For Quick Alerts
ALLOW NOTIFICATIONS  
For Daily Alerts
 

SRH ಪಂದ್ಯವನ್ನು ಗೆಲ್ಲಲು ಬೌಲರ್‌ಗಳೇ ಪ್ರಮುಖ ಕಾರಣ

ಹೈದರಾಬಾದ್: 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ಕನಸು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆಸೆ ಕಮರಿದೆ. ಶನಿವಾರ ಹೈದರಾಬಾದ್‌ನಲ್ಲಿ ನಡೆದ ಪ್ರಸಕ್ತ ಐಪಿಎಲ್‌ನ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ಅಮೋಘ ಪ್ರದರ್ಶನ ನೀಡಿ 10 ರನ್ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಎಸ್‌ಆರ್‌ಎಚ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್‌ (23) ಮೊದಲ ವಿಕೆಟ್‌ಗೆ 75 ರನ್‌ ಜೊತೆಯಾಟ ನೀಡಿದರು. ನಾಯಕ ಇಶಾನ್‌ ಕಿಶನ್‌ ಸೊನ್ನೆ ಸುತ್ತಿದರು. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 268ರ ಸ್ಟ್ರೈಕ್‌ ರೇಟ್‌ನಲ್ಲಿ 59 ರನ್‌ ಸಿಡಿಸಿದರು. ಹೆನ್ರಿಕ್ ಕ್ಲಾಸೆನ್ 59 ರನ್ ಬಾರಿಸಿದರು. ಅಂತಿಮವಾಗಿ ಎಸ್‌ಆರ್‌ಎಚ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 194 ರನ್‌ ಸೇರಿಸಿತು.

SRH

ಚೆನ್ನೈ ಸೂಪರ್ ಕಿಂಗ್ಸ್‌ ಪರ ಟಾಪ್‌ ಆರ್ಡರ್ ಚೆನ್ನೈ ಸೂಪರ್ ಕಿಂಗ್ಸ್ (1), ನಾಯಕ ರುತುರಾಜ್ ಗಾಯಕ್ವಾಡ್ (19), ಆಯುಷ್ ಮಾತ್ರೆ (30) ಜವಾಬ್ದಾರಿ ಮರೆತರು. ಸಿಎಸ್‌ಕೆ 5.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಸರ್ಫರಾಜ್ ಖಾನ್‌ ಹಾಗೂ ಮ್ಯಾಥ್ಯೂ ಶಾರ್ಟ್‌ ಜೋಡಿ 46 ರನ್ ಸಿಡಿಸಿತು.

ಬೌಲರ್‌ಗಳಗೆ ಗೆಲುವಿನ ರುವಾರಿ

ಒಂದು ಹಂತದಲ್ಲಿ ಚೆನ್ನೈ ಈ ಪಂದ್ಯವನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಆರಂಭಿಸಿತ್ತು. ಆದರೆ ಎಸ್‌ಆರ್‌ಎಚ್‌ ಪರ ಸ್ಪಿನ್ ಹಾಗೂ ವೇಗದ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿ ತಂಡಕ್ಕೆ ಆಧಾರವಾದರು. ಮಧ್ಯದ ಓವರ್‌ಗಳಲ್ಲಿ ಇಶಾನ್‌ ಮಲಿಂಗ ಹಾಗೂ ನಿತೀಶ್‌ ಕುಮಾರ್ ರೆಡ್ಡಿ ಬಿಗುವಿನ ದಾಳಿ ನಡೆಸಿತು. ಇಶಾನ್‌ ಮಲಿಂಗ 29 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ನಿತೀಶ್‌ ಕುಮಾರ್ ರೆಡ್ಡಿ 31 ರನ್ ನೀಡಿ 2 ವಿಕೆಟ್‌ ಪಡೆದು ಚೆನ್ನೈ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿತು.

ಶಿವಂಗ ಕುಮಾರ್ 3 ಓವರ್‌ ಬೌಲಿಂಗ್ ನಡೆಸಿ 18 ರನ್‌ ನೀಡಿ 1 ವಿಕೆಟ್‌ ಪಡೆದರು. ಇವರು ಸರ್ಫರಾಜ್ ಖಾನ್‌ ಅವರ ವಿಕೆಟ್‌ ಪಡೆದು ಬೀಗಿದರು. ಎಸ್‌ಆರ್‌ಎಚ್‌ ಬೌಲರ್‌ಗಳು ಡೆತ್‌ ಓವರ್‌ಗಳಲ್ಲೂ ಸಿಎಸ್‌ಕೆ ತಂಡಕ್ಕೆ ರನ್‌ ನೀಡದಂತೆ ತಡೆದು ಪಂದ್ಯವನ್ನು ಗೆಲ್ಲುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್ ಕಾರ್ಡ್‌

ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 194 ರನ್, ಅಭಿಷೇಕ್ ಶರ್ಮಾ 59, ಹೆನ್ರಿಕ್ ಕ್ಲಾಸೆನ್ 59, ಅನ್ಶುಲ್ ಕಾಂಬೋಜ್ 22ಕ್ಕೆ 3

ಚೆನ್ನೈ ಸೂಪರ್ ಕಿಂಗ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 184 ರನ್‌, ಮ್ಯಾಥ್ಯೂ ಶಾರ್ಟ್‌ 34, ಆಯುಷ್ ಮಾತ್ರೆ 30, ಸರ್ಫರಾಜ್ ಖಾನ್ 25, ಇಶಾನ್ ಮಾಲಿಂಗ 29ಕ್ಕೆ 3

ಫಲಿತಾಂಶ: 10 ರನ್‌ಗಳಿಂದ ಪಂದ್ಯ ಗೆದ್ದ ಎಸ್‌ಆರ್‌ಎಚ್

Story first published: Sunday, April 19, 2026, 0:47 [IST]
Other articles published on Apr 19, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+