For Quick Alerts
ALLOW NOTIFICATIONS  
For Daily Alerts
 

SRH vs GT: ತಾಳ್ಮೆ ಕಳೆದುಕೊಂಡು ಉಗ್ರಾವತಾರ ತಾಳಿದ ಮುರಳೀಧರನ್: ಅಭಿಮಾನಿಗಳು ಶಾಕ್: ವಿಡಿಯೋ

SRH vs GT: Sunrisers Coach Muralitharan loses cool after Rashid hit back to back sixes

ಐಪಿಎಲ್ 15ನೇ ಆವೃತ್ತಿಯ ಅತ್ಯಂತ ರೋಚಕ ಪಂದ್ಯ ಬುಧವಾರ ರಾತ್ರಿ ನಡೆದಿದೆ. ಟೂರ್ನಿಯ ಎರಡು ಬಲಿಷ್ಠ ತಂಡಗಳಾಗಿರುವ ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಅಂತಿಮ ಎಸೆತದಲ್ಲಿ ಸಿಕ್ಸರ್ ಮೂಲಕ ಫಲಿತಾಂಶ ಹೊರಬಿತ್ತು. ರಶೀದ್ ಖಾನ್ ಅಂತಿಮ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ 3 ಸಿಕ್ಸರ್ ಬಾರಿಸುವ ಮೂಲಕ ರಶೀದ್ ಖಾನ್ ಗುಜರಾತ್ ಟೈಟನ್ಸ್ ತಂಡದ ಗೆಲುವಿಗೆ ಕಾರಣವಾದರು.

ಈ ಅಂತಿಮ ಓವರ್‌ನಲ್ಲಿ ರಶೀದ್ ಖಾನ್ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದರೆ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆ ಕಳೆದುಕೊಂಡು ಕಿರುಚಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸದಾ ಶಾಂತಚಿತ್ತದಿಂದ ಇರುವ ದಿಗ್ಗಜ ಕ್ರಿಕೆಟಿಗ ಮುರಳೀಧರನ್ ತಾಳ್ಮೆ ಕಳೆದುಕೊಂಡ ದೃಶ್ಯ ಅಭಿಮಾನಿಗಳಿಗೂ ಅಚ್ಚರಿಯುಂಟು ಮಾಡಿದೆ.

ಘಟನೆಗೆ ಕಾರಣವೇನು?

ಘಟನೆಗೆ ಕಾರಣವೇನು?

ಈ ಘಟನೆ ನಡೆದಿದ್ದು ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ರೋಚಕ ಪಂದ್ಯದ ಅಂತಿಮ ಓವರ್‌ನ ಸಂದರ್ಭದಲ್ಲಿ. ಈ ಓವರ್‌ನಲ್ಲಿ ಗುಜರಾತ್ ಟೈಟನ್ಸ್ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ರಾಹುಲ್ ತೆವಾಟಿಯಾ ಸ್ಟ್ರೈಕ್‌ನಲ್ಲಿದ್ದರೆ ಮತ್ತೊಂದು ತುದಿಯಲ್ಲಿ ರಶೀದ್ ಖಾನ್ ಇದ್ದರು. ಮಾರ್ಕೋ ಜಾನ್ಸನ್ ಎಸೆದ ಈ ಓವರ್‌ನ ಮೊದಲ ಎಸೆತವನ್ನು ರಾಹುಲ್ ತೆವಾಟಿಯಾ ಸಿಕ್ಸರ್‌ಗೆ ಅಟ್ಟಿದ್ದರು. ಅದಾದ ಮುಂದಿನ ಎಸೆತದಲ್ಲಿ ಒಂದು ರನ್ ಬಂದಿತ್ತು. ಹೀಗಾಗಿ ರಶೀದ್ ಖಾನ್ ಸ್ಟ್ರೈಕ್‌ಗೆ ಬಂದಿದ್ದರು. ಮೂರನೇ ಎಸೆತವನ್ನು ರಶೀದ್ ಖಾನ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದ್ದರು. ಮುಂದಿನ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಅಂತಿಮ ಎರಡು ಎಸೆತಗಳಲ್ಲಿ 9 ರನ್ ಗಳಿಸುವ ಸವಾಲು ಜಿಟಿ ಮುಂದಿತ್ತು. ಐದನೇ ಎಸೆತವನ್ನು ಕೂಡ ರಶೀದ್ ಖಾನ್ ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟಿದ್ದರು.

ಸಿಟ್ಟಿಗೆದ್ದ ಮುರಳೀಧರನ್

ರಶೀದ್ ಖಾನ್ ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುತ್ತಿದ್ದಂತೆಯೇ ಡಗೌಟ್‌ನಲ್ಲಿ ಕುಳಿತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಮಡದ ಕೋಚ್ ಮುತ್ತಯ್ಯ ಮುರಳೀಧರನ್ ಸಿಟ್ಟಿನಿಂದ ಎದ್ದು ಬೌಲಿಂಗ್ ನಡೆಸುತ್ತಿದ್ದ ಮಾರ್ಕೋ ಜಾನ್ಸನ್ ಮೇಲೆ ಕಿಡಿ ಕಾರಿದ್ದಾರೆ. ದಿಗ್ಗಜ ಕ್ರಿಕೆಟಿಗ ಈ ರೀತಿ ತಾಳ್ಮೆ ಕಳೆದುಕೊಂಡಿದ್ದು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

ರೋಚಕ ಗೆಲುವು ಸಾಧಿಸಿದ ಗುಜರಾತ್

ರೋಚಕ ಗೆಲುವು ಸಾಧಿಸಿದ ಗುಜರಾತ್

ಈ ಪಂದ್ಯದ ಕೊನೆಯ ಎಸೆತದಲ್ಲಿ ಗುಜರಾತ್ ಟೈಟನ್ಸ್ ಗೆಲುವಿಗೆ 3 ರನ್‌ಗಳ ಅಗತ್ಯವಿತ್ತು. ಓವರ್‌ನ ಅಂತಿಮ ಎಸೆತವನ್ನು ಕೂಡ ರಶೀದ್ ಖಾನ್ ಸಿಕ್ಸರ್‌ಗೆ ಅಟ್ಟುವ ಮೂಲಕ ಗಯಜರಾತ್ ಟೈಟನ್ಸ್ ತಂಡಕ್ಕೆ ರೋಚಕ ಗೆಲುವನ್ನು ತಂದಿತ್ತಿದ್ದಾರೆ. ಈ ಮೂಲಕ ಟೂರ್ನಿಯ ಮೊತ್ತಲ ಸುತ್ತೊನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಜಿಟಿ ಸೇಡು ತೀರಿಸಿಕೊಂಡಂತಾಗಿದೆ. ಈ ಮೂಲಕ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ.

ಪ್ಲೇಯಿಂಗ್ XI

ಪ್ಲೇಯಿಂಗ್ XI

ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ
ಬೆಂಚ್: ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ವರುಣ್ ಆರೋನ್, ಜಯಂತ್ ಯಾದವ್, ವಿಜಯ್ ಶಂಕರ್, ಗುರುಕೀರತ್ ಸಿಂಗ್ ಮಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ಸಾಯಿ ಸುದರ್ಶನ್, ನೂರ್ ಅಹ್ಮದ್

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್
ಬೆಂಚ್: ಜಗದೀಶ ಸುಚಿತ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಗ್ಲೆನ್ ಫಿಲಿಪ್ಸ್, ವಿಷ್ಣು ವಿನೋದ್, ಪ್ರಿಯಮ್ ಗಾರ್ಗ್, ಕಾರ್ತಿಕ್ ತ್ಯಾಗಿ, ರೊಮಾರಿಯೋ ಶೆಫರ್ಡ್, ಫಜಲ್ಹಕ್ ಫಾರೂಕಿ, ಅಬ್ದುಲ್ ಸಮದ್, ಸೌರಭ್ ದುಬೆ

Story first published: Thursday, April 28, 2022, 11:24 [IST]
Other articles published on Apr 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+