Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಸ್‌ಆರ್‌ಎಚ್ ಆಲ್ ರೌಂಡರ್ ವಿಜಯ್ ಶಂಕರ್ ಐಪಿಎಲ್‌ನಿಂದ ಔಟ್!

SRH Player Vijay Shankar has been ruled out of IPL 2020 due to Grade 2 injury

ಶಾರ್ಜಾ: ಶಾರ್ಜಾದಲ್ಲಿ ಶನಿವಾರ (ಅಕ್ಟೋಬರ್ 31) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್‌ಗೆ ಆಘಾತಕಾರಿ ವಿಚಾರವೊಂದು ಕೇಳಿಬಂದಿದೆ. ಎಸ್‌ಆರ್‌ಎಚ್ ಆಲ್ ರೌಂಡರ್ ವಿಜಯ್ ಶಂಕರ್ 2020ರ ಐಪಿಎಲ್ ಸೀಸನ್‌ನಿಂದಲೇ ಹೊರ ಬಿದ್ದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ವಿಜಯ್ ಶಂಕರ್ ಐಪಿಎಲ್‌ನಿಂದ ಹೊರ ನಡೆದಿರುವುದಾಗಿ ತಿಳಿದು ಬಂದಿದೆ. ಮೊಣಕಾಲು ಗಾಯದಿಂದಾಗಿ ಶಂಕರ್‌ಗೆ ಇನ್ನುಳಿದ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ. ಈಗಾಗಲೇ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಅನೇಕ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಬ್ಬ ಆಟಗಾರ ಗಾಯಕ್ಕೀಡಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳನ್ನು ಕಲೆ ಹಾಕಿರುವ ಹೈದರಾಬಾದ್‌, ಪ್ಲೇ ಆಫ್ ಪ್ರವೇಶದತ್ತ ಕಣ್ಣಿಟ್ಟಿದೆ. ಇನ್ನುಳಿದ ಪಂದ್ಯಗಳನ್ನು ಎಸ್‌ಆರ್‌ಎಚ್ ಗೆಲ್ಲದಿದ್ದರೆ ಅದರ ಪ್ಲೇ ಆಫ್ ಹಾದಿ ಕಠಿಣವೆನಿಸುತ್ತದೆ. ಆದರೆ ಆಟಗಾರರ ಗಾಯದ ಸಮಸ್ಯೆ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿದೆ.

ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಗಾಯಕ್ಕೀಡಾಗಿರುವ ಪ್ರಮುಖ ಆಟಗಾರರು
* ಮಿಚೆಲ್ ಮಾರ್ಷ್, ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ
* ಭವನೇಶ್ವರ್ ಕುಮಾರ್, ಗಾಯದಿಂದಾಗಿ ಹೊರ ನಡೆದಿದ್ದಾರೆ
* ವಿಜಯ್ ಶಂಕರ್, ಗಾಯದಿಂದಾಗಿ ಟೂರ್ನಿಯಿಂದ ಔಟ್
* ಕೇನ್ ವಿಲಿಯಮ್ಸನ್, ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ
* ವೃದ್ಧಿಮಾನ್ ಸಹಾ, ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ

Story first published: Saturday, October 31, 2020, 14:35 [IST]
Other articles published on Oct 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+