For Quick Alerts
ALLOW NOTIFICATIONS  
For Daily Alerts
 

ಪ್ಲೇ ಆಫ್‌ ಟೆನ್ಷನ್‌ ಬಿಟ್ಟು ರಜೆಯ ಮಜೆಯಲ್ಲಿ ಎಸ್‌ಆರ್‌ಎಚ್ ಪ್ಲೇಯರ್ಸ್‌

ಶುಕ್ರವಾರ ಚೆನ್ನೈನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಇತಿಹಾಸ ನಿರ್ಮಿಸಿತ್ತು. 18ನೇ ಆವೃತ್ತಿಯ43ನೇ ಪಂದ್ತದಲ್ಲಿ ಸನ್‌ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 3 ಜಯ ಸಾಧಿಸಿರುವ ಸನ್‌ 6 ಅಂಕ ಕಲೆ ಹಾಕಿದೆ. ಇನ್ನು ಐದು ಪಂದ್ಯ ಬಾಕಿ ಇದ್ದು ಈ ಪಂದ್ಯಗಳನ್ನು ಗೆದ್ದಲ್ಲಿ ನಿಶ್ಚಿತವಾಗಿ ಪ್ಲೇ ಆಫ್‌ ಆಸೆ ಜೀವಂತವಾಗುತ್ತದೆ.

ಆದರೆ ಪ್ರಸಕ್ತ ಋತುವಿನಲ್ಲಿ ಸನ್‌ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. ಈ ವರ್ಷ ಪ್ಲೇ ಆಫ್‌ ಹಾದಿ ತಲುಪಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸದ್ಯ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸನ್‌ ಆಟಗಾರರು ಈ ಪ್ಲೇ ಆಫ್‌ ಟೆನ್ಷನ್‌ ಕೊಂಚ ದೂರ ಮಾಡಿದ್ದಾರೆ. ಇವರು ತಮ್ಮ ಮುಂದಿನ ಪಂದ್ಯವನ್ನು ಮೇ 2ರಂದು ಗುಜರಾತ್ ಟೈಟನ್ಸ್‌ ವಿರುದ್ಧ ಆಡಲಿದೆ. ಚೆನ್ನೈ ವಿರುದ್ಧ ಜಯ ಸಾಧಿಸಿರುವ ಎಸ್‌ಆರ್‌ಎಚ್‌ ಆಟಗಾರರು ರಜೆಯ ಮಜೆಯಲ್ಲಿದ್ದಾರೆ.

SRH Keep Playoff Hopes Alive After Beating CSK Team Heads to Maldives for Short Break

ಸನ್‌ ತಂಡದ ಆಟಗಾರರು ರಜೆಯ ಮಜೆಯಲ್ಲಿರುವ ಮಾಹಿತಿಯನ್ನು ತಂಡ ನೀಡಿದೆ. ತಂಡದ ಆಟಗಾರರು ರಜೆಯ ಮಜೆಯನ್ನು ಸವಿಯಲು ಭಾರತದ ನೆರೆಯದ ದೇಶ ಮಾಲ್ಡೀವ್ಸ್‌ಗೆ ಹಾರಲಿದ್ದಾರೆ. ತಂಡದ ಮುಂದಿನ ಪಂದ್ಯದ ಮಧ್ಯ ಒಂದು ವಾರದ ಅಂತರವಿದೆ. ಈ ವೇಳೆ ಪ್ಲೇ ಆಫ್‌ ಟೆನ್ಷನ್‌ ಬಿಟ್ಟು ಆಟಗಾರರು ಮೋಜಿನಲ್ಲಿ ತೊಡಗಿದ್ದಾರೆ. ಮುಂದಿನ ಪಂದ್ಯ ಮೇ 2ರಂದು ನಡೆಯಲಿದ್ದು, ಪ್ಯಾಟ್ ಕಮಿನ್ಸ್‌ ಪಡೆ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸವಾಲು ಎದುರಿಸಲಿದೆ.

ಏನು ಲೆಕ್ಕಾಚಾರ?

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ನರ್‌ ಅಪ್ ಆಗಿದ್ದ ಸನ್‌ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ. ಸ್ಟಾರ್ ಆಟಗಾರರು ಲಯವಿಲ್ಲದೆ ಒದ್ದಾಡುತ್ತಿದ್ದಾರೆ.ಇದರ ನೇರ ಪರಿಣಾಮ ತಂಡದ ಮೇಲೆ ಬಿದ್ದಿದೆ. ತಂಡ ಆಡಿರುವ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು 6 ಅಂಕ ಕಲೆ ಹಾಕಿದೆ. ಎಸ್‌ಆರ್‌ಎಚ್‌ ತಂಡ ಮುಂದಿನ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸುಲಭವಾಗಿ 16 ಅಂಕಹಗಳನ್ನು ಕಲೆ ಹಾಕಿ ಪ್ಲೇ ಆಫ್‌ಗೆ ಪ್ರವೇಶಿಸಬಹುದು. ಮುಂದಿನ ಐದು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಸಹ ಬೇರೆ ತಂಡಗಳ ಪ್ರದರ್ಶನದ ಮೇಲೆ ಇವರ ಪ್ಲೇ ಆಫ್‌ ಲೆಕ್ಕಾಚಾರ ಅಲಂಬಿತವಾಗಿರುತ್ತದೆ. ಇನ್ನು ಐಪಿಎಲ್‌ನಲ್ಲಿ ಹಲವು ಬಾರಿ ತಂಡಗಳು 14 ಅಂಕಗಳನ್ನು ಕಲೆ ಹಾಕಿ ಪ್ಲೇ ಆಫ್ ಪ್ರವೇಶಿಸಿವೆ. ಆದರೆ ಆಗ ರನ್‌ ರೇಟ್‌ ಇಂಪಾರ್ಟೆಂಟ್ ಆಗುತ್ತದೆ.

ಸನ್‌ ತಂಡ ಈ ವರ್ಷದ ಆರಂಭದಲ್ಲಿ ಆಡಿದ್ದ ಆಟವನ್ನು ನೋಡಿದ್ರೆ ಈ ಬಾರಿ ಐಪಿಎಲ್‌ನಲ್ಲಿ ಮೂರನೂರು ರನ್‌ಗಳನ್ನು ಸುಲಭವಾಗಿ ಕಲೆ ಹಾಕಬಹುದು ಎಂದು ಎಂದೇ ಭಾವಿಸಿದ್ರು. ಆದರೆ ಮೊದಲ ಪಂದ್ಯದಲ್ಲಿ ಸನ್‌ ರಾಜಸ್ಥಾನ ವಿರುದ್ಧದ ಸೋತ ಬಳಿಕ ಗೆಲುವಿನ ಟ್ರ್ಯಾಕ್‌ಗೆ ಮರಳಲು ಹರಸಾಹದ ಪಟ್ಟಿತು. ಸ್ಫೋಟಕ ಬ್ಯಾಟರ್‌ಗಳು ಅಬ್ಬರಿಸುವುದನ್ನು ನಿಲ್ಲಿಸಿದ ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತು. ಈಗ ಸನ್‌ ತಂಡ ರಜೆಯ ಮಜೆಯನ್ನು ಮುಗಿಸಿಕೊಂಡು ಬಂದು ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Sunday, April 27, 2025, 17:05 [IST]
Other articles published on Apr 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+