SRH vs DC: ಮಳೆಯಿಂದಾಗಿ ಪಂದ್ಯ ರದ್ದು, ಅಂಕ ಹಂಚಿಕೊಂಡ ಸನ್, ಡೆಲ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್‌ನ 55ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 7 ವಿಕೆಟ್‌ಗೆ 133 ರನ್ ಕಲೆ ಹಾಕಿತ್ತು. ಸನ್ ಈ ಗುರಿಯನ್ನು ಬೆನ್ನಟ್ಟುವ ವೇಳೆ ಮಳೆ ಆರಂಭವಾಯಿತು. ಹೀಗಾಗಿ ಪಂದ್ಯವನ್ನು ರದ್ದು ಗೊಳಿಸಲಾಯಿತು. ಅಲ್ಲದೆ ಉಭಯ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು. ಈ ಒಂದು ಅಂಕದೊಂದಿಗೆ ಡೆಲ್ಲಿ 13 ಅಂಕಗಳೊಂದಿಗೆ ಐದನೇ ಸ್ಥಾನ, ಎಸ್‌ಆರ್‌ಎಚ್ 7 ಅಂಕಗಳನ್ನು ಕಲೆ ಹಾಕಿದೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ತೀರ ಕಳಪೆಯಾಗಿತ್ತು. ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿ ಐಪಿಎಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಕನ್ನಡಿಗ ಕರುಣ್ ನಾಯರ್ ಸೊನ್ನೆ ಸುತ್ತಿದರು. ಇನ್ನು ಉಪನಾಯಕ ಫಾಫ್ ಡುಪ್ಲೇಸಿಸ್ (3), ಅಭಿಷೇಕ್ ಪೋರೆಲ್ (8) ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳಿಗೆ ಪ್ಯಾಟ್ ಕಮಿನ್ಸ್ ಕಾಡಿದರು.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಲಯದಲ್ಲಿರುವ ಕೆಎಲ್ ರಾಹುಲ್ 10 ರನ್ ಬಾರಿಸಿ ಭರವಸೆಯ ಮೂಡಿಸಿದ್ದರು. ಆದರೆ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನು ಕೆಣಕಿದ ರಾಹುಲ್ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರು. 29 ರನ್ ಆಗುವಷ್ಟರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಆರನೇ ವಿಕೆಟ್‌ಗೆ ಟ್ರಿಸ್ಟನ್ ಸ್ಟಬ್ಸ್ ಹಾಗೂ ವಿಪ್ರಜ್ ನಿಗಮ್ ಜೋಡಿ ಉತ್ತಮ ಜೊತೆಯಾಟವಾಡುವ ಸೂಚನೆ ನೀಡಿತು. ಈ ಜೋಡಿ 30 ಎಸೆತಗಳಲ್ಲಿ 33 ರನ್ ಸೇರಿಸಿತು. ಈ ವೇಳೆ ವಿಪ್ರಜ್ ನಿಗಮ್ 18 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆದರು.
6ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಟ್ರಿಸ್ಟನ್ ಸ್ಟಬ್ಸ್ ಹಾಗೂ ಆಶುತೋಷ್ ಶರ್ಮಾ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳುವ ಕಾರ್ಯವನ್ನು ಮಾಡಿದರು. ಈ ವೇಳೆ ಇಬ್ಬರು ಆಟಗಾರರು ಎಚ್ಚರಿಕೆಯ ಆಟಕ್ಕೆ ಮಣೆ ಹಾಕಿದರು. ಆಶುತೋಷ್ ಹಾಗೂ ಸ್ಟಬ್ಸ್ ಜೋಡಿ 45 ಎಸೆತಗಳಲ್ಲಿ 66 ರನ್ ಸೇರಿಸಿ ಅಬ್ಬರಿಸಿತು. ಈ ವೇಳೆ ಆಶುತೋಷ್ ಶರ್ಮಾ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು. ಟ್ರಿಸ್ಟನ್ ಸ್ಟಬ್ಸ್ ಅಜೇಯ 41 ರನ್ ಕಾಣಿಕೆ ನೀಡಿದರು. ಇವರಿಬ್ಬರ ಉತ್ತಮ ಆಟದ ಬಲದಿಂದ ಡೆಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು.
ಸನ್ ತಂಡದ ಪರ ಪ್ಯಾಟ್ ಕಮಿನ್ಸ್ 3, ಜಯದೇವ್ ಉನಾದ್ಕಟ್, ಹರ್ಷಲ್ ಪಟೇಲ್, ಈಶಾನ್ ಮಲಿಂಗ್ ತಲಾ ಒಂದು ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications