Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kavya Maran: ಫೈನಲ್ ನಲ್ಲಿ ಸನ್ ರೈಸರ್ಸ್ ಗೆಲುವಿನ ಖುಷಿಯಲ್ಲಿ ತೇಲಾಡಿದ ಕಾವ್ಯಾ ಮಾರನ್- ವಿಡಿಯೊ ನೋಡಿ

ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಅಂತಿಮ ಪಂದ್ಯ ಶನಿವಾರ ರಾತ್ರಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಡರ್ಬನ್ ಸೂಪರ್ ಜೈಂಟ್ಸ್ ಫೈನಲ್‌ ಕಾದಾಟ ನಡೆದಿತ್ತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸನ್ ರೈಸರ್ಸ್ ಸೂಪರ್ ಜೈಂಟ್ಸ್ ತಂಡವನ್ನು 89 ರನ್ ಗಳಿಂದ ಸೋಲಿಸಿ ಪ್ರಶಸ್ತಿ ವಶಪಡಿಸಿಕೊಂಡಿತು.

ಸನ್‌ರೈಸರ್ಸ್ ತಂಡ ಸತತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಫೈನಲ್‌ನಲ್ಲಿ ಸನ್‌ರೈಸರ್ಸ್‌ನ ಅಮೋಘ ಗೆಲುವಿಗೆ ತಂಡದ ಮಾಲಕಿ ಕಾವ್ಯಾ ಮಾರನ್ ಹರ್ಷ ವ್ಯಕ್ತಪಡಿಸಿದ್ದಾರೆ.

SRH CEO Kavya Maran Cant Hide Her Happiness As Sunrisers: back-to-back SA20 titles

ಸನ್‌ರೈಸರ್ಸ್ ತಂಡದ ಮಾಲಕಿ ಕಾವ್ಯಾ ಮಾರನ್ ಯಾವಾಗಲೂ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಲೇ ಇರುತ್ತಾರೆ. ಪ್ರತಿ ಎಸೆತಕ್ಕೂ ಪ್ರತಿಕ್ರಿಯಿಸಿದ ಕಾವ್ಯಾ ತಂಡವು ಸತತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ಟಿ20 ಲೀಗ್ ಪ್ರಶಸ್ತಿಯನ್ನು ಗೆದ್ದಾಗ, ಅವರ ಸೆಲೆಬ್ರೇಷನ್‌ ನೋಡಿದ ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ಸನ್‌ರೈಸರ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ವಿಕೆಟ್‌ಗೆ ಟಾಮ್ ಬೆಲ್ (55 ರನ್) ಮತ್ತು ಜೋರ್ಡಾನ್ (42 ರನ್) ಬಿರುಸಿನ ಬ್ಯಾಟಿಂಗ್ ಆರಂಭಿಸಿದರು.

ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಂತರ ತಂಡದ ನಾಯಕ ಏಡೆನ್ ಮಾರ್ಕ್ರಾಮ್ (42 ರನ್) ಮತ್ತು ಟ್ರಿಸ್ಟಾನ್ ಸ್ಟಬ್ಸ್ (56 ರನ್) ಕೂಡ ತಂಡಕ್ಕೆ ನೆರವಾದರು. ಇವರುಗಳ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು.

ಇದಾದ ಬಳಿಕ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸುದ್ದಿ ಮಾಡುತ್ತಿದ್ದ ಡರ್ಬನ್ ಬ್ಯಾಟ್ಸ್ ಮನ್ ಗಳು ಫೈನಲ್ ನಲ್ಲಿ ಮಂಕಾಯಿತು. ಕ್ವಿಂಟನ್ ಡಿ ಕಾಕ್ 03, ಜೆಜೆ ಸ್ಮಟ್ಸ್ 01, ಭಾನುಕಾ ರಾಜಪಕ್ಸೆ 00 ಮತ್ತು ಹೆನ್ರಿಚ್ ಕ್ಲಾಸೆನ್ 00 ರನ್ ಗಳಿಸಿ ಔಟಾದರು.

ವಿಯಾನ್ ಮುಲ್ಡರ್ 38 ಮತ್ತು ಡ್ವೇನ್ ಪ್ರಿಟೋರಿಯಸ್ 28 ರನ್‌ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಸನ್‌ರೈಸರ್ಸ್ ಬೌಲರ್‌ಗಳು ಪವರ್‌ಪ್ಲೇನಲ್ಲಿಯೇ ತಮ್ಮ ತಂಡದ ಗೆಲುವನ್ನು ಖಚಿತಪಡಿಸಿದ್ದರು. ಮೊದಲ 6 ಓವರ್ ಗಳಲ್ಲಿ ಡರ್ಬನ್ ತಂಡ ಕೇವಲ 27 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡಿತು.

Story first published: Sunday, February 11, 2024, 13:39 [IST]
Other articles published on Feb 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+