ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಬದಲು ಈ ಆಟಗಾರ ಉತ್ತಮ: ಎಸ್ ಶ್ರೀಶಾಂತ್

ತನ್ನ ವಿರುದ್ಧದ ಸ್ಪಾಟ್‌ಫಿಕ್ಸಿಂಗ್ಸ್ ಆರೋಪದಿಂದ ಎಸ್ ಶ್ರೀಶಾಂತ್ ಮುಕ್ತರಾಗಿದ್ದು ಮರಳಿ ಕ್ರಿಕೆಟ್ ಅಂಗಳಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರೀಶಾಂತ್ ಚುಟುಕು ಕ್ರಿಕೆಟ್ ಮಾದರಿಗೆ ಹಾಲಿ ನಾಯಕ ವಿರಾಟ್ ಕೊಹ್ಲಿಗಿಂತ ಉತ್ತಮ ನಾಯಕನ ಹೆಸರನ್ನು ಹೇಳಿದ್ದಾರೆ.
ಸದ್ಯ ಮೂರೂ ಮಾದರಿಯಲ್ಲೂ ವಿರಾಟ್ ಕೊಹ್ಲಿ ಉತ್ತಮವಾಗಿ ಟೀಮ್ ಇಮಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಪ್ರಮುಖ ಯಾವುದೇ ಟೂರ್ನಿಯನ್ನು ಭಾರತ ಗೆಲ್ಲುವಲ್ಲಿ ಯಶಶ್ವಿಯಾಗಿಲ್ಲ. ಹಾಗಾಗಿ ಚುಟುಕು ಮಾದರಿಗೆ ನಾಯಕತ್ವ ಬದಲಾಗಲಿ ಎಂಬ ಕೂಗು ಇತ್ತೀಚೆಗೆ ಕೇಳಿ ಬಂದಿತ್ತು. ಅದರಲ್ಲಿ ಒಂದು ಹೆಸರು ದೊಡ್ಡ ಧ್ವನಿಯಲ್ಲಿ ಕೇಳಿ ಬಂದಿದೆ. ಅದೇ ಹೆಸರನ್ನು ಶ್ರೀಶಾಂತ್ ಕೂಡ ಹೇಳಿದ್ದಾರೆ.

ರೋಹಿತ್ ಶರ್ಮಾ ಬೆಸ್ಟ್ ಎಂದ ಶ್ರೀಶಾಂತ್
ಹೌದು, ಟೀಮ್ ಇಂಡಿಯಾವನ್ನು ಚುಟುಕು ಮಾದರಿಯಲ್ಲಿ ಮುನ್ನಡೆಸಲು ಕೊಹ್ಲಿಗಿಂತಲೂ ರೋಹಿತ್ ಶರ್ಮಾ ಉತ್ತಮ ಆಯ್ಕೆ ಎಂದು ಶ್ರೀಶಾಂತ್ ಹೇಳಿಕೆಯನ್ನು ನೀಡಿದ್ದಾರೆ. ಚುಟುಕು ಮಾದರಿಯಯಲ್ಲಿ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದು ಅದರ ಆಧಾರದಲ್ಲೇ ಶ್ರೀಶಾಂತ್ ರೋಹಿತ್ ಹೆಸರು ಉಲ್ಲೇಖಿಸಿದ್ದಾರೆ.

ರೈನಾ ತಂಡಕ್ಕೆ ಸೇರ್ಪಡೆಯಾಗಲಿ
"ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಂದೇ ತಂಡವನ್ನು ಆಡಿಸಬೇಕು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಅಂದಹಾಗೆ ಸುರೇಶ್ ರೈನಾ ಅವರಂತಹ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗಬೇಕು. ಇನ್ನು ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ವಹಿಸಿಕೊಳ್ಳಬೇಕು, ಉಳಿದ ಮಾದರಿಗಳಲ್ಲಿ ಕೊಹ್ಲಿ ತಂಡವನ್ನು ಮುನ್ನಡೆಸಿದರೆ ಉತ್ತಮ ಎಂದು ಶ್ರೀ ಅಭಿಪ್ರಾಯ ಪಟ್ಟಿದ್ದಾರೆ.

ಕಮ್‌ಬ್ಯಾಕ್ ಮಾಡಲು ಶ್ರೀಶಾಂತ್ ಗುರಿ
ಶ್ರೀಶಾಂತ್ ವಿರುದ್ಧ ಬಿಸಿಸಿಐ ಹೇರಿದ್ದ ಆಜೀವ ನಿಷೇಧ ಸೆಪ್ಟೆಂಬರ್ 13ಕ್ಕೆ ಅಂತ್ಯಗೊಳ್ಳಲಿದೆ. ಈ ಮೂಲಕ ಕ್ರಿಕೆಟ್ ವೃತ್ತಿ ಬದುಕಿಗೆ ಕಮ್ ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿರುವ ಶ್ರೀಶಾಂತ್ ಗೆ ಈಗಾಗಗಲೇ ಕೇರಳ ರಣಜಿ ತಂಡದಲ್ಲಿ ಸ್ಥಾನ ಸಿಗುವುದು ಕೂಡ ಖಾತ್ರಿಯಾಗಿದೆ. ಕೇವಲ ರಣಜಿ ಮಾತ್ರವಲ್ಲ 2021ರ ಐಪಿಎಲ್ ಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವುದು ಕೂಡ ಶ್ರೀಶಾಂತ್ ಗುರಿಯಾಗಿದೆ.

ಏಳು ವರ್ಷ ಕ್ರಿಕೆಟ್‌ನಿಂದ ದೂರ
2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಸ್ಟಾಟ್ ಫಿಕ್ಸಿಂಗ್ ನಲ್ಲಿ ಶ್ರೀಶಾಂತ್ ಪಾಲ್ಗೊಂಡಿದ್ದಾರೆ ಎಂಬ ಆರೋಪ ಅವರ ಕ್ರಿಕೆಟ್ ವೃತ್ತಿಬದುಕನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತು. ಉತ್ತಮ ವೇಗದೊಂದಿಗೆ ಸ್ವಿಂಗ್ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದ 37 ವರ್ಷದ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಕಳಂಕ ಹೊತ್ತು ತಮ್ಮ ವೃತ್ತಿಬದುಕಿನ 7 ಅತ್ಯಮೂಲ್ಯ ವರ್ಷಗಳನ್ನು ಕಳೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications