Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs KKR: ಕ್ಲಾಸೆನ್‌ ಅರ್ಧಶತಕದ ಸೊಬಗು: ಕೆಕೆಆರ್‌ಗೆ 230 ರನ್‌ ಗುರಿ ನೀಡಿದ ಸನ್‌ರೈಸರ್ಸ್

ಕೋಲ್ಕತ್ತ: ಭರವಸೆಯ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಬಾರಿಸಿದ ಭರ್ಜರಿ ಅರ್ಧಶತಕದ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡ 19ನೇ ಆವೃತ್ತಿಯ ಐಪಿಎಲ್‌ನ 6ನೇ ಪಂದ್ಯದಲ್ಲಿ 227 ರನ್‌ಗಳ ಗುರಿಯನ್ನು ಕೊಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್‌) ತಂಡಕ್ಕೆ ನೀಡಿದೆ.

ಕೆಕೆಆರ್‌ ವಿರುದ್ಧ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಲಭಿಸಿತು. ಇನಿಂಗ್ಸ್‌ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್‌ ಜೋಡಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿತು. ಈ ಜೋಡಿ ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ಅಬ್ಬರಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 34 ಎಸೆತಗಳಲ್ಲಿ 82 ರನ್‌ ಸೇರಿಸಿತು.

SRH vs KKR

ಸ್ಫೋಟಕ ಬ್ಯಾಟರ್‌ ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 46 ರನ್‌ ಬಾರಿಸಿ ಮಿಂಚಿದರು. ಇನ್ನೊಬ್ಬ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 228ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದರು. ಇವರು 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 48 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಹಂಗಾಮಿ ನಾಯಕ ಇಶಾನ್ ಕಿಶನ್ 3 ಬೌಂಡರಿ ನೆರವಿನಿಂದ 14 ರನ್‌ ಸಿಡಿಸಿ ಔಟ್ ಆದರು. ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅನಿಕೇತ್ ವರ್ಮಾ (1) ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಈ ಹಂತದಲ್ಲಿ ಎಸ್‌ಆರ್‌ಎಚ್‌ 9.2 ಓವರ್‌ಗಳಲ್ಲಿ 118 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

5ನೇ ವಿಕೆಟ್‌ಗೆ 82 ರನ್‌ ಜೊತೆಯಾಟ

ಈ ಹಂತದಲ್ಲಿ ತಂಡಕ್ಕೆ ಆಧಾರವಾಗಿದ್ದು ಭರವಸೆಯ ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್‌ ಜೋಡಿ ಆಧಾರವಾಯಿತು. ಈ ಜೋಡಿ ಮಿಡ್ಲ್‌ ಓವರ್‌ನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಅಲ್ಲದೆ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಪರಿಣಾಮ ಎಸ್‌ಆರ್‌ಎಚ್‌ ತಂಡ ದೊಡ್ಡ ಮೊತ್ತದ ಕನಸು ಕಾಣಲು ನೆರವಾಯಿತು. ಈ ಜೋಡಿ 53 ಎಸೆತಗಳಲ್ಲಿ 82 ರನ್‌ ಸೇರಿಸಿತು. ಈ ಹಂತದಲ್ಲಿ ನಿತೀಶ್‌ ಕುಮಾರ್ ರೆಡ್ಡಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 39 ರನ್‌ ಬಾರಿಸಿ ಔಟ್ ಆದರು.

SRH vs KKR

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್‌ ಅಬ್ಬರಿಸಿದರು. ಇವರು 4 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 52 ರನ್‌ ಬಾರಿಸಿ ಮಿಂಚಿದರು. ಅಂತಿಮವಾಗಿ ಸನ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 226 ರನ್‌ ಸೇರಿಸಿತು. ಕೆಕೆಅರ್ ತಂಡದ ಪರ ಬ್ಲೆಸ್ಸಿಂಗ್ ಮುಜರಬಾನಿ ಅವರು 4 ವಿಕೆಟ್‌ ಪಡೆದರೆ, ವೈಭವ್ ಆರೋರ 2, ಕಾರ್ತಿಕ್ ತ್ಯಾಗಿ, ಅನುಕೂಲ್ ರಾಯ್‌ ತಲಾ ಒಂದು ವಿಕೆಟ್‌ ಪಡೆದರು.

Story first published: Thursday, April 2, 2026, 21:25 [IST]
Other articles published on Apr 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+