ಭಾರತದ ಬೆಸ್ಟ್ ನಾಯಕ, ವಿಶ್ವದ ಬ್ಯಾಟ್ಸ್‌ಮನ್, ಬೌಲರ್ ಹೆಸರಿಸಿದ ಶ್ರೀಶಾಂತ್

ನವದೆಹಲಿ, ಏಪ್ರಿಲ್ 21: ಭಾರತದ ವೇಗಿ ಎಸ್ ಶ್ರೀಶಾಂತ್ ಅವರನ್ನು ಮೊದಲ ಬಾರಿಗೆ ಗುರುತಿಸಿದ್ದು ಈಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ. ಶ್ರೀಶಾಂತ್ ಪಾದಾರ್ಪಣೆ ಮಾಡಿದ್ದು ಕನ್ನಡಿಗ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅಡಿಯಲ್ಲಿ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅಡಿಯಲ್ಲೂ ಕೆಲ ಪಂದ್ಯಗಳನ್ನು ಆಡಿದ ಅನುಭವ ಶ್ರೀಶಾಂತ್‌ಗೆ ಇದೆ.
ತನ್ನ ನೆಚ್ಚಿನ ಕ್ರಿಕೆಟ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಶಾಂತ್ ಅವರ ವೃತ್ತಿ ಬದುಕು ಮಿನುಗಿದ್ದು ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ. ಧೋನಿ ಕ್ಯಾಪ್ಟನ್ಸಿಯಲ್ಲಿ ಶ್ರೀಶಾಂತ್ 22 ಏಕದಿನ ಪಂದ್ಯಗಳು, 13 ಟೆಸ್ಟ್ ಪಂದ್ಯಗಳು ಮತ್ತು 9 ಟಿ20 ಐ ಪಂದ್ಯಗಳನ್ನು ಆಡಿದ್ದಾರೆ.
ಟೀಮ್ ಇಂಡಿಯಾದ ನಾಯಕರಲ್ಲಿ ಸಾರ್ವಕಾಲಿಕ ಬೆಸ್ಟ್ ಕ್ಯಾಪ್ಟನ್, ಈಗಿನ ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳನ್ನು ಶ್ರೀಶಾಂತ್ ಹೆಸರಿಸಿದ್ದಾರೆ.

ಸಾರ್ವಕಾಲಿಕ ಬೆಸ್ಟ್ ನಾಯಕ
ಹಲೋ ಆ್ಯಪ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಟೀಮ್ ಇಂಡಿಯಾದ ಸಾರ್ವಕಾಲಿಕ ಅತ್ಯುತ್ತಮ ನಾಯಕನನ್ನು ಹೆಸರಿಸಿದರು. ಭಾರತ ತಂಡ ಚೊಚ್ಚಲ ಬಾರಿಗೆ ಅಂದರೆ 1983ರಲ್ಲಿ ವಿಶ್ವಕಪ್ ಗೆದ್ದಾಗಿನ ನಾಯಕ ಕಪಿಲ್ ದೇವ್ ತನ್ನ ಪಾಲಿನ ಸಾರ್ವಕಾಲಿಕ ಬೆಸ್ಟ್ ಕ್ಯಾಪ್ಟನ್ ಎಂದಿದ್ದಾರೆ.

ಬಿಸಿಸಿಐನಿಂದ ಬ್ಯಾನ್
ಈಗ 37ರ ಹರೆಯದವರಾಗಿರುವ ಎಸ್ ಶ್ರೀಶಾಂತ್ 2013ರ ಆಗಸ್ಟ್‌ನಲ್ಲಿ ಬಿಸಿಸಿಐನಿಂದ ನಿಷೇಧಕ್ಕೀಡಾಗಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಶ್ರೀಶಾಂತ್ ಮತ್ತು ಅವರ ಜೊತೆ ಆಟಗಾರ ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾನ್ ಮೇಲೆ ಸ್ಪಾಟ್ ಫಿಕ್ಸಿಂಗ್ ಆಪಾದನೆ ಬಂದಿದ್ದರಿಂದ ಬಿಸಿಸಿಐ ಮೂವರನ್ನೂ ಬ್ಯಾನ್ ಮಾಡಿತ್ತು.

ಬೆಸ್ಟ್ ಬ್ಯಾಟ್ಸ್‌ಮನ್, ಬೌಲರ್
ವಿಶ್ವದಲ್ಲಿ ಈಗಿರುವ ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಬೌಲರ್ ಯಾರೆಂದು ಶ್ರೀಶಾಂತ್ ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಈಗ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಬೌಲರ್ ಎಂದು ಶ್ರೀಶಾಂತ್ ಅಭಿಪ್ರಾಯಿಸಿದ್ದಾರೆ.

ಸಚಿನ್, ಯುವರಾಜ್ ಸ್ಫೂರ್ತಿ
2011ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಶ್ರೀಶಾಂತ್, ತಾನು ಆಡುತ್ತಿದ್ದಾಗ ತನಗೆ ಸ್ಫೂರ್ತಿಯಾದವರನ್ನು ನೆನಪಿಸಿಕೊಂಡರು. '2011ರ ವಿಶ್ವಕಪ್ ಫೈನಲ್ ವೇಳೆ ನಾನು ಕೊಂಚ ನರ್ವಸ್ ಗೊಂಡಿದ್ದೆ. ಆದರೆ ಆಗ ನನಗೆ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಬೌಲಿಂಗ್ ಮಾಡಲು ಸ್ಫೂರ್ತಿ ತುಂಬಿದ್ದರು,' ಎಂದರು. ಶ್ರೀಶಾಂತ್ ಕಡೇಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದು ಅದೇ ವಿಶ್ವಕಪ್‌ನಲ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications