SRH vs DC: ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಿಸಿದ ಭಾರತೀಯ: ವೇಗಿಯ ಪ್ರದರ್ಶನಕ್ಕೆ ವಾರ್ನರ್ ಶ್ಲಾಘನೆ
ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕವಾಗಿ ಗೆದ್ದು ಬೀಗಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡಿಸಿ ತಂಡ ಎರಡನೇ ಗೆಲುವು ದಾಖಲಿಸಿದಂತಾಗಿದೆ. ಈ ಗೆಲುವಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ ತಂಡದ ನಾಯಕ ಡೇವಿಡ್ ವಾರ್ನರ್ ಓರ್ವ ಬೌಲರ್‌ನ ಪ್ರದರ್ಶನಕ್ಕೆ ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ.
ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್ ಹೈ್ರಾಬಾದ್ ತಂಡದ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ಪರವಾಗಿ ಬೌಲಿಂಗ್‌ಗೆ ಇಳಿದಿದ್ದು ಮುಖೇಶ್ ಕುಮಾರ್. ಈ ಸಂದರ್ಭದಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಅವರು ಸನ್‌ರೈಸರ್ಸ್ ತಂಡವನ್ನು ಹಿಮ್ಮೆಟ್ಟಿಸಿದರು. ಕ್ರೀಸ್‌ನಲ್ಲಿ ನೆಲೆಯೂರಿದ್ದ ವಾಶಿಂಗ್ಟನ್ ಸುಂದರ್ ಇದ್ದರು ಕೂಡ ಎಸ್‌ಆರ್‌ಹೆಚ್ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯವನ್ನು 7 ರನ್‌ಗಳ ಅಂತರದಿಂದ ಗೆದ್ದು ಬೀಗಿತ್ತು.

ಪಂದ್ಯದ ಮುಕ್ತಾಐದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್, "ನಾನು ಇಲ್ಲಿ ಆಡುವುದನ್ನು ಇಷ್ಟ ಪಡುತ್ತೇನೆ. ಸುದೀರ್ಘ ಕಾಲದಿಂದ ನಾನು ಇಲ್ಲಿ ಆಡಿಲ್ಲ. ಇನ್ನು ಈ ಪಂದ್ಯದಲ್ಲಿ ನಮ್ಮ ಮುಂದೆ ಸಾಕಷ್ಟು ಸವಾಲುಗಳು ಇದ್ದವು" ಎಂದಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ ತಂಡದ ನಾಯಕ ಡೇವಿಡ್ ವಾರ್ನರ್.
ಇನ್ನು ಒತ್ತಡದ ಸಂದರ್ಭದಲ್ಲಿ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿದ ಮುಕೇಶ್ ಕುಮಾರ್ ಬಗ್ಗೆ ವಾರ್ನರ್ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಮುಕೇಶ್ ಒತ್ತಡದಲ್ಲಿದ್ದರು, ಆದರೆ ಆ ಒತ್ತಡದಲ್ಲಿಯೂ ಅದ್ಭುತವಾಗಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ನಿಜಕ್ಕೂ ಅವರ ಬೌಲಿಂಗ್ ಪ್ರದರ್ಶನ ಅಮೋಘವಾಗಿತ್ತು. ನಮ್ಮ ಇಬ್ಬರು ಸ್ಪಿನ್ನರ್‌ಗಳು ಕೂಡ ಶ್ರೇಷ್ಠ ಪ್ರದರ್ಶನ ನೀಡಿದರು" ಎಂದಿದ್ದಾರೆ ವಾರ್ನರ್.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದೆ. ಪೃಥ್ವಿ ಶಾ ಅವರನ್ನು ಹೊಡಗಿಟ್ಟು ಅವರ ಬದಲಿಗೆ ಫಿಲಿಪ್ ಸಾಲ್ಟ್ ಆರಂಭಿಕನಾಘಿ ಡೇವಿಡ್ ವಾರ್ನರ್ ಜೊತೆಗೆ ಕಣಕ್ಕಿಳಿದರೂ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಜೋಡಿ ವೈಫಲ್ಯ ಅನುಭವಿಸಿತು. ಡಿಸಿ ಪರವಾಗಿ ಮನೀಶ್ ಪಾಂಡೆ ಹಾಗೂ ಅಕ್ಷರ್ ಪಟೇಲ್ ತಲಾ 34 ರನ್‌ಗಳಿಸಿದ್ದು ಅತಿ ಹೆಚ್ಚಿನ ಸ್ಕೋರ್ ಎನಿಸಿತು.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಭುವನೇಶ್ವರ್ ಕುಮಾರ್ ಹಾಗೂ ವಾಶಿಂಗ್ಟನ್ ಸುಂದರ್ಭ ಅದ್ಭುತವಾಗಿ ಬೌಲಿಂಗ್ ದಾಳಿ ಸಂಘಟಿಸಿದರು. ಭುವಿ ನಾಲ್ಕು ಓವರ್‌ಗಳಲ್ಲಿ ಕೇವಲ 11 ರನ್ 2 ವಿಕೆಟ್ ಪಡೆದರೆ ಸುಂದರ್ ನಾಲ್ಕು ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಕಿತ್ತರು.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಸಮ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಬ ಪಡೆಯುವಲ್ಲಿ ವಿಫಲವಾಯಿತು. ಹ್ಯಾರು ಬ್ರೂಕ್ 7 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಮಯಾಂಖ್ ಅಗರ್ವಾಲ್ ಎಸ್‌ಆರ್‌ಹೆಚ್ ಪರವಾಗಿ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಮತ್ತೊಂದು ತುದಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾಸಾಗಿತು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ಅಭಿಶೇಕ್ ಶರ್ಮಾ, ಐಡೆನ್ ಮಾರ್ಕ್ರಮ್ ವೈಫಲ್ಯ ಕಂಡರು.
ಆದರೆ ಹೆನ್ರಿಕ್ ಕ್ಲಾಸೆನ್ ಹಾಗೂ ವಾಶಿಂಗ್ಟನ್ ಸುಂದರ್ ಕೊನೆಯ ಹಂತದಲ್ಲಿ ತಂಡದ ಗೆಲುವಿಗಾಗಿ ಸಾಕಷ್ಟು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಕ್ಲಾಸೆನ್ 19 ಎಸೆತಗಳಲ್ಲಿ 31 ರನ್ ಬಾರಿಸಿದರೆ ಸುಂದರ್ 24 ರನ್‌ಗಳಿಸಿ ಅಜೇಯವಾಗುಳಿದರು. ಎಸ್‌ಆರ್‌ಹೆಚ್ ನಿಗದಿತ 20 ಓವರ್‌ಗಳಲ್ಲಿ 137 ರನ್‌ಗಳನ್ನು ಮಾತ್ರವೇ ಗಳಿಸಲು ಸಾರ್ಧಯವಾಯಿತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಗೆಲುವು ಸಾಧಿಸಿದರೆ ಎಸ್‌ಆರ್‌ಹೆಚ್ ಸತತ ಮೂರನೇ ಸೋಲು ಅನುಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications