7 ವರ್ಷಗಳ ನಿಷೇಧದ ಬಳಿಕ ಮತ್ತೆ ಮೈದಾನಕ್ಕಿಳಿಯಲು ಶ್ರೀಶಾಂತ್ ಸಜ್ಜು

ತಿರುವನಂತಪುರಂ: ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ ಅವರು ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಕೇರಳ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸುತ್ತಿರುವ ಸ್ಥಳೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಶಾಂತ್ ಆಡಲು ಸಿದ್ಧರಾಗುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದರೆಂಬ ಆರೋಪ ಕೇಳಿ ಬಂದಿದ್ದರಿಂದ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ದಿಂದ ಶ್ರೀಶಾಂತ್ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಶಾಂತ್ ನಿಷೇಧ ಮುಗಿದಿದೆ.
ಕೇರಳ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸಿರುವ ಸ್ಥಳೀಯ ಟಿ20 ಟೂರ್ನಿಯಲ್ಲಿ ಶ್ರೀಶಾಂತ್ ಅವರು ರಾಜ್ಯ ತಂಡದ ನಾಯಕ ಸಚಿನ್ ಬೇಬಿ ನಾಯಕತ್ವದ ಕೆಸಿಎ ಟೈಗರ್ಸ್ ತಂಡದಿಂದ ಆರಿಸಲ್ಪಟ್ಟಿದ್ದಾರೆ ಎಂದು ಕೆಸಿಎ ಅಧಿಕೃತ ಮೂಲ ತಿಳಿಸಿದೆ.
ಶ್ರೀಶಾಂತ್ ಮತ್ತು ಬೇಬಿ ಅಲ್ಲದೆ ತಂಡದಲ್ಲಿ ಬಸಿಲ್ ಥಂಪಿ, ರೋಹನ್ ಪ್ರೇಮ್, ಮಿಥುನ್ ಎಸ್, ಆಸಿಫ್ ಕೆಎಂ ಹಾಗು ಇನ್ನಿತರ ಅನುಭವಿ ರಾಜ್ಯ ಆಟಗಾರರು ಇರಲಿದ್ದಾರೆ. 'ತಂಡಗಳಲ್ಲಿ ಅನುಭವಿಗಳು ಮತ್ತು ಯುವಕರು ಇಬ್ಬರೂ ಇದ್ದಾರೆ. ಪಂದ್ಯಾವಳಿಯು ಅನೇಕ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆ ಒದಗಿಸುತ್ತದೆ,' ಎಂದು ಕೆಸಿಎ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications