ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವೇಗಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುವ ವೇಗಿ ಉಮ್ರಾನ್ ಮಲಿಕ್, ಲೀಗ್ ಹಂತದ ಕೊನೇ ಪಂದ್ಯಗಳ ವೇಳೆ ಗಮನ ಸೆಳೆದಿದ್ದರು. 150 kmph ವೇಗದಲ್ಲಿ ಬೌಲಿಂಗ್ ಮಾಡುವ ಮಿಲಿಕ್ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಐಪಿಎಲ್‌ನಲ್ಲಿ ಗಮನ ಸೆಳೆದಿದ್ದ ಉಮ್ರಾನ್ ಮಲಿಕ್ ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಟಿ20 ವಿಶ್ವಕಪ್ ವೇಳೆ ಮಲಿಕ್ ಭಾರತೀಯ ತಂಡಕ್ಕೆ ನೆಟ್ ಬೌಲರ್ ಆಗಿರಲಿದ್ದಾರೆ ಎಂದು ವರದಿಯೊಂದು ಹೇಳಿದೆ.
ಈವರೆಗೆ ಮೂರು ಐಪಿಎಲ್ ಪಂದ್ಯಗಳನ್ನಾಡಿರುವ ಮಲಿಕ್ 8.0ರ ಎಕಾನಮಿಯಂತೆ 2 ವಿಕೆಟ್ ಪಡೆದುಕೊಂಡಿದ್ದಾರೆ. ಮಲಿಕ್ ಹೆಚ್ಚು ಆಕರ್ಷಣೆ ಮೂಡಿಸಿದ್ದು ಅಕ್ಟೋಬರ್ 6ರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಮಲಿಕ್ 153 kmph ವೇಗದಲ್ಲಿ ಬೌಲಿಂಗ್ ಮಾಡಿ 1 ವಿಕೆಟ್ ಪಡೆಯುವ ಮೂಲಕ ವಿರಾಟ್ ಕೊಹ್ಲಿಯ ಗಮನ ಸೆಳೆದಿದ್ದರು. ಪಂದ್ಯದಲ್ಲಿ ಆರ್‌ಸಿಬಿ 4 ರನ್‌ನಿಂದ ಸೋಲನುಭವಿಸಿತ್ತು.
"ಹೌದು, ನೆಟ್ ಬೌಲರ್ ಆಗಿ ಉಮ್ರಾನ್ ಮಲಿಕ್ ನಮ್ಮ ತಂಡದೊಂದಿಗೆ ಇರಲಿದ್ದಾರೆ. ಐಪಿಎಲ್‌ನಲ್ಲಿ ಮಲಿಕ್ ಪ್ರಭಾವ ಬೀರಿದ್ದರು. ಹೀಗಾಗಿ ಅಂಥ ಬೌಲರ್‌ನನ್ನು ಬ್ಯಾಟ್ಸ್‌ಮನ್‌ಗಳು ನೆಟ್ ಅಭ್ಯಾಸದ ವೇಳೆ ಎದುರಿಸಬೇಕು ಅನ್ನೋದು ಒಳ್ಳೆಯ ಐಡಿಯಾ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂಥ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವ ಅವಕಾಶ ಸಿಗುವುದರಿಂದ ಮಲಿಕ್ ಮಿನುಗಲೂ ಸಾಧ್ಯವಾಗುತ್ತದೆ," ಎಂದು ಮೂಲವೊಂದು ಎಎನ್‌ಐಗೆ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications