For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2025: ಮಾಜಿ ನಾಯಕ ಸೇರಿದಂತೆ ಇಬ್ಬರು ವೇಗಿಗಳಿ ಸನ್‌ರೈಸರ್ಸ್‌ ಗೇಟ್ ಪಾಸ್‌ ನೀಡುವ ಸಾಧ್ಯತೆ

ಅಕ್ಟೋಬರ್‌ 31 ರೊಳಗೆ ಐಪಿಎಲ್‌ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳ ತಮ್ಮ ತಮ್ಮ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಆರಂಭಿಸಿದೆ. ಕಳೆದ ಆವೃತ್ತಿಯಲ್ಲಿ ರನ್ನರ್‌ ಆಪ್‌ ಸ್ಥಾನವನ್ನು ಅಲಂಕರಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಸಹ ತನ್ನ ಲೆಕ್ಕಾಚಾರವನ್ನು ಆರಂಭಿಸಿದೆ.

ಬಿಸಿಸಿಐ ರಿಟೇನ್ಷನ್‌ ಪಾಲೀಸಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಇದರಲ್ಲಿ ಐಪಿಎಲ್‌ ಪ್ರತಿ ತಂಡಗಳು ತಲಾ ಆರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ (ಆರ್‌ಟಿಎಂ) ಆಯ್ಕೆ ಸಹ ಇರುತ್ತದೆ. ಹೈದರಾಬಾದ್‌ ಅನುಭವಿ ಆಟಗಾರರನ್ನು ಕೈ ಬಿಡಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

SRH to Release Bhuvneshwar Markram and Umran Malik Ahead of IPL 2024 Auction

ಇಬ್ಬರು ವೇಗಿಗಳಿಗೆ ಗೇಟ್ ಪಾಸ್

ಐಪಿಎಲ್ ಮೆಗಾ ಹರಾಜು ಅಂಗಳಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ ಅನುಭವಿ ಆಟಗಾರರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಬಹುವರ್ಷಗಳಿಂದ ಸನ್‌ ತಂಡದ ಅವಿಭಾಜ್ಯ ಅಂಗವಾಗಿದ್ದ ಭುವನೇಶ್ವರ್ ಕುಮಾರ್‌ ಅವರನ್ನು ರಿಲೀಸ್‌ ಮಾಡುವ ಸಾಧ್ಯತೆ ಇದೆ. ಇವರು ತಂಡದ ಪರ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆಯನ್ನು ಹೊಂದಿರುವ ಬೌಲರ್‌. ಇವರನ್ನು ಕೈ ಬಿಟ್ಟು ಯುವ ಆಟಗಾರರನ್ನು ಉಳಿಸಿಕೊಳ್ಳುವ ಪ್ಲ್ಯಾನ್‌ ಸನ್ ತಂಡದ್ದಾಗಿದೆ.

ಸನ್‌ ತಂಡದ ಪರ ತನ್ನ ಬಿಗುವಿನ ದಾಳಿಯ ಮೂಲಕವೇ ಅಬ್ಬರಿಸಿದ್ದ ಸ್ಪೀಡ್ ಸ್ಟಾರ್ ಖ್ಯಾತಿಯ ಉಮ್ರಾನ್ ಮಲಿಕ್‌ ಅವರನ್ನು ಸಹ ಕೈ ಬಿಡುವ ಸಾಧ್ಯತೆ ಇದೆ. ಇವರು ಕಳೆದ ಆವೃತ್ತಿಯಲ್ಲಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇನ್ನು 2023ರಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಐಡೆನ್ ಮಾರ್ಕ್ರಾಮ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಯಾರನ್ನು ಉಳಿಸಿಕೊಳ್ಳಬಹುದು?

ಆಸ್ಟ್ರೇಲಿಯಾದ ಸ್ಟಾರ್ ಕ್ಯಾಪ್ಟನ್‌ ಹಾಗೂ ಕಳೆದ ಆವೃತ್ತಿಯಲ್ಲಿ ಸನ್‌ ತಂಡ ಫೈನಲ್‌ ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಪ್ಯಾಟ್‌ ಕಮಿನ್ಸ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಆರಂಭಿಕರಾದ ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್‌ ಶರ್ಮಾ ಅವರನ್ನು ತಂಡ ಇರಿಸಿಕೊಳ್ಳುವ ಸಂಭವವಿದೆ. ವಿಕೆಟ್‌ ಕೀಪರ್ ಬ್ಯಾಟರ್‌ ಹ್ಯಾನ್ರಿಕ್‌ ಕ್ಲಾಸೆನ್‌ ಮತ್ತು ಯುವ ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ ಅವರಿಗೆ ತಂಡ ರೆಡ್ ಕಾರ್ಪೆಟ್ ಹಾಕಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.

SRH to Release Bhuvneshwar Markram and Umran Malik Ahead of IPL 2024 Auction

ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2023 ಮತ್ತು 2016 ಸೀಸನ್‌ನಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ತಂಡ ಮೂರನೇ ಬಾರಿ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ಬಾರಿ ಶತಾಯ ಗತಾಯ ಸ್ಟಾರ್‌ ಆಟಗಾರರನ್ನು ಉಳಿಸಿಕೊಂಡು, ಅನುಭವಿ ಆಟಗಾರರನ್ನು ಹರಾಜಿನಲ್ಲಿ ಕೊಂಡು ಉತ್ತಮ ತಂಡವನ್ನು ಕಟ್ಟುವ ಇರಾದೆಯನ್ನು ಸನ್‌ ಮ್ಯಾನೇಜ್ಮೆಂಟ್ ಹಾಕಿಕೊಂಡಿದೆ.

Story first published: Monday, October 14, 2024, 7:30 [IST]
Other articles published on Oct 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+