್ನು 7 ವರ್ಷಕ್ಕೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಕಳೆದ ಅಕ್ಟೋಬರ್‌ನಲ್ಲಿ ಶ್ರೀಶಾಂತ್ ಮೇಲಿದ್ದ ನಿಷೇಧ ಶಿಕ್ಷೆ ಅಂತ್ಯವಾಗಿತ್ತು. ಬಳಿಕ ಶ್ರೀಶಾಂತ್ ಕ್ರಿಕೆಟ್‌ಗೆ ಮರಳಲು ಕಠಿಣ ಅಭ್ಯಾಸವನ್ನು ನಡೆಸಿ ಕೇರಳ ಪರವಾಗಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ.

Story first published: Tuesday, January 12, 2021, 9:52 [IST]
Other articles published on Jan 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+