ಬುಧವಾರ ನಡೆದ 17ನೇ ಆವೃತ್ತಿಯ ಐಪಿಎಲ್‌ನ ಪಂದ್ಯ ಇತಿಹಾಸದ ಪುಟ ಸೇರಿದೆ. ಐಪಿಎಲ್ ಇತಿಹಾಸದಲ್ಲಿ ಒಂದು ತಂಡ ಗರಿಷ್ಠ ರನ್ ಕಲೆ ಹಾಕಿದ ಕೀರ್ತಿಗೆ ಎಸ್‌ಆರ್‌ಎಚ್ ಪಾತ್ರವಾಗಿದೆ. ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಸನ್ ಅಬ್ಬರಿಸಿದೆ. ಈ ಮೂಲಕ ಮುತ್ತಿನ ನಗರಿಯಲ್ಲಿ ಮುತ್ತಿನಂತ ಇನ್ನಿಂಗ್ಸ್ ಆಡಿದೆ.
ಮುಂಬೈ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ನಿರ್ಧಾರವನ್ನು ತಪ್ಪು ಎಂದು ಸನ್ ತಂಡದ ಬ್ಯಾಟರ್‌ಗಳು ಸಾಬೀತು ಮಾಡಿದರು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ಮುಂಬೈ ಕನಸಿನಲ್ಲೂ ಊಹಿಸಿದ ಮೊತ್ತವನ್ನು ನೀಡಿತು. ಐಪಿಎಲ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆಯನ್ನು ಎಸ್‌ಆರ್‌ಎಚ್ ಮಾಡಿ ಬೀಗಿತು. ಈ ಮೂಲಕ ಸುಮಾರು 11 ವರ್ಷಗಳಿಂದ ಆರ್‌ಸಿಬಿ ಹೆಸರಿನಲ್ಲಿದ್ದ ಗರಿಷ್ಠ ರನ್ ದಾಖಲೆ ಉಡೀಸ್ ಆಯಿತು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎಸ್‌ಆರ್‌ಎಚ್ ಹಾಗೂ ಎಂಐ ನಡುವಣ ಪಂದ್ಯ ಸ್ಥಾನ ಪಡೆದಿದೆ. ಈ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ದಾಖಲಾದವು. ಈ ಮೂಲಕ 2013ರಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ನಡೆದ ಪಂದ್ಯದಲ್ಲಿ ದಾಖಲಾಗಿದ್ದ 33 ಸಿಕ್ಸರ್‌ಗಳ ದಾಖಲೆಯನ್ನು ಮೀರಿ ನಿಂತಿತು. ಉಳಿದಂತೆ ನಿನ್ನೆಯ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿ ಇಲ್ಲಿದೆ.
ಪುರುಷರ ಟಿ20 ಕ್ರಿಕೆಟ್‌ನಲ್ಲಿ ಒಂದೇ ಪಂದ್ಯದಲ್ಲಿ ದಾಖಲಾದ ಅಧಿಕ ಮೊತ್ತ
523- ಎಸ್‌ಆರ್‌ಎಚ್ ವಿರುದ್ಧ ಎಂಐ, ಹೈದರಾಬಾದ್, ಐಪಿಎಲ್ 2024
517- ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್, ಸೆಂಚೂರಿಯನ್, 2023
515- ಕ್ಯೂಜಿ ವಿರುದ್ಧ ಎಂಎಸ್, ರಾವಲ್ಪಿಂಡಿ, ಪಿಎಸ್‌ಎಲ್ 2023
506, ಸರ್ರೆ ವಿರುದ್ಧ ಮಿಡ್ಲಎಕ್ಸ್, ದಿ ಓಲ್, ಟಿ20 ಬ್ಲಾಸ್ಟ್ 2023
501, ಟೈಟನ್ಸ್ ವಿರುದ್ಧ ನೈಟ್ಸ್, ಪಾಚೆಫ್‌ಸ್ಟ್ರೂಮ್, ಸಿಎಸ್‌ಎ ಟಿ20 ಚಾಲೆಂಜ್ 2022
ಐಪಿಎಲ್ ಒಂದೇ ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತ
523-ಎಸ್‌ಆರ್‌ಎಚ್ ವಿರುದ್ಧ ಎಂಐ, ಹೈದರಾಬಾದ್, 2024
469- ಸಿಎಸ್‌ಕೆ ವಿರುದ್ಧ ಆರ್‌ಆರ್, ಚೆನ್ನೈ, 2010
459- ಪಿಬಿಕೆಎಸ್ ವಿರುದ್ಧ ಕೆಕೆಆರ್, ಇಂದೋರ್, 2018
458- ಪಿಬಿಕೆಎಸ್ ವಿರುದ್ಧ ಎಲ್ಎಸ್‌ಜಿ, ಮೋಹಾಲಿ, 2023
453- ಎಂಐ ವಿರುದ್ಧ ಪಿಬಿಕೆಎಸ್, ಮುಂಬೈ, 2017

ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್
277/3- ಎಸ್‌ಆರ್‌ಎಚ್ ವಿರುದ್ಧ ಎಂಐ, ಹೈದರಾಬಾದ್, 2024
263/5- ಆರ್‌ಸಿಬಿ ವಿರುದ್ಧ ಪುಣೆ, ಬೆಂಗಳೂರು, 2013
257/5- ಎಲ್‌ಎಸ್‌ಜಿ ವಿರುದ್ಧ ಪಿಬಿಕೆಎಸ್, ಮೋಹಾಲಿ, 2023
248/3- ಆರ್‌ಸಿಬಿ ವಿರುದ್ಧ ಲಯನ್ಸ್, ಬೆಂಗಳೂರು, 2016
246/5- ಸಿಎಸ್‌ಕೆ ವಿರುದ್ಧ ಆರ್‌ಆರ್, ಚೆನ್ನೈ 2010
246/5- ಎಂಐ ವಿರುದ್ಧ ಎಸ್‌ಆರ್‌ಎಚ್, ಹೈದರಾಬಾದ್, 2024
ಐಪಿಎಲ್ ಎರಡನೇ ಇನ್ನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ
246/5- ಎಸ್‌ಆರ್‌ಎಚ್ ವಿರುದ್ಧ ಎಂಐ, ಹೈದರಾಬಾದ್, 2024
226/6- ಆರ್‌ಆರ್ ವಿರುದ್ಧ ಪಿಬಿಕೆಸ್, ಶಾರ್ಜಾ, 2020
223/5- ಆರ್‌ಆರ್ ವಿರುದ್ಧ ಸಿಎಸ್‌ಕೆ, ಚೆನ್ನೈ, 2010
223/6- ಎಂಐ ವಿರುದ್ಧ ಪಿಬಿಕೆಎಸ್, ಮುಂಬೈ, 2017
219/6- ಎಂಐ ವಿರುದ್ಧ ಸಿಎಸ್‌ಕೆ, ಡೆಲ್ಲಿ, 2021

ಐಪಿಎಲ್‌ನಲ್ಲಿ ದಾಖಲಾದ ಅತಿ ಹೆಚ್ಚು ಬೌಂಡರಿ (4 ಹಾಗೂ 6)
69- ಸಿಎಸ್‌ಕೆ ವಿರದ್ಧ ಆರ್‌ಆರ್, ಚೆನ್ನೈ, 2010
69- ಎಸ್‌ಆರ್‌ಎಚ್ ವಿರುದ್ಧ ಎಂಐ, ಹೈದರಾಬಾದ್, 2024,
67- ಪಿಬಿಕೆಎಸ್ ವಿರುದ್ಧ ಎಲ್‌ಎಸ್‌ಜಿ, ಲಖ್ನೋ, 2023
67- ಪಿಬಿಕೆಎಸ್ ವಿರುದ್ಧ ಕೆಕೆಆರ್, ಇಂದೋರ್, 2018
65- ಡೆಕ್ಕನ್ ವಿರುದ್ಧ ಆರ್‌ಆರ್, ಹೈದರಾಬಾದ್, 2008