SRH vs CSK: ಈ 'ಗೇಮ್‌ಚೇಂಜರ್' ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಆಡಬೇಕೆಂದ ಯುವಿ!
ಇದೇ ಜೂನ್ 2ರಿಂದ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ (ಯುಎಸ್ಎ) ನಡೆಯಲಿರುವ 2024ರ ಟಿ20 ವಿಶ್ವಕಪ್‌ನಲ್ಲಿ ಸ್ಟಾರ್ ಬ್ಯಾಟರ್ ಶಿವಂ ದುಬೆ ಭಾರತ ತಂಡದ ಭಾಗವಾಗಿರಬೇಕು ಎಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಎಡಗೈ ಬ್ಯಾಟರ್ ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಶುಕ್ರವಾರ, ಏಪ್ರಿಲ್ 5ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಶಿವಂ ದುಬೆ ಕೇವಲ 24 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ಮೂಲಕ 45 ರನ್ ಬಾರಿಸಿದರು.
ಸಿಎಸ್‌ಕೆ ನಾಯಲ ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಅನ್ನು ಶಹಬಾಜ್ ಅಹ್ಮದ್ ಪಡೆದ ನಂತರ, ಶಿವಂ ದುಬೆ ಎಂಟನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದರು. ಅಲ್ಲಿಂದ ಸಿಎಸ್‌ಕೆ ತಂಡದ ಸ್ಕೋರ್ ಬೋರ್ಡ್ ಹೆಚ್ಚಿಸುವ ಜವಾಬ್ದಾರಿ ವಹಿಸಿಕೊಂಡರು. ಇದೇ ವೇಳೆ 30 ಎಸೆತಗಳಲ್ಲಿ 35 ರನ್ ಗಳಿಸಿದ ಅಜಿಂಕ್ಯ ರಹಾನೆ ಅವರೊಂದಿಗೆ ಮೂರನೇ ವಿಕೆಟ್‌ಗೆ 65 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು.

ಅಂತಿಮವಾಗಿ ಶಿವಂ ದುಬೆ ಅವರು ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ಎದುರಾಳಿ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು ಮತ್ತು ಪ್ರಸಕ್ತ ಪಂದ್ಯಾವಳಿಯ ಎರಡನೇ ಅರ್ಧಶತಕ ತಪ್ಪಿಸಿಕೊಂಡರು.
ಶಿವಂ ದುಬೆ ಬ್ಯಾಟಿಂಗ್ ಶ್ಲಾಘಿಸಿದ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್
ಈ ಐಪಿಎಲ್‌ನಲ್ಲಿ ಶಿವಂ ದುಬೆ ಹೇಗೆ ಆಡಿದರು ಎಂಬುದರ ಬಗ್ಗೆ ಯುವರಾಜ್ ಸಿಂಗ್ ಹೆಚ್ಚು ಪ್ರಭಾವಿತರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಶಿವಂ ದುಬೆ ಭಾರತ ತಂಡಕ್ಕೆ ಗೇಮ್‌ಚೇಂಜರ್ ಆಗಬಲ್ಲರು ಎಂದು ಆಶಿಸಿದ್ದಾರೆ.
"ಶಿವಂ ದುಬೆ ಮೈದಾನವನ್ನು ಸುಲಭವಾಗಿ ತೆರವುಗೊಳಿಸುವುದನ್ನು (ಸಿಕ್ಸರ್) ನೋಡುವುದು ಖುಷಿ ನೀಡುತ್ತದೆ. ಅವರು ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಗೇಮ್ ಚೇಂಜರ್ ಆಗುವ ಕೌಶಲ್ಯವನ್ನು ಪಡೆದಿದ್ದಾರೆ," ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಮ್ಮ ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದುಕೊಂಡಿದ್ದಾರೆ.
ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಶಿವಂ ದುಬೆ ಅವರು ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿರಬೇಕು ಎಂದು ಭಾವಿಸಿದ್ದಾರೆ. ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಆಡುವಾಗ ಶಿವಂ ದುಬೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
"ಇದೀಗ ಶಿವಂ ದುಬೆ ಅವರು ಸ್ಪಿನ್ ಬೌಲಿಂಗ್‌ಗೆ ಹೊಡೆಯುವ ಸಾಮರ್ಥ್ಯವು ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರರಿಗಿಂತ ಮುಂದಿದ್ದಾರೆ. ಟಿ20 ವಿಶ್ವಕಪ್‌ಗಾಗಿ ಭಾರತದ ಆಯ್ಕೆಗಾರರು ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕು," ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಬರೆದಿದ್ದಾರೆ.
2024ರ ಐಪಿಎಲ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ ಶಿವಂ ದುಬೆ 49.33ರ ಸರಾಸರಿ ಮತ್ತು 160.86 ಸ್ಟ್ರೈಕ್ ರೇಟ್‌ನಲ್ಲಿ 148 ರನ್ ಗಳಿಸಿದ್ದಾರೆ ಮತ್ತು 51ರ ಟಾಪ್ ಸ್ಕೋರ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications