Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಮಿನ್ಸ್‌ ಟೆನ್ಷನ್‌ ಹೆಚ್ಚಿಸಿದ ಸ್ಟಾರ್ ಪ್ಲೇಯರ್‌ ನಿರ್ಧಾರ: ಎಸ್‌ಆರ್‌ಎಚ್‌ ತಂಡಕ್ಕೆ ಆರಂಭದಲ್ಲೇ ಪೆಟ್ಟು

ಇನ್ನು ಮೂರು ದಿನಗಳಲ್ಲಿ 17ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಲು ಈಗಾಗಲೇ ಎಲ್ಲ ತಂಡಗಳು ಅಂಗಳದಲ್ಲಿ ಅಭ್ಯಾಸ ಆರಂಭವಿಸಿವೆ. ಈ ನಿಟ್ಟಿನಲ್ಲಿ ಎಸ್‌ಆರ್‌ಎಚ್‌ ಸಹ ಪ್ರ್ಯಾಕ್ಟಿಸ್ ಆರಂಭಿಸಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಎಸ್‌ಆರ್‌ಎಚ್‌ ಪ್ಲೇಯರ್ ಯು-ಟರ್ನ್‌ ಹೊಡೆದಿರುವುದು ತಂಡದ ಚಿಂತೆಯನ್ನು ದ್ವಿಗುಣ ಗೊಳಿಸಿದೆ.

ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್ ವನಿಂದು ಹಸರಂಗಾ ಸನ್ ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಅವರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದ್ದಾರೆ. ಹಸರಂಗ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯ ನಿರ್ಧಾರದ ಮೇಲೆ ಯು-ಟರ್ನ್ ತೆಗೆದುಕೊಂಡಿದ್ದಾರೆ. ಇದರ ನಂತರ, ಅವರನ್ನು ಶ್ರೀಲಂಕಾ ಟೆಸ್ಟ್ ತಂಡದಲ್ಲಿ ಸೇರಿಸಲಾಯಿತು. ಈ ನಿರ್ಧಾರವೇ ಕಮಿನ್ಸ್ ಅವರ ಚಿಂತೆಯನ್ನು ಹೆಚ್ಚು ಮಾಡಿದೆ. ಹೀಗಾಗಿ ಅವರು ಆರಂಭಿಕ ಪಂದ್ಯಗಳಲ್ಲಿ ಆರೆಂಜ್ ಆರ್ಮಿ ಪರ ಕಣಕ್ಕೆ ಇಳಿಯುವುದು ಡೌಟ್‌?

SRH Spinner Wanindu Hasaranga To Miss IPL 2024 Spinner Included In SL Squad For BAN Tests

ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಮಾರ್ಚ್ 22 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವನಿಂದು ಹಸರಂಗಾ ಈ ಸರಣಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಸರಣಿ ಮುಗಿದ ಬಳಿಕವೇ ಹಸರಂಗ ಎಸ್‌ಆರ್‌ಎಚ್ ತಂಡವನ್ನು ಸೇರಿಕೊಳ್ಳಬಲ್ಲರು.

ಆರ್‌ಸಿಬಿ ಪರ ಆಡಿದ್ದ ಸ್ಪಿನ್ನರ್

ವನಿಂದು ಹಸರಂಗಾ ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಆದರೆ ಅವರು ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡುವಲ್ಲಿ ವಿಫಲರಾದರು ಎಂದು ಆರ್‌ಸಿಬಿ ಅವರನ್ನು ತಂಡದಿಂದ ಕೈ ಬಿಟ್ಟಿತ್ತು. ಐಪಿಎಲ್ 2024 ರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅವರನ್ನು 1.5 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಈ ಋತುವಿನಲ್ಲಿ ಹಸರಂಗಾ ಹೈದರಾಬಾದ್‌ನ ಪ್ರಮುಖ ಸ್ಪಿನ್ನರ್ ಆಗಲಿದ್ದಾರೆ ಎಂದೇ ಪರಿಗಣಿಸಲಾಗತ್ತು. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಹೇಗೆ ಕಟ್ಟುವುದು ಎಂಬುದೇ ದೊಡ್ಡ ಚಿಂತೆ ಆಗಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಾರ್ಚ್ 23 ರಂದು ಆಡಲಿದೆ.

SRH Spinner Wanindu Hasaranga To Miss IPL 2024 Spinner Included In SL Squad For BAN Tests

ಎಸ್‌ಆರ್‌ಎಚ್ ತಂಡ - ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವೀರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ. , ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್ ಮತ್ತು ಜಾತವೇದ್ ಸುಬ್ರಮಣಿಯನ್.

Story first published: Tuesday, March 19, 2024, 14:12 [IST]
Other articles published on Mar 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+