Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಕೆಆರ್‌ ಬ್ಯಾಟರ್‌ಗಳ ಆ ಒಂದು ತಪ್ಪು ನಿರ್ಧಾರ; ಕೈಜಾರಿದ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಆರನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ತವರಿನಲ್ಲಿ ಕೊಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್) ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡಕ್ಕೆ ಸವಾಲು ಎಸೆಯಲು ಸಜ್ಜಾಗಿತ್ತು. ಉಭಯ ತಂಡಗಳು ಈ ಲೀಗ್‌ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದ್ದವು.

ಕೆಕೆಆರ್‌ ನಾಯಕ ಟಾಸ್‌ ಗೆಲ್ಲುತ್ತಿದ್ದಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಎಸ್‌ಆರ್‌ಎಚ್‌ ಬ್ಯಾಟರ್‌ಗಳು ರಹಾನೆ ಅವರ ನಿರ್ಧಾರವನ್ನು ತಪ್ಪು ಎಂದು ಸಾಬೀತು ಮಾಡಿದರು. ಪವರ್‌ ಪ್ಲೇನಲ್ಲಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್‌ ಜೊಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿ ಕ್ಲಾಸೆನ್ ಅವರ ಬಾರಿಸಿದ ಅರ್ಧಶತಕದ ಬಲದಿಂದ ಎಸ್‌ಆರ್‌ಎಚ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 226 ರನ್‌ ಕಲೆ ಹಾಕಿತು.

SRH vs KKR

ಸವಾಲಿನ ಮೊತ್ತವನ್ನು ಬೆನ್ನಟುವಾಗ ರನ್‌ ವೇಗಕ್ಕೆ ಚುರುಕು ಮುಟ್ಟಿಸುತ್ತಾ ವಿಕೆಟ್‌ ಕಾಯ್ದುಕೊಳ್ಳುವುದು ಕೆಕೆಆರ್ ತಂಡಕ್ಕೆ ಸವಾಲಾಗಿತ್ತು. ಆದರೆ ಕೆಕೆಆರ್‌ ಆಟಗಾರರ ಗೊಂದಲ ಪಂದ್ಯದ ತಿರುವನ್ನೇ ಬದಲಿಸಿತು. ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಬ್ಯಾಟರ್‌ ಒತ್ತಡ ಮೆಟ್ಟಿನಿಲ್ಲುವಲ್ಲಿ ವಿಫಲರಾಗಿ ರನ್‌ಔಟ್ ಆದರು. ಸನ್‌ ತಂಡದ ಬೌಲರ್‌ಗಳು ಸಹ ಬಿಗುವಿನ ದಾಳಿ ನಡೆಸಿ ಕೆಕೆಆರ್ ಬ್ಯಾಟರ್‌ಗಳಿಗೆ ಕಾಡಿದರು. ಇದು ಗಾಯದ ಮೇಲೆ ಉಪ್ಪು ಸವರಿದಂತೆ ಆಯಿತು.

ಇದುವೇ ಟರ್ನಿಂಗ್‌ ಪಾಯಿಂಟ್

ಭರವಸೆಯ ಬ್ಯಾಟರ್‌ಗಳಾದ ಫಿನ್ ಅಲೆನ್, ಅಜಿಂಕ್ಯ ರಹಾನೆ ಅವರಂತಹ ಆಟಗಾರರು ಸಹ ಹೈದರಾಬಾದ್ ಬೌಲರ್‌ಗಳ ಸವಾಲು ಮೀರಿನಿಲ್ಲುವಲ್ಲಿ ವಿಫಲರಾದರು. ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 52 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆದರೆ ಒತ್ತಡಕ್ಕೆ ಒಳಗಾಗಿ ಇಲ್ಲದ ರನ್‌ ಕದಿಯಲು ಹೋಗಿ ಪೆವಿಲಿಯನ್ ಸೇರಿದರು. ಆಗ ಈಡನ್ ಗಾರ್ಡನ್‌ ಮೈದಾನ ಪಿನ್ ಡ್ರಾಪ್ ಸೈಲೆಂಟ್ ಆಯಿತು. 11ನೇ ಓವರ್‌ ಕೊನೆಯ ಎಸೆತದಲ್ಲಿ ಆದ ರನೌಟ್‌ ಕೆಕೆಆರ್‌ ಕ್ಯಾಂಪ್‌ನಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡಿದವು.

ರಿಂಕು ಸಿಂಗ್ ಅವರು ಬ್ಯಾಕ್‌ವರ್ಡ್‌ ಪಾಯಿಂಟ್‌ನತ್ತ ಚೆಂಡನ್ನು ತಳ್ಳಿದರು. ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಇಶಾನ್‌ ಮಲಿಂಗ್‌ ಅವರು ಚೆಂಡನ್ನು ಶಿವಂಗ್ ಕುಮಾರ್ ಎಸೆದರು. ನಾನ್‌ ಸ್ಟ್ರೈಕರ್‌ ಆಂಡ್‌ನಲ್ಲಿ ಅಂಗ್‌ಕ್ರಿಶ್ ರಘುವಂಶಿ ಸಿಂಗಲ್‌ ರನ್‌ ಕದಿಯಲು ಹೋದರು. ಆದರೆ ಶಿವಂಗ್‌ ಚೆಂಡನ್ನು ಹಿಡಿದು ರನೌಟ್ ಮಾಡಿದರು. ಇದುವೇ ಪಂದ್ಯವನ್ನು ಕೆಕೆಆರ್‌ ಕ್ಯಾಂಪ್‌ನಿಂದ ಜಯವನ್ನು ಸನ್‌ರೈಸರ್ಸ್‌ನತ್ತ ಶಿಫ್ಟ್ ಮಾಡಲು ಅನುವು ಮಾಡಿತು. ನಂತರ ಬಂದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಕೆಕೆಆರ್‌ 16 ಓವರ್‌ಗಳಲ್ಲಿ 161 ರನ್‌ ಸೇರಿಸಿತು.

ನಿತೀಶ್‌ ಶೈನ್

ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ ಬ್ಯಾಟಿಂಗ್‌ನಲ್ಲಿ 39 ರನ್‌ ಸಿಡಿಸಿ ಬ್ಯಾಟಿಂಗ್‌ಗೆ ಆಧಾರವಾದರು. ಅಲ್ಲದೆ ಬೌಲಿಂಗ್‌ನಲ್ಲೂ ಸಹ ಅನುಕೂಲ್ ರಾಯ್‌, ರಿಂಕು ಸಿಂಗ್ ಅವರ ವಿಕೆಟ್‌ ಪಡೆದು ಬೀಗಿದರು.

Story first published: Friday, April 3, 2026, 5:50 [IST]
Other articles published on Apr 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+